ಬೆಂಗಳೂರು: ಇರಾನ್ ಮೇಲೆ ಅಮೆರಿಕ, ಇಸ್ರೇಲ್ ದಾಳಿ ಮಾಡಿದೆ. ಇದರಿಂದಾಗಿ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಕರ್ನಾಟಕದ ಎಂಎಲ್ಸಿ ಭೋಜೇಗೌಡ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದು, ಬೆಂಗಳೂರಿಗೆ ಬರೋದಕ್ಕೆ ಪರದಾಡುವಂತೆ ಆಗಿದೆ.
ಇರಾನ್ ಮೇಲೆ ಅಮೆರಿಕ, ಇಸ್ರೇಲ್ ದಾಳಿ ಹಿನ್ನಲೆಯಲ್ಲಿ ದುಬೈ ಏರ್ಪೋರ್ಟ್ ನಲ್ಲಿ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನಿಂದ ದುಬೈಗೆ ಕುಟುಂಬ ಸಮೇತರಾಗಿ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರು ತೆರಳಿದ್ದರು. ಆದರೇ ಯುದ್ಧ ಭೀತಿ ಹಿನ್ನಲೆಯಲ್ಲಿ ವಿಮಾನಗಳ ಸಂಚಾರವನ್ನು ದುಬೈ ಏರ್ ಪೋರ್ಟ್ ನಲ್ಲಿ ಸ್ಥಗಿತಗೊಳಿಸಲಾಗಿದೆ.
ದುಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಂತ ಎಂಎಲ್ಸಿ ಭೋಜೇಗೌಡ ಹಾಗೂ ಕುಟುಂಬಸ್ಥರು ದುಬೈ ಏರ್ ಪೋರ್ಟ್ ನಲ್ಲಿ ಸಿಲುಕಿದ್ದಾರೆ. ದುಬೈನಿಂದ ಬೆಂಗಳೂರಿಗೆ ಬರೋದಕ್ಕೆ ವಿಮಾನ ಇಲ್ಲದೇ ಎಂಎಲ್ಸಿ ಭೋಜೇಗೌಡ ಅವರು ಪರದಾಡುತ್ತಿದ್ದಾರೆ.
ಅಡುಗೆ ಮನೆಯ ಸೂಪರ್ ಫುಡ್ ‘ನುಗ್ಗೆ ಕಾಯಿ’: ನಿಮ್ಮ ಆರೋಗ್ಯಕ್ಕೆ ಹೇಗೆ ಸಹಕಾರಿ?
‘ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ’ ಮಾಡಬೇಕಿರೋದು ಕೇಂದ್ರ ಸರ್ಕಾರ: ಹಕ್ರೆಗೆ ಜಿ.ಟಿ.ಸತ್ಯನಾರಾಯಣ ತಿರುಗೇಟು








