Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಮಲಿಂಗಾರೆಡ್ಡಿ ನಮ್ಮ ಸ್ನೇಹಿತರು, ಎಲ್ಲಾ ಸಮಸ್ಯೆ ಕ್ಲಿಯರ್: ಅವರ ರಾಜೀನಾಮೆ ಅಂಗಿಕರಿಸುವುದಿಲ್ಲ; ಸಿಎಂ ಡಿ.ಕೆ.ಶಿವಕುಮಾರ್

ಮಾಜಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಕೃತಜ್ಞತೆ ಸಲ್ಲಿಸಿದ ವಿವಿಧ ವಿಭಾಗದ ಅರಣ್ಯ ಸಿಬ್ಬಂದಿ

ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ
KARNATAKA

ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಒಬ್ಬ ವ್ಯಕ್ತಿಗೆ ಈ ಮಟ್ಟದ ಒಂದು ಸತ್ಕಾರ ಅನ್ನುವಂತದ್ದು, ಒಂದು ಜಗದ ಬದುಕಿನಲ್ಲಿ ಸಾರ್ಥಕತೆಯನ್ನು ಕೊಡುತ್ತದೆ ಅಂತ ಹೇಳಿ ನನಗೆ ಅನಿಸುತ್ತದೆ. ಬಹಳ ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಗಾರರು ಮತ್ತು ಮಂಜಪ್ಪನವರ ಹಿತೈಷಿಗಳು ಈ ಸಭೆಯಲ್ಲಿ ಸೇರಿದ್ದೀರಿ. ನಾವು ಬಹಳ ಸನ್ಮಾನಗಳನ್ನು ಇದನ್ನು ನೋಡಿದ್ದೇವೆ. ಆದರೆ ಈ ಮಟ್ಟದಲ್ಲಿ ನಡೆಯುತ್ತಾ ಇರುವಂತದ್ದು ಮಂಜಪ್ಪನವರ ಸಾರ್ವಜನಿಕ ಬದುಕಿಗೆ ಒಂದು ದೊಡ್ಡ ಶಕ್ತಿಯನ್ನು ತುಂಬಿದೆ ಮತ್ತು ಮಾನ್ಯತೆಯನ್ನು ಕೊಟ್ಟಿದೆ ಅಂತ ಹೇಳಿ ನಾನು ಭಾವಿಸುತ್ತೇನೆ ಎಂಬುದಾಗಿ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ತಿಳಿಸಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಎಲ್ ಬಿ ಕಾಲೇಜಿನಲ್ಲಿ ನಡೆದ ಹೆಚ್.ಎಸ್ ಮಂಜಪ್ಪ ಅವರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

​ಸತ್ಕಾರ ಮತ್ತು ಬದುಕಿನ ಸಾರ್ಥಕತೆ

​ಒಬ್ಬ ವ್ಯಕ್ತಿಗೆ ಈ ಮಟ್ಟದ ಒಂದು ಸತ್ಕಾರ ಅನ್ನುವಂತದ್ದು, ಒಂದು ಜಗದ ಬದುಕಿನಲ್ಲಿ ಸಾರ್ಥಕತೆಯನ್ನು ಕೊಡುತ್ತದೆ ಅಂತ ಹೇಳಿ ನನಗೆ ಅನಿಸುತ್ತದೆ. ಬಹಳ ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಗಾರರು ಮತ್ತು ಮಂಜಪ್ಪನವರ ಹಿತೈಷಿಗಳು ಈ ಸಭೆಯಲ್ಲಿ ಸೇರಿದ್ದೀರಿ. ನಾವು ಬಹಳ ಸನ್ಮಾನಗಳನ್ನು ಇದನ್ನು ನೋಡಿದ್ದೇವೆ. ಆದರೆ ಈ ಮಟ್ಟದಲ್ಲಿ ನಡೆಯುತ್ತಾ ಇರುವಂತದ್ದು ಮಂಜಪ್ಪನವರ ಸಾರ್ವಜನಿಕ ಬದುಕಿಗೆ ಒಂದು ದೊಡ್ಡ ಶಕ್ತಿಯನ್ನು ತುಂಬಿದೆ ಮತ್ತು ಮಾನ್ಯತೆಯನ್ನು ಕೊಟ್ಟಿದೆ ಅಂತ ಹೇಳಿ ನಾನು ಭಾವಿಸುತ್ತೇನೆ.

