ಶಿವಮೊಗ್ಗ: ಕಚ್ಚೆ ಹರುಕ ಶಾಸಕ ಹಾಲಪ್ಪನಿಗೆ ( MLA Haratalu Halappa ) ಆಗಾಗ ಅತ್ಯಾಚಾರ ಕೇಸಿನ ನೆನಪಾಗುತ್ತದೆ. ಅದಕ್ಕಾಗಿ ಅವರು ನನ್ನ ಮೇಲೆ ಸುಳ್ಳು ಅತ್ಯಾಚಾರದ ಕೇಸ್ ಹಾಕಲು ಎಂಡಿಎಫ್ ಗಲಾಟೆ ಪ್ರತಿಭಟನೆ ವೇಳೆ ನನ್ನ ಮೇಲೆ ಕೇಸ್ ಪ್ರಯತ್ನ ನಡೆದಿತ್ತು ಎಂಬುದಾಗಿ, ಶಾಸಕ ಹರತಾಳು ಹಾಲಪ್ಪ ವಿರುದ್ಧ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ( Farmer MLA Gopalakrishna Beluru ) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ವೆಂಕಟೇಶಮೂರ್ತಿ ಅತ್ಯಾಚಾರ ಕೇಸ್’ಗೆ ಪ್ರತಿಯಾಗಿ ಅವರ ಆಫೀಸಿಗೆ ಹುಡುಗಿಯೊಬ್ಬಳಿಗೆ ನುಗ್ಗಿಸಿ ವೆಂಕಟೇಶ್’ಮೂರ್ತಿ ಮೇಲೆ ಕೇಸ್ ಹಾಕುವ ಪ್ರಯತ್ನ ಇದೇ ಶಾಸಕ ಹಾಲಪ್ಪ ಮಾಡಿದ್ದರು. ಎಂಡಿಎಫ್ ಗಲಾಟೆಯಲ್ಲಿ ಶಾಸಕ ಹಾಲಪ್ಪರ ಪಾತ್ರವಿದ್ದರೂ ಅವರ ಮೇಲೆ ಎಫ್’ಐಆರ್ ಏಕೆ ದಾಖಲಾಗಿಲ್ಲ. ಯಾವ ಶಕ್ತಿ ಅವರನ್ನು ಕಾಪಾಡಿರಬೇಕು. ನಮ್ಮ ಬಳಿ ಎಂಡಿಎಫ್’ನಲ್ಲಿ ನಡೆದ ಘಟನೆಯ ಒಂದು ಗಂಟೆಗಳ ವಿಡಿಯೋ ಇದೆ ಎಂದು ಹೇಳಿದರು.
BIG NEWS: ಜೈಲುಗಳಲ್ಲಿ ಗಾಂಜಾ ಪೂರೈಕೆ, ಅಕ್ರಮ ನಡೆಯದಂತೆ ಬಿಗಿ ಕ್ರಮ – ಗೃಹ ಸಚಿವ ಅರಗ ಜ್ಞಾನೇಂದ್ರ
ಪ್ರತಿಭಟನೆಯಲ್ಲಿ ಭಾಗವಹಿಸಿ ಎಂಡಿಎಫ್ ಗಲಾಟೆ ಎಫ್’ಐಆರ್ ದಾಖಲಿಸಲು ಬೆಂಬಲಿಸಿದ ಎಲ್ಲಾ ಜಾತ್ಯಾತೀತ ಮತ್ತು ಪಕ್ಷಾತೀತ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಮಳೆಹಾನಿಯಿಂದ ಹಾನಿಯಾದ ಜಾಗಕ್ಕೆ ಹೋಗದ ಹಾಲಪ್ಪ ಬಾತ್’ರೂಂ, ಲೈಟ್ ಕಂಬ ಉದ್ಘಾಟನೆ ಮಾಡಿದ ಫೋಟೋ ತೆಗೆಸಿಕೊಳ್ಳುವಲ್ಲಿ ಬ್ಯೂಸಿ ಆಗಿದ್ದಾರೆ. ಓಸಿ ರಾಜಾ ಬಿಜೆಪಿ ಗಲಾಟೆಗಳಿಗೆ ಹಣ ನೀಡುತ್ತಾನೆ. ಅದಕ್ಕಾಗಿ ಅವನು ಓಸಿ ನಡೆಸಿದರೂ ಅವರ ಮೇಲೆ ಯಾವುದೇ ಕೇಸ್ ಪೋಲೀಸರು ದಾಖಲಿಸುತ್ತಿಲ್ಲ ಎಂದರು ಆಕ್ರೋಶ ವ್ಯಕ್ತ ಪಡಿಸಿದರು.
ಶಿವಮೊಗ್ಗ: ಜು.18, 19ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ಈ ವೇಳೆ ಕಾಂಗ್ರೇಸ್ ನಗರ ಅಧ್ಯಕ್ಷ ಸುರೇಶ್’ಬಾಬು ಐ.ಎನ್, ತಾರಾಮೂರ್ತಿ, ಅಶೋಕ್ ಬೇಳೂರು, ಎಲ್. ಚಂದ್ರಪ್ಪ, ಸೋಮಶೇಖರ್ ಲಾವಿಗೆರೆ, ಮಹಾಬಲ ಕೌತಿ, ಭೀಮನೇರಿ ಆನಂದ ಸೇರಿದಂತೆ ಇತರರು ಹಾಜರಿದ್ದರು.