ಬೆಂಗಳೂರು: ವ್ಯಕ್ತಿಯೊಬ್ಬರಿಂದ ಪಡೆದಿದ್ದಂತ ಸಾಲಕ್ಕಾಗಿ ನೀಡಲಾಗಿದ್ದಂತ ಚೆಕ್ ಬೌನ್ಸ್ ಕೇಸ್ ನಲ್ಲಿ, ಮಾಲೂಕು ಶಾಸಕ ಕೆ.ವೈ ನಂಜೇಗೌಡರಿಗೆ 49.65 ಲಕ್ಷ ದಂಡವನ್ನು ವಿಧಿಸಿದೆ. ಅಲ್ಲದೇ ತಪ್ಪಿದರೇ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತನಿಧಿಗಳ ವಿಶೇಷ ಕೋರ್ಟ್ ಆದೇಶಿಸಿದೆ.
ಶಿವಮೊಗ್ಗ: ಡಿ.19ರಿಂದ ಬೀದಿಬದಿ ವ್ಯಾಪಾರಸ್ಥರ ಕುಟುಂಬ ಹಬ್ಬ “ಸ್ವಾನಿಧಿ ಮಹೋತ್ಸವ”
ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ, ರಾಮಚಂದ್ರ ಜಿ ಎಂಬುವರಿಗೆ 40 ಲಕ್ಷ ಸಾಲ ಮರು ಪಾವತಿಸಲು ಕೋಲಾರ ಜಿಲ್ಲೆಯ ಮಾಲೂರು ಶಾಸಕ ಕೆ.ವೈ ನಂಜೇಗೌಡ ಚೆಕ್ ಬೌನ್ಸ್ ಅರ್ಜಿಯ ವಿಚಾರಣೆ ನಡೆಯಿತು.
ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಈಗ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕವೂ ಮಾನಸಿಕ ಆರೋಗ್ಯ ಸೇವೆ ಲಭ್ಯ
ಸಾಲ ಮರುಪಾವತಿಗೆ ನೀಡಿದ್ದಂತ ಚೆಕ್ ಬೌನ್ ಆಗಿದ್ದ ಕಾರಣ, 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಜೆ.ಪ್ರೀತ್ ಅವರನ್ನೊಳಗೊಂಡ ನ್ಯಾಯಪೀಠವು ಶಾಸಕರಿಗೆ 49.65 ಲಕ್ಷ ದಂಡವನ್ನು ವಿಧಿಸಿದೆ. ಈ ದಂಡ ಪಾವತಿಸಲು ತಪ್ಪಿದರೇ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.