ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಲಿಂಬಾವಳಿ ಬಂಧನಕ್ಕೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ .
ಇದೀಗ ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಶಾಸಕ ಅರವಿಂದ ಲಿಂಬಾವಳಿಯನ್ನು ತನಿಖೆಗೆ ಒಳಪಡಿಸಲಾಗುವುದು, ಆದರೆ ತಪ್ಪಿಲ್ಲದೇ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಅರವಿಂದ ಲಿಂಬಾವಳಿ ಶಾಸಕರಾಗಲಿ, ಸಾಮಾನ್ಯ ವ್ಯಕ್ತಿಯಾಗಿರಲಿ, ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುತ್ತದೆ. ಇದರ ಹಿಂದೆ ಯಾವ ಒತ್ತಡ ಕೂಡ ಇಲ್ಲ ಎಂದರು. ಡೆತ್ ನೋಟ್ ನಲ್ಲಿ ಅವರ ಹೆಸರು ಇದ್ದ ಕಾರಣಕ್ಕೆ ಬಂಧಿಸಲು ಆಗುವುದಿಲ್ಲ.ಹಾಗಂತ ತಪ್ಪು ಮಾಡಿದವರನ್ನು ಬಂಧಿಸದೇ ಇರಲು ಆಗಲ್ಲ, ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಈ ದೇಶದಲ್ಲಿ ಕಾನೂನು ಇದೆ. ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಲಿಂಬಾವಳಿ ಹೆಸರು ಕೇಳಿಬಂದಿದೆ. ಸರ್ಕಾರ ಯಾರನ್ನೂ ಕೂಡ ರಕ್ಷಣೆ ಮಾಡಬಾರದು, ತಪ್ಪಿತಸ್ದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ತಾವು ನಂಬಿದ್ದ ಸ್ನೇಹಿತರಿಂದ ಹಣಕಾಸಿನ ವಿಚಾರದಲ್ಲಿ ಮೋಸಹೋಗಿ ಹಣಕಳೆದುಕೊಂಡು ಹತಾಷರಾಗಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಪ್ರದೀಪ್ ಅವರು ತಮ್ಮ ಡೆತ್ ನೋಟ್ ನಲ್ಲಿ ಮಾಜಿ ಶಾಸಕ ಮತ್ತು ಮಹದೇವಪುರ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಹೆಸರನ್ನು ಕೂಡ ಪ್ರಸ್ತಾಪಿಸಿರುವುದರಿಂದ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಬೇಕು ಮತ್ತು ಪ್ರದೀಪ್ ಅವರ ಪತ್ನಿಗೆ ಹಣ ವಾಪಸ್ಸು ಕೊಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು.
JDS ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಂದಿನಿಯ ವಿಷಯದಲ್ಲಿ ಸುಳ್ಳು ಹರಡುತ್ತಿದೆ – ನಳೀನ್ ಕುಮಾರ್ ಕಟೀಲ್
BIGG NEWS : ಸಿಎಂ ಬೊಮ್ಮಾಯಿ ವಿರುದ್ಧ ‘ನಾಯಿ ಮರಿ’ ಹೇಳಿಕೆಗೆ ಸಿದ್ದರಾಮಯ್ಯ ಸಮರ್ಥನೆ