​ಬಂಧುಗಳೇ, ಮಂಜಪ್ಪನವರಿಗೆ ಇಂತಹ ಒಂದು ಸನ್ಮಾನ ಯಾಕೆ ಅಂತ ಹೇಳಿ ಅನೇಕ ಸಂಗತಿಗಳನ್ನು ಸೂರ್ಯನಾರಾಯಣ ಅವರು ಹೇಳಿದರು. ನಾನು ಚರ್ವಿತ ಚರ್ವಣ ಮಾಡಲಿಕ್ಕೆ ಹೋಗುವುದಿಲ್ಲ. ಯಾಕೆಂದರೆ ನಾನು ಮತ್ತು ಸೂರ್ಯನಾರಾಯಣ ಅವರು ಅಡಿಕೆ ಒಕ್ಕೂಟದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಮ್ಮಿಬ್ಬರಿಗೂ ಗೊತ್ತಿರುವಂತಹ ಅನೇಕ ಸಂಗತಿಗಳು ಇದ್ದು, ಅದನ್ನು ಸೂರ್ಯನಾರಾಯಣ ಅವರು ವಿಸ್ತಾರವಾಗಿ ಪ್ರಸ್ತಾಪವನ್ನು ಮಾಡಿದ್ದಾರೆ.

​ಗುಟ್ಕಾ ನಿಷೇಧದ ಆತಂಕ ಮತ್ತು ಹೋರಾಟದ ಆರಂಭ

​ಮಂಜಪ್ಪನವರು ಆರಂಭದ ದಿನ ಸುಮಾರು ೯೬ (1996)ನೇ ಇಸವಿ, ನಾವು ಬೆಂಗಳೂರಿನಲ್ಲಿ ಸೇರಿದ್ವಿ. ಅಡಿಕೆ ಬೆಳೆಗಾರರ ಪ್ರದೇಶವನ್ನು ಪ್ರತಿನಿಧಿಸತಕ್ಕಂತಹ ಶಾಸಕರನ್ನು, ಎಂಪಿಗಳನ್ನು ಮತ್ತು ಮಂತ್ರಿಗಳನ್ನು ನಾನು ಒಟ್ಟಿಗೆ ಸೇರಿಸುತ್ತೇನೆ, ಶಾಸಕರ ಭವನದ ಹಾಲ್‌ನಲ್ಲಿ. ಆಗ ಮಂಜಪ್ಪನವರನ್ನು ನಾನು ಕರೆದಿದ್ದೆ, ‘ಬನ್ನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು’ ಅಂತ ಹೇಳಿ, ಬಂದಿದ್ದರು. ಕಾರಣ ಇಷ್ಟೇನೇ, ಅವತ್ತು ಗುಟ್ಕಾ ಬ್ಯಾನ್ ಮಾಡಲಿಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಹೊರಟಿತ್ತು ಮತ್ತು ಮೇಲ್ಮನೆಯಲ್ಲಿ ನಿರ್ಣಯ ಆಗಿ ನರಸಿಂಹಯ್ಯ ಕಮಿಟಿಯನ್ನು ರಚನೆ ಮಾಡಿದ್ದರು.

