Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪಂಜಾಬ್ ನಲ್ಲಿ 25 ಅಡಿ ಆಳದ ಕೊಳವೆಬಾವಿಗೆ ಬಿದ್ದ 4 ವರ್ಷದ ಮಗು; ರಕ್ಷಣಾ ಕಾರ್ಯಾಚರಣೆ ತೀವ್ರ

ಇತಿಹಾಸದಲ್ಲೇ ಮೊದಲ ಬಾರಿಗೆ 96ರ ಗಡಿ ದಾಟಿದ ಡಾಲರ್ ಎದುರು ರೂಪಾಯಿ ಮೌಲ್ಯ: ಸಾರ್ವಕಾಲಿಕ ಕುಸಿತದಿಂದ ಭಾರತೀಯ ಮಾರುಕಟ್ಟೆಗೆ ಭಾರಿ ಆಘಾತ!

ಪೆಟ್ರೋಲ್, ಡೀಸೆಲ್ ದರ ಏರಿಕೆ, ಬಡವರ ಮೇಲೆ ಗದಾಪ್ರಹಾರ: ಸಚಿವ ಈಶ್ವರ ಖಂಡ್ರೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಾಸಕ ಗೋಪಾಲಕೃಷ್ಣ ಬೇಳೂರು ‘ಮಾಸ್ಟರ್ ಪ್ಲಾನ್’: ಇನ್ಮುಂದೆ ಸಾಗರ ಆಗಲಿದೆ ‘ಹೈಟೆಕ್ ಸಿಟಿ’!
KARNATAKA

ಶಾಸಕ ಗೋಪಾಲಕೃಷ್ಣ ಬೇಳೂರು ‘ಮಾಸ್ಟರ್ ಪ್ಲಾನ್’: ಇನ್ಮುಂದೆ ಸಾಗರ ಆಗಲಿದೆ ‘ಹೈಟೆಕ್ ಸಿಟಿ’!

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗಗಳ ಸಮಗ್ರ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ಇದಕ್ಕಾಗಿ ವಿವಿಧ ಇಲಾಖೆಗಳಿಂದ ನೂರಾರು ಕೋಟಿ ರೂಪಾಯಿಗಳ ಅನುದಾನ ಈಗಾಗಲೇ ಬಿಡುಗಡೆಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

​ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರದ ಚಿತ್ರಣವನ್ನೇ ಬದಲಿಸುವಂತಹ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದರು.

​ಪ್ರಮುಖ ಯೋಜನೆಗಳು ಮತ್ತು ಅನುದಾನದ ವಿವರ:

