Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

IPL 2026: ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಕ್ರಿಸ್ ಗೇಲ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ!

ಬೆಂಗಳೂರು ನಗರಕ್ಕೆ ಆಧುನಿಕ ಸ್ಪರ್ಶ ನೀಡಿದ್ದು ಮಾಜಿ ಸಿಎಂ ಎಸ್.ಎಂ.ಕೃಷ್ಣ: ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ

​ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ: ಜಾಮೀನಿನ ಸಂಭ್ರಮದಲ್ಲಿ ಆರೋಪಿಯ ಕುಟುಂಬ; ಮೃತರ ಪೋಷಕರ ಆಕ್ರೋಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೂಡಲೇ ‘ಅಂಗನವಾಡಿ ಕಾರ್ಯಕರ್ತೆ’ರಿಗೆ ಗೌರವಧನ ಪಾವತಿಸಿ: ‘MLC ಛಲವಾದಿ ನಾರಾಯಣಸ್ವಾಮಿ’ ಆಗ್ರಹ
KARNATAKA

ಕೂಡಲೇ ‘ಅಂಗನವಾಡಿ ಕಾರ್ಯಕರ್ತೆ’ರಿಗೆ ಗೌರವಧನ ಪಾವತಿಸಿ: ‘MLC ಛಲವಾದಿ ನಾರಾಯಣಸ್ವಾಮಿ’ ಆಗ್ರಹ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ನಾಲ್ಕು ತಿಂಗಳಿನಿಂದ ಗೌರವಧನ ಪಾವತಿಯಾಗಿಲ್ಲ ಎಂಬುದಾಗಿ ಸುದ್ದಿ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ಅವರಿಗೆ ಕೂಡಲೇ ಗೌರವಧನ ಪಾವತಿ ಮಾಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಪತ್ರ ಬರೆದು ಬಿಜೆಪಿಯ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪತ್ರ ಬರೆದಿರುವಂತ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ನಾಲ್ಕು ತಿಂಗಳನಿಂದ ಗೌರವ ಧನ ಪಾವತಿಯಾಗದೇ ಇರುವ ವಿಷಯವು ವಾರ್ತಾ ಮತ್ತು ಪತ್ರಿಕಾ ಮಾಧ್ಯಮದಲ್ಲಿ ಪ್ರಸಾರವಾಗಿರುವುದು ನನ್ನ ಗಮನಕ್ಕೆ ಬಂದಿದ್ದು, ಇದೊಂದು ವಿಷಾದನೀಯ ಸಂಗತಿಯಾಗಿದೆ. ಪುಟ್ಟ ಮಕ್ಕಳನ್ನು ಪಾಲನೆ ಮಾಡುತ್ತಾ ಅವರಿಗೆ ವಿದ್ಯೆಯನ್ನು ಕಲಿಸುವ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಕೂಲಿ ಕೆಲಸ ಮಾಡಿಕೊಂಡು ಬದುಕು ದೂಡುವಂತಾಗಿರುವುದು ಮಾತ್ರ ವಿಪರ್ಯಾಸವೇ ಸರಿ ಎಂದಿದ್ದಾರೆ.