​ಆಗ ಆತಂಕ! ೨,೦೦೦ (2,000) ರೂಪಾಯಿ ರೇಟ್ ಮಾರ್ಕೆಟ್‌ನಲ್ಲಿ ಬಿದ್ದುಹೋಯಿತು ಅವತ್ತು. ನರಸಿಂಹಯ್ಯನವರು ಗೊತ್ತಿದೆ ನಿಮಗೆ, ಯಾವ ರೀತಿ ಬದ್ಧವಾದಿ. ಹಾಗಾಗಿ ಅವರು ಅಡಿಕೆಗೆ ರಕ್ಷಣೆ ಕೊಡಲಿಕ್ಕೆ ಆಗುವುದಿಲ್ಲ ಅಂತ ಹೇಳಿ ನನಗೆ ಗೊತ್ತಿತ್ತು. ಆದರೂ ಕೂಡ ಅವರ ಮೇಲೆ ಒತ್ತಡ ತರಬೇಕು ಮತ್ತು ನರಸಿಂಹಯ್ಯ ಕಮಿಟಿ ರಿಪೋರ್ಟನ್ನೇ ಮಾನ್ಯ ಮಾಡದಿದ್ದ ಹಾಗೇನೆ ತಡೆಯಬೇಕು ಅನ್ನುವಂತದ್ದು ನಮ್ಮ ಇರಾದೆ ಇತ್ತು.

​ಆಗ ನಾವೆಲ್ಲ ಕೂತು ನಿರ್ಣಯ ಮಾಡಿದೆವು. ‘ಗುಟ್ಕಾನನ್ನು ನಾವು ಅಡಿಕೆ ಬೆಳೆಗಾರರು ಬೆಂಬಲಿಸಬೇಕು’ ಅಂತ ಹೇಳಿ ಯಾವ ಇರಾದೆಯೂ ಇಲ್ಲ. ಆದರೆ ಗುಟ್ಕಾಕ್ಕೆ ಅಡಿಕೆ ಹೋದಮೇಲೆ ಅಡಿಕೆ ರೇಟ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ, ಏರಿಯಾ ಜಾಸ್ತಿಯಾಗಿದೆ. ಇಂತಹ ಸಂದರ್ಭದಲ್ಲಿ ಅಡಿಕೆಗೆ ಪರ್ಯಾಯವಾಗಿರತಕ್ಕಂತಹ ವ್ಯವಸ್ಥೆ ಆಗುವವರೆಗೆ ನಮಗೆ ರಕ್ಷಣೆ ಬೇಕು ಅಂತ ಹೇಳಿ ಕೇಳಬೇಕು ಅಂತ ನಿರ್ಣಯ ಮಾಡಿದೆವು. ಆ ನಿರ್ಣಯವನ್ನು ಬರೆದಂತವರು ಎಚ್.ಎಸ್. ಮಂಜಪ್ಪನವರು. ನಿರ್ಣಯವನ್ನು ಬರೆದಂತವರು.

​ಹೀಗಾಗಿ ಅವತ್ತಿನಿಂದ ಈ ಹೋರಾಟ ಶುರುವಾಯಿತು. ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದರು. ಅವರ ಹತ್ತಿರ ಹೋಗಿ ಹೇಳಿದಾಗ, “ಏನಪ್ಪಾ ಗುಟ್ಕಾ ಬ್ಯಾನ್ ಮಾಡಬಾರದು ಅಂತ ನಾವು ಹೆಂಗೆ ಹೇಳುವುದು?” ಅಂತ. ಪಟೇಲರಿಗೆ ಹೇಳಿದೆ, “ನೀವು ಅಡಿಕೆ ಬೆಳೆಗಾರರು ಚೆನ್ನಗಿರಿಯಲ್ಲಿ, ಅಡಿಕೆ ಬೆಳೆಗಾರರ ಪರಿಸ್ಥಿತಿ ಏನಾಗುತ್ತದೆ ನೀವು ಸ್ವಲ್ಪ ಯೋಚನೆ ಮಾಡಿ. ೩,೦೦೦ (3,000), ೫,೦೦೦ (5,000) ರೂಪಾಯಿ ರೇಟ್ ಇದ್ದಿದ್ದು ಇವತ್ತು ಗುಟ್ಕಾ ಹೋದಮೇಲೆ ಅದು ೧೦,೦೦೦ (10,000) ರೂಪಾಯಿ ಮೇಲೆ ಹೋಯಿತು, ಅವಾಗ. ಹಾಗಾಗಿ ಏಕಾಏಕಿ ಕಡಿಮೆ ಬಂದರೆ ಅಡಿಕೆ ಬೆಳೆಗಾರರು ತಡೆದುಕೊಳ್ಳಲಿಕ್ಕೆ ಆಗುವುದಿಲ್ಲ. ಇಂತಹ ಒಂದು ರಕ್ಷಣೆ ಬೇಕಾಗುತ್ತದೆ” ಅನ್ನುವಂತಹ ಒಂದು ದೃಷ್ಟಿಯಿಂದ ನಾವು ಬಂದಿದ್ದು. “ಪಟೇಲರೇ, ಇದು ಮಾಡಲಿಕ್ಕೆ ಆಗುತ್ತದೆ” ಅಂದ್ವಿ.

