ಮುಂಬೈ : ನೇಣುಬಿಗಿದ ಸ್ಥಿತಿಯಲ್ಲಿ ಮುಂಬೈನ ಹೋಟೆಲ್ ನಲ್ಲಿ ಮಾಡೆಲ್ ಶವ ಪತ್ತೆಯಾಗಿದೆ.
ಮುಂಬೈನ ಅಂಧೇರಿ ಪ್ರದೇಶದ ಹೋಟೆಲ್ ಕೋಣೆಯಲ್ಲಿ ಗುರುವಾರ 40 ವರ್ಷದ ರೂಪದರ್ಶಿಯ ಶವವು ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಮಾಡೆಲ್ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಹೋಟೆಲ್ ಗೆ ಬಂದಿದ್ದರು ಎನ್ನಲಾಗಿದೆ.
ಗುರುವಾರ, ಹೌಸ್ ಕೀಪಿಂಗ್ ಸಿಬ್ಬಂದಿಯಿಂದ ಪದೇ ಪದೇ ಬಾಗಿಲು ತಟ್ಟಿದರೂ ಬಾಗಿಲು ತೆರೆಯಲಿಲ್ಲ. ಇದರಿಂದ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಹೋಟೆಲ್ ತಲುಪಿದ ಪೊಲೀಸರು ಮಾಸ್ಟರ್ ಕೀಯೊಂದಿಗೆ ಕೊಠಡಿಯನ್ನು ತೆರೆದಾಗ, ರೂಪದರ್ಶಿಯ ದೇಹವು ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದ್ದು, , “ನನ್ನನ್ನು ಕ್ಷಮಿಸಿ. ಇದಕ್ಕೆ ಯಾರೂ ಜವಾಬ್ದಾರರಲ್ಲ. ನಾನು ಸಂತೋಷವಾಗಿಲ್ಲ. ನನಗೆ ಶಾಂತಿ ಬೇಕು ಅಷ್ಟೆ. ” ಎಂದು ಡೆತ್ ನೋಟ್ ನಲ್ಲಿ ಮಾಡೆಲ್ ಉಲ್ಲೇಖಿಸಿದ್ದಾರೆ.
ವರ್ಸೋವಾ ಪೊಲೀಸರು ಎಡಿಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತನಿಖೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
BIGG NEWS : ರಾಜ್ಯ ಹೈಕೋರ್ಟ್ ಗೆ ಅ. 3 ರಿಂದ ಐದು ದಿನ ದಸರಾ ರಜೆ : ರಜಾಕಾಲದ ಪೀಠದಿಂದ ಕಾರ್ಯ ನಿರ್ವಹಣೆ
BIGG NEWS : ‘ಭಾರತ್ ಜೋಡೋ ಯಾತ್ರೆ’ ಎಂಟ್ರಿ ಹೊತ್ತಲ್ಲೇ ಗುಂಡ್ಲುಪೇಟೆಯಲ್ಲಿ ‘ಲೋಕಾಯುಕ್ತ ರೈಡ್’