Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಯುವಕನ ಖಾಸಗಿ ಅಂಗದಲ್ಲಿ `ಸೋರೆಕಾಯಿ’ : `ಎಕ್ಸ್ ರೇ’ ನೋಡಿ ವೈದ್ಯರೇ ಶಾಕ್ !

17/02/2026 8:08 AM

ಪರೀಕ್ಷೆಗಿಂತ ‘ಪಿಚ್’ ಮುಖ್ಯ: 10ನೇ ತರಗತಿ ಬೋರ್ಡ್ ಎಕ್ಸಾಮ್ ಕೈಬಿಟ್ಟು IPL ಅಂಗಳಕ್ಕೆ ಜಿಗಿದ ವೈಭವ್ ಸೂರ್ಯವಂಶಿ!

17/02/2026 8:07 AM

ಈ ಪುಡಿಯ ಒಂದೇ ಚಮಚದಿಂದ `ಶುಗರ್,ಬಿಪಿ’ ಎಲ್ಲವೂ ಕಂಟ್ರೋಲ್ ಮಾಡಬಹುದು !

17/02/2026 7:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯ ಕಾರ್ಯಗತಕ್ಕೆ ಸಭೆ ಕರೆಯಲು ಸಿಎಂ, ಡಿಸಿಎಂಗೆ MLC ದಿನೇಶ್ ಗೂಳಿಗೌಡ ಪತ್ರ
KARNATAKA

87ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯ ಕಾರ್ಯಗತಕ್ಕೆ ಸಭೆ ಕರೆಯಲು ಸಿಎಂ, ಡಿಸಿಎಂಗೆ MLC ದಿನೇಶ್ ಗೂಳಿಗೌಡ ಪತ್ರ

By kannadanewsnow0901/11/2025 7:14 PM

ಬೆಂಗಳೂರು: 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯ ಕಾರ್ಯಗತಕ್ಕೆ ಸಭೆ ಕರೆಯಲು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಇವರಾಜ್ ತಂಗಡಗಿಗೆ MLC ದಿನೇಶ್ ಗೂಳಿಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತಂತೆ ಪತ್ರ ಬರೆದಿರುವಂತ ಅವರು, ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಡ್ಯದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಆರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಈ ಎಲ್ಲ ವಿಷಯಗಳನ್ನು ಅನುಮೋದಿಸಿ, ಅವುಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕಿದ್ದು, ಈ ನಿಟ್ಟಿನಲ್ಲಿ ಸಭೆ ಕರೆದು ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.

ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕೆಳಕಂಡ ಪ್ರಮುಖ ನಿರ್ಣಯಗಳನ್ನು ತಕ್ಷಣ ಕಾರ್ಯಗತಗೊಳಿಸುವ ಸಂಬಂಧ  ತಕ್ಷಣ ತಮ್ಮ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಎಲ್ಲರನ್ನು ಆಹ್ವಾನಿಸಲು ಮನವಿ ಮಾಡಿದ್ದಾರೆ.

ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರ ಸಮ್ಮುಖದಲ್ಲಿ ಕೈಗೊಂಡಿದ್ದ ಪ್ರಮುಖ ನಿರ್ಣಯಗಳು

  1. ಕನ್ನಡ ಭಾಷಾ ಅಭಿವೃದ್ಧಿ ಅಧಿನಿಯಮ-2022 ಅನ್ನು ರಾಜ್ಯದಲ್ಲಿ ಸಮಗ್ರವಾಗಿ ಜಾರಿಗೆ ತರಲು ಒತ್ತಾಯಿಸುವುದು.
  2. ಸರ್ಕಾರಿ ಕನ್ನಡ ಶಾಲೆಗಳ ಸುಧಾರಣೆ: ಸರ್ಕಾರಿ ಕನ್ನಡ ಶಾಲೆಗಳಿಗೆ ಕಟ್ಟಡ, ವಾಚನಾಲಯ ಸೇರಿ ಮೂಲಸೌಕರ್ಯಗಳನ್ನು ಕಲ್ಪಿಸಬೇಕು.
  3. ಶಿಕ್ಷಕರ ಹುದ್ದೆ ಭರ್ತಿ: ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು.
  4. ಸರೋಜಿನಿ ಮಹಿಷಿ ವರದಿ ಅನುಷ್ಠಾನ: ಸರೋಜಿನಿ ಮಹಿಷಿ ವರದಿಯನ್ನು ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸುವುದು. ಜೊತೆಗೆ, ಕನ್ನಡಿಗರ ಉದ್ಯೋಗಕ್ಕೆ ತಡೆಯಾಗಿ ನ್ಯಾಯಾಲಯದಲ್ಲಿ ಬಾಕಿಯಿರುವ ಕೇಸ್‌ಗಳನ್ನು ಸರ್ಕಾರ ಎದುರಿಸುವುದು.
  5. ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಧಾರವಾಡದಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಅತಿ ಶೀಘ್ರದಲ್ಲಿ ನಡೆಸಬೇಕು.
  6. ರಾಷ್ಟ್ರಕವಿ ಪ್ರಶಸ್ತಿ ಘೋಷಣೆ: ರಾಷ್ಟ್ರಕವಿ ಪ್ರಶಸ್ತಿಯನ್ನು ಘೋಷಿಸಬೇಕು.

ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ವಿಷಯಗಳ ಗಂಭೀರತೆಯನ್ನು ಅರಿತು ಈ ಪ್ರಮುಖ ನಿರ್ಣಯಗಳ ಕುರಿತು ಚರ್ಚಿಸಲು ತಕ್ಷಣವೇ ಒಂದು ಸಭೆಯನ್ನು ಆಯೋಜಿಸುವುದರ ಜೊತೆಗೆ ಅವುಗಳನ್ನು ಶೀಘ್ರವಾಗಿ ಕಾರ್ಯಗತಗೊಳಿಸಲು ಆದೇಶ ನೀಡುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕೋರಿದ್ದಾರೆ.

BIG NEWS : ಕರ್ನಾಟಕದ ಮದರಸಾಗಳಲ್ಲಿ `ಕನ್ನಡ’ ಕಲಿಸಲು ಆದ್ಯತೆ : CM ಘೋಷಣೆ

BIG NEWS: ದಲಿತನಾಗಿ ಹುಟ್ಟಿದ್ದೇ ತಪ್ಪಾ?: ರಾಜ್ಯದಲ್ಲಿ ಹಿರಿಯ ಅಧಿಕಾರಿ ನಿಂದಿಸಿದ್ದಕ್ಕೆ ಸ್ವಯಂ ನಿವೃತ್ತಿಗೆ ಮುಂದಾದ ಶಿರಸ್ತೇದಾರ್

Share. Facebook Twitter LinkedIn WhatsApp Email

Related Posts

ಈ ಪುಡಿಯ ಒಂದೇ ಚಮಚದಿಂದ `ಶುಗರ್,ಬಿಪಿ’ ಎಲ್ಲವೂ ಕಂಟ್ರೋಲ್ ಮಾಡಬಹುದು !

17/02/2026 7:53 AM2 Mins Read

BREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ : ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಪಾಪಿ ಪುತ್ರರು !

17/02/2026 7:40 AM1 Min Read

ಈ ಎಲೆಗಳನ್ನು ಕಡಿಮೆ ಅಂದಾಜು ಮಾಡಬೇಡಿ : ಇವು ಮಧುಮೇಹ ಸೇರಿ ಹಲವು ಸಮಸ್ಯೆಗಳಿಗೆ ರಾಮಬಾಣ !

17/02/2026 7:25 AM1 Min Read
Recent News

SHOCKING : ಯುವಕನ ಖಾಸಗಿ ಅಂಗದಲ್ಲಿ `ಸೋರೆಕಾಯಿ’ : `ಎಕ್ಸ್ ರೇ’ ನೋಡಿ ವೈದ್ಯರೇ ಶಾಕ್ !

17/02/2026 8:08 AM

ಪರೀಕ್ಷೆಗಿಂತ ‘ಪಿಚ್’ ಮುಖ್ಯ: 10ನೇ ತರಗತಿ ಬೋರ್ಡ್ ಎಕ್ಸಾಮ್ ಕೈಬಿಟ್ಟು IPL ಅಂಗಳಕ್ಕೆ ಜಿಗಿದ ವೈಭವ್ ಸೂರ್ಯವಂಶಿ!

17/02/2026 8:07 AM

ಈ ಪುಡಿಯ ಒಂದೇ ಚಮಚದಿಂದ `ಶುಗರ್,ಬಿಪಿ’ ಎಲ್ಲವೂ ಕಂಟ್ರೋಲ್ ಮಾಡಬಹುದು !

17/02/2026 7:53 AM

‘ಮುಂದಿನ ವಾರ ಪ್ರಧಾನಿ ಮೋದಿ ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ’: ಬೆಂಜಮಿನ್ ನೆತನ್ಯಾಹು

17/02/2026 7:42 AM
State News
KARNATAKA

ಈ ಪುಡಿಯ ಒಂದೇ ಚಮಚದಿಂದ `ಶುಗರ್,ಬಿಪಿ’ ಎಲ್ಲವೂ ಕಂಟ್ರೋಲ್ ಮಾಡಬಹುದು !

By kannadanewsnow5717/02/2026 7:53 AM KARNATAKA 2 Mins Read

ಮೆಂತ್ಯದಲ್ಲಿ ಕ್ಯಾರೆಟ್’ಗಿಂತ ಹೆಚ್ಚಿನ ವಿಟಮಿನ್ ಎ ಮತ್ತು ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಇದೆ. ಈ ಸೂಪರ್‌ಫುಡ್ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ…

BREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ : ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಪಾಪಿ ಪುತ್ರರು !

17/02/2026 7:40 AM

ಈ ಎಲೆಗಳನ್ನು ಕಡಿಮೆ ಅಂದಾಜು ಮಾಡಬೇಡಿ : ಇವು ಮಧುಮೇಹ ಸೇರಿ ಹಲವು ಸಮಸ್ಯೆಗಳಿಗೆ ರಾಮಬಾಣ !

17/02/2026 7:25 AM

ಕೀಲು ನೋವು, ಬೆನ್ನು ನೋವು? ವಾರದಲ್ಲಿ 2 ದಿನ ಇದನ್ನು ಸೇವಿಸಿದ್ರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ !

17/02/2026 7:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.