​ಅವರು ಹೇಳಿದರು, “ಅಪೊಸಿಷನ್ ಲೀಡರ್‌ಗೆ ಹೇಳಿ” ಅಂತ. ನಮ್ಮ ಅದೃಷ್ಟಕ್ಕೆ ಅಲ್ವಾ ಅಪೊಸಿಷನ್ ಲೀಡರ್ ಅವರು. ಅವರ ಹತ್ತಿರ ಹೋದ್ವಿ. ಕಾಂಗ್ರೆಸ್ಸಿನ ಮುಖಂಡರಾಗಿರತಕ್ಕಂತಹ, ನಮ್ಮ ಟಿ.ಎಸ್.ಎಸ್.ನ ಅವತ್ತಿನ ಅಧ್ಯಕ್ಷರು ನಮ್ಮ ಶಾಂತಾರಾಮ ಹೆಗಡೆಯವರು ಇದ್ದರು. ಎಲ್ಲಾ ಒಟ್ಟಿಗೆ ಹೋದ್ವಿ. “ಏನಿದು ನಿಮಗೆ ಓರಲ್ ಕ್ಯಾನ್ಸರ್ ಹೆಂಗೆ ಬರ್ತಾ ಇದೆ ಗೊತ್ತಿದೆಯಾ ಹಾಗೆ ಹೀಗೆ” ಅಂತ ಗಲಾಟೆ ಮಾಡಿದರು. ಆಮೇಲೆ ಅವರನ್ನು ಕನ್ವಿನ್ಸ್ ಮಾಡ್ವಿ, “ನಮ್ಮ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಇದನ್ನು, ಅವರ ಬದುಕಿನ ಪ್ರಶ್ನೆ ಸಾರ್, ಸಾವು ಬದುಕಿನ ಪ್ರಶ್ನೆ.” ಅವರನ್ನು ಕನ್ವಿನ್ಸ್ ಮಾಡ್ವಿ. ಜೆ.ಎಚ್. ಪಟೇಲರು ಹೇಳಿಕೊಟ್ಟ ಹಾಗೆ ನಾವು ಮಾಡಿದ್ವಿ ವಿಧಾನಸಭೆ ಒಳಗಡೆ. “ನೀವು ರೈಸ್ ಮಾಡಿ, ಅದನ್ನು ಮಾನ್ಯ ಮಾಡಬಾರದು” ಅಂತ. “ಹೌದಪ್ಪಾ, ಅಡಿಕೆ ಬೆಳೆಗಾರರ ಪರವಾಗಿ ನಾನು ಮಾನ್ಯ ಮಾಡುವುದಿಲ್ಲ” ಅಂತ ಮುಖ್ಯಮಂತ್ರಿಯಾಗಿ ನಾವು ಸ್ಟೇಟ್‌