  • ​ಹೈಟೆಕ್ ರಂಗಮಂದಿರ: ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸೂಕ್ತ ವೇದಿಕೆಯ ಕೊರತೆ ನೀಗಿಸಲು ₹4.80 ಕೋಟಿ ವೆಚ್ಚದಲ್ಲಿ 900 ರಿಂದ 1000 ಆಸನಗಳ ಸಾಮರ್ಥ್ಯವಿರುವ ಅತ್ಯಾಧುನಿಕ ರಂಗಮಂದಿರ ನಿರ್ಮಿಸಲಾಗುವುದು. ಇದರ ಟೆಂಡರ್ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ.
  • ​ಗಣಪತಿ ಕೆರೆ ಪಾರ್ಕ್: ಗಣಪತಿ ಕೆರೆಯ ಮೇಲ್ಭಾಗದಲ್ಲಿ ಸಾರ್ವಜನಿಕರು ಮತ್ತು ಮಕ್ಕಳಿಗಾಗಿ ₹4 ಕೋಟಿ ವೆಚ್ಚದಲ್ಲಿ ಸುಂದರವಾದ ಉದ್ಯಾನವನ (High Quality Park) ನಿರ್ಮಾಣವಾಗಲಿದೆ. ಇಲ್ಲಿ ಮ್ಯೂಸಿಕ್ ಸಿಸ್ಟಮ್ ಹಾಗೂ ವಾಕಿಂಗ್ ಪಾತ್‌ಗಳ ಸೌಲಭ್ಯವಿರಲಿದೆ.
  • ​ಫುಡ್ ಕೋರ್ಟ್ ಅಭಿವೃದ್ಧಿ: ಸಾಗರಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಆಸ್ಪತ್ರೆ ಹತ್ತಿರ, ಬಸ್ ಸ್ಟ್ಯಾಂಡ್ ಬಳಿ ಹಾಗೂ ಧ್ವಜಸ್ತಂಭದ ಬಳಿ ಒಟ್ಟು ₹75 ಲಕ್ಷ ವೆಚ್ಚದಲ್ಲಿ ಮೂರು ಫುಡ್ ಕೋರ್ಟ್‌ಗಳನ್ನು ನಿರ್ಮಿಸಲಾಗುತ್ತಿದೆ.
  • ​ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ: ಸಾಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ನವೀಕರಣ ಮತ್ತು ಆಧುನೀಕರಣಕ್ಕಾಗಿ ₹2 ಕೋಟಿ ಮೀಸಲಿಡಲಾಗಿದೆ.
  • ​ನೀಲಿ ನಕ್ಷೆಯ ಇತರ ಯೋಜನೆಗಳು:
    • ​ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ (CMIDF) ₹50 ಕೋಟಿ.
    • ​ಪ್ರವಾಹ ಪರಿಹಾರ ನಿಧಿಯಡಿ ₹18 ಕೋಟಿ.
    • ​ನೀರಾವರಿ ಇಲಾಖೆಯಿಂದ ಕಾಲುಸಂಕಗಳ ನಿರ್ಮಾಣಕ್ಕೆ ₹42 ಕೋಟಿ.
    • ​ಮೀನು ಮಾರುಕಟ್ಟೆಯ ಅಭಿವೃದ್ಧಿ ಹಾಗೂ ಸುತ್ತಮುತ್ತಲಿನ ಸ್ವಚ್ಛತೆಗಾಗಿ ₹1.29 ಕೋಟಿ.
    • ​ಸಾಗರ ಪಟ್ಟಣದ ಪಶು ಆಸ್ಪತ್ರೆ ಅಭಿವೃದ್ಧಿಗೆ ₹50 ಲಕ್ಷ ಹಾಗೂ ಮಹಿಳಾ ಕಾಲೇಜಿನಲ್ಲಿ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ₹1 ಕೋಟಿ.

​ಸಾಗರ ಪ್ರವಾಸಿ ತಾಣವಾಗಿ ಅಭಿವೃದ್ಧಿ:

​”ಸಿಗಂದೂರು, ಜೋಗ್ ಜಲಪಾತ, ಶ್ರೀಧರ ಆಶ್ರಮ ಹಾಗೂ ವರದಾಪುರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಸಾಗರವನ್ನು ಒಂದು ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸಲು ರಸ್ತೆ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ನಗರೋತ್ಥಾನ ಯೋಜನೆಯಡಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳ ಡಾಂಬರೀಕರಣಕ್ಕೆ ಕೋಟ್ಯಂತರ ರೂಪಾಯಿ ಬಿಡುಗಡೆಯಾಗಿದೆ” ಎಂದು ಶಾಸಕರು ಮಾಹಿತಿ ನೀಡಿದರು.

ಅಣುಸ್ಥಾವರ ನಿರ್ಮಾಣಕ್ಕೆ ಅದೇಶವಾಗಿಲ್ಲ

ಸಾಗರ ತಾಲೂಕಿನಲ್ಲಿ ಅಣುಸ್ಥಾವರ ನಿರ್ಮಾಣದ ವಿಚಾರ ಗಮನಕ್ಕೆ ಬಂದಿದೆ. ಅಣುಸ್ಥಾವರ ನಿರ್ಮಾಣಕ್ಕೆ ಯಾವುದೇ ಅದೇಶ ಆಗಿಲ್ಲ. ಕೇವಲ ಜಮೀನು ಅಲ್ಲಿ ಸಿಗಬಹುದು, ಇಲ್ಲಿ ಸಿಗಬಹುದು ಎನ್ನುವ ವರದಿಯನ್ನು ತಹಶಿಲ್ದಾರರು ನೀಡಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗಬಾರದು ಎಂಬುದಾಗಿ ಹೇಳಿದರು.

