ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ಪಕ್ಷದ ನಾಯಕರಲ್ಲ ಎಂಬುದಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ( Arun Singh ) ಅವರು ಹೇಳಿದ್ದಾರೆ.
ಬಿಜೆಪಿ ಎಂದರೆ ಕಳ್ಳ, ಮಳ್ಳ, ಸುಳ್ಳರ ಪಕ್ಷ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? – ಕಾಂಗ್ರೆಸ್ ಪ್ರಶ್ನೆ
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಬಿಜೆಪಿ ಪಕ್ಷದ ಹೇಳಿಕೆಯಾಗಿಲ್ಲ. ಯತ್ನಾಳ್ ಅಲ್ಪಸಂಖ್ಯಾತ ಮೀಸಲಾತಿ ಬಗ್ಗೆ ಹೇಳಿದ್ದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು.
ಈಗಾಗಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುವ ಸಂಬಂಧ ನೋಟಿಸ್ ನೀಡಲಾಗಿತ್ತು. ಅವರಿಂದ ಉತ್ತರವನ್ನು ಪಡೆಯಲಾಗಿದೆ. ಅವರ ಸ್ವಭಾವವೇ ಹಾಗೆ ಆಗಿದ್ದು, ಅದಕ್ಕೆ ಏನೂ ಮಾಡೋದಕ್ಕೆ ಆಗೋದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಸುತ್ತಿರುವಂತ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದಂತ ಅವರು, ಇದು ಯಾತ್ರೆಯಲ್ಲ, ಕಾಂಗ್ರೆಸ್ ನಾಯಕರ ಜೋಡೋ ಯಾತ್ರೆಯಾಗಿದೆ. ಇದು ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಅವರನ್ನು ಜೋಡಿಸುವ ಯಾತ್ರೆಯಾಗಿದೆ. ರಾಹುಲ್ ಗಾಂಧಿ ಈ ಇಬ್ಬರು ನಾಯಕರನ್ನು ಬಲವಂತವಾಗಿ ಕೂಡಿಸೋ ಪ್ರಯತ್ನಕ್ಕೆ ಇಳಿದಿದ್ದಾರೆ ಎಂದರು.