ಗೌರವಧನವನ್ನೇ ನಂಬಿಕೊಂಡು ಜೀವನ ಮಾಡುತ್ತಾ ಬಂದಿರುವ ಇವರಿಗೆ ಕಳೆದ ನಾಲ್ಕು ತಿಂಗಳಿನಿಂದ ಸರ್ಕಾರ ಗೌರವಧನ ನೀಡದೇ ಇವರ ಕುಟುಂಬ ನಿರ್ವಹಣೆಯು ತುಂಬಾ ಕಷ್ಟಕರವಾಗಿದ್ದು. ಮಕ್ಕಳ ಲಾಲನೆ ಪಾಲನೆ, ಮನೆಯ ಬಾಡಿಗೆ, ಜೊತೆಗೆ ವಿವಿಧ ಕಾರಣಗಳಿಗೆ ಬ್ಯಾಂಕುಗಳಿಂದ ಪಡೆದ ಸಾಲ, ಮನೆಯ ಖರ್ಚು ವೆಚ್ಚಗಳನ್ನು ಸರ್ಕಾರ ನೀಡುವ ಗೌರವಧನದಲ್ಲಿಯೇ ನಿಭಾಯಿಸುವಂತಹ ಪರಿಸ್ಥಿತಿ ಇವರಿಗಿದೆ. ಸರ್ಕಾರವು ಸರಿಯಾದ ಸಮಯದಲ್ಲಿ ಇವರಿಗೆ ಗೌರವಧನವನ್ನು ಪಾವತಿಸದೇ. ಹೊಟ್ಟೆಗೆ ಹಿಟ್ಟಿಲ್ಲ ಎನ್ನುವಂತ ಸ್ಥಿತಿಯನ್ನು ನಿರ್ಮಾಣ ಮಾಡಿಕೊಟ್ಟಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೊಡಗು ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರಿಗೆ ನಾಲ್ಕು ತಿಂಗಳಿನಿಂದ ಗೌರವಧನ ಪಾವತಿಯಾಗದೇ ಇರುವ ಕಾರಣ ಅನಿವಾರ್ಯವಾಗಿ ಕೂಲಿ ಕೆಲಸ ಮಾಡದೆ ಬೇರೆ ದಾರಿಯಿಲ್ಲದ ದುಸ್ಥಿತಿ ಎದುರಾಗಿದೆ ಹಾಗೂ ಭಾನುವಾರ ಮತ್ತು ಇತರೆ ರಜೆ ದಿನಗಳಂದು ಕಾಫಿ ತೋಟಗಳಿಗೆ ಹೋಗಿ ಕೂಲಿ ಕೆಸ ಮಾಡಿ ಬದುಕು ದೂಡುತ್ತಿದ್ದಾರೆ ಎಂಬ ವಿಷಯವು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗಿರುತ್ತದೆ ಎಂದು ಹೇಳಿದ್ದಾರೆ.

ಅಂಗನವಾಡಿ, ಸಹಾಯಕಿಯರಿಗೆ ಇಂತಹ ದುಸ್ಥಿತಿ ಎದುರಾಗಿರುವುದನ್ನು… ನೋಡಿದರೇ.. ಅಂಗನವಾಡಿ ನೌಕರರಿಗೆ ಗೌರವ ಧನವನ್ನು ನೀಡವುದಕ್ಕೂ ಸಾಧ್ಯವಿಲ್ಲದಂತಹ ದುಸ್ಥಿತಿ ಸರ್ಕಾರಕ್ಕೇ ಬಂದೊದಗಿದೆಯೇ ಎನ್ನುವಂತಹ ದೊಡ್ಡ ಸಂಶಯ ಎದುರಾದಂತಿದೆ. ರಾಜ್ಯದ ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ಪಾವತಿಯಲ್ಲಿ ವಿಳಂಬವಾಗುತ್ತಿರುವ ಸಮಸ್ಯೆಯನ್ನು ತಮ್ಮ ಗಮನಕ್ಕೆ ತರಬಯಸುತ್ತಾ, ಆದಷ್ಟು ಶೀಘ್ರವಾಗಿ ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹ ಪೂರ್ವಕವಾಗಿ ಕೋರಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್ | Arvind Kejriwal

ಭಾಗ್ಯಲಕ್ಷ್ಮಿ ಯೋಜನೆಯ ‘ಸೀರೆ ವಿತರಣೆ’ಯಲ್ಲಿ ಅಕ್ರಮ: ‘SIT ತನಿಕೆ’ಗೆ ಕೋರಿ ಸಿಎಂಗೆ ‘ರಮೇಶ್ ಬಾಬು’ ಪತ್ರ

Share. Facebook Twitter LinkedIn WhatsApp Email

Related Posts

ಬೆಂಗಳೂರು ನಗರಕ್ಕೆ ಆಧುನಿಕ ಸ್ಪರ್ಶ ನೀಡಿದ್ದು ಮಾಜಿ ಸಿಎಂ ಎಸ್.ಎಂ.ಕೃಷ್ಣ: ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ

3 Mins Read

ಸಾಗರದಲ್ಲಿ ರಸಗೊಬ್ಬರ, ಇಂಧನ ಬೆಲೆ ಏರಿಕೆ ವಿರುದ್ಧ ರೈತರ ಆಕ್ರೋಶ: ಬಿಕ್ಕಟ್ಟು ಬಗೆಹರಿಸಲು ಎಸಿ ಮೂಲಕ ಸರ್ಕಾರಕ್ಕೆ ಮನವಿ

2 Mins Read

BIG NEWS: ‘ಪ್ಲೀಸ್ ಹೋಗ್ಬೇಡಿ ಸರ್’ ವಿಧಾನಸೌಧದಲ್ಲಿ ಕಣ್ಣೀರಿಟ್ಟ ಸಿಎಂ ಕಚೇರಿ ಸಿಬ್ಬಂದಿಗಳು: ಕೈಸನ್ನೆಯಲ್ಲೇ ಸಂತೈಸಿದ ಸಿದ್ದರಾಮಯ್ಯ

2 Mins Read
Recent News

IPL 2026: ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಕ್ರಿಸ್ ಗೇಲ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ!

ಬೆಂಗಳೂರು ನಗರಕ್ಕೆ ಆಧುನಿಕ ಸ್ಪರ್ಶ ನೀಡಿದ್ದು ಮಾಜಿ ಸಿಎಂ ಎಸ್.ಎಂ.ಕೃಷ್ಣ: ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ

​ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ: ಜಾಮೀನಿನ ಸಂಭ್ರಮದಲ್ಲಿ ಆರೋಪಿಯ ಕುಟುಂಬ; ಮೃತರ ಪೋಷಕರ ಆಕ್ರೋಶ

​MGNREGS ನಿಂದ ‘ವಿಬಿ-ಜಿ ರಾಮ್ ಜಿ’ ಯೋಜನೆಗೆ ಬದಲಾವಣೆ: ಜುಲೈ 1ರಿಂದ ಜಾರಿಗೆ ಬರುವ ಹೊಸ ನಿಯಮಗಳೇನು?

State News
KARNATAKA

ಬೆಂಗಳೂರು ನಗರಕ್ಕೆ ಆಧುನಿಕ ಸ್ಪರ್ಶ ನೀಡಿದ್ದು ಮಾಜಿ ಸಿಎಂ ಎಸ್.ಎಂ.ಕೃಷ್ಣ: ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ

By ವಸಂತ ಬಿ ಈಶ್ವರಗೆರೆ KARNATAKA 3 Mins Read

ಮಂಡ್ಯ : ನಾಡಪ್ರಭು ಕೆಂಪೇಗೌಡರು ಕಟ್ಟಿರುವ ಸರ್ವೆ ಜನಾಂಗದ ಶಾಂತಿಯ ತೋಟವಾಗಿರುವ ಬೆಂಗಳೂರು ನಗರಕ್ಕೆ ಆಧುನಿಕ ಸ್ಪರ್ಶ ನೀಡಿದ್ದು, ಮಾಜಿ…

ಸಾಗರದಲ್ಲಿ ರಸಗೊಬ್ಬರ, ಇಂಧನ ಬೆಲೆ ಏರಿಕೆ ವಿರುದ್ಧ ರೈತರ ಆಕ್ರೋಶ: ಬಿಕ್ಕಟ್ಟು ಬಗೆಹರಿಸಲು ಎಸಿ ಮೂಲಕ ಸರ್ಕಾರಕ್ಕೆ ಮನವಿ

BIG NEWS: ‘ಪ್ಲೀಸ್ ಹೋಗ್ಬೇಡಿ ಸರ್’ ವಿಧಾನಸೌಧದಲ್ಲಿ ಕಣ್ಣೀರಿಟ್ಟ ಸಿಎಂ ಕಚೇರಿ ಸಿಬ್ಬಂದಿಗಳು: ಕೈಸನ್ನೆಯಲ್ಲೇ ಸಂತೈಸಿದ ಸಿದ್ದರಾಮಯ್ಯ

BREAKING: ರಾಜ್ಯ ಸರ್ಕಾರದಿಂದ ಮೂವರು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ | IAS Officer Transfer

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.