ಸೊರಬ ರಸ್ತೆ ಅಗಲೀಕರಣಕ್ಕೆ ಮುಹೂರ್ತ ಫಿಕ್ಸ್

​ಸೊರಬ ರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಲೀಕರು ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು‌.

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅಭಿನಂದನೆ

ಇದೇ ಸಂದರ್ಭದಲ್ಲಿ ನಿನ್ನೆ ಪ್ರಕಟವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಗರ ತಾಲ್ಲೂಕಿನ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಶಿಕ್ಷಕರಿಗೆ, ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಶ್ಲಾಘಿಸಿದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

ಪೆಟ್ರೋಲ್, ಡೀಸೆಲ್ ದರ ಏರಿಕೆ, ಬಡವರ ಮೇಲೆ ಗದಾಪ್ರಹಾರ: ಸಚಿವ ಈಶ್ವರ ಖಂಡ್ರೆ

2 Mins Read

ಸಾಗರದಲ್ಲಿ ನಗರಸಭೆಯ ಜನವಿರೋಧಿ ಆಡಳಿತ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

2 Mins Read

ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ ವಿರೋಧಿ ಜನಾಂದೋಲನ: ಸರಣಿ ಹೋರಾಟಕ್ಕೆ ‘ಮಲೆನಾಡು ಸಜ್ಜು’

2 Mins Read
Recent News

BREAKING: ಪಂಜಾಬ್ ನಲ್ಲಿ 25 ಅಡಿ ಆಳದ ಕೊಳವೆಬಾವಿಗೆ ಬಿದ್ದ 4 ವರ್ಷದ ಮಗು; ರಕ್ಷಣಾ ಕಾರ್ಯಾಚರಣೆ ತೀವ್ರ

ಇತಿಹಾಸದಲ್ಲೇ ಮೊದಲ ಬಾರಿಗೆ 96ರ ಗಡಿ ದಾಟಿದ ಡಾಲರ್ ಎದುರು ರೂಪಾಯಿ ಮೌಲ್ಯ: ಸಾರ್ವಕಾಲಿಕ ಕುಸಿತದಿಂದ ಭಾರತೀಯ ಮಾರುಕಟ್ಟೆಗೆ ಭಾರಿ ಆಘಾತ!

ಪೆಟ್ರೋಲ್, ಡೀಸೆಲ್ ದರ ಏರಿಕೆ, ಬಡವರ ಮೇಲೆ ಗದಾಪ್ರಹಾರ: ಸಚಿವ ಈಶ್ವರ ಖಂಡ್ರೆ

ಹಂಟಾವೈರಸ್ ಹರಡುವಿಕೆ ‘ಕೋವಿಡ್-19’ ನಂತೆ ಭೀಕರವಾಗಿರುವುದಿಲ್ಲ! ವೈದ್ಯಕೀಯ ಲೋಕ ನಿರಾಳವಾಗಿರಲು ಅಸಲಿ ಕಾರಣ ಇಲ್ಲಿದೆ ನೋಡಿ

State News
KARNATAKA

ಪೆಟ್ರೋಲ್, ಡೀಸೆಲ್ ದರ ಏರಿಕೆ, ಬಡವರ ಮೇಲೆ ಗದಾಪ್ರಹಾರ: ಸಚಿವ ಈಶ್ವರ ಖಂಡ್ರೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೀದರ್ : ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಅಡುಗೆ ಅನಿಲ ದರ, ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿದ ಎನ್.ಡಿ.ಎ.…

ಸಾಗರದಲ್ಲಿ ನಗರಸಭೆಯ ಜನವಿರೋಧಿ ಆಡಳಿತ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ ವಿರೋಧಿ ಜನಾಂದೋಲನ: ಸರಣಿ ಹೋರಾಟಕ್ಕೆ ‘ಮಲೆನಾಡು ಸಜ್ಜು’

BREAKING: ಕೊಪ್ಪಳ ಟ್ರ್ಯಾಕ್ಟರ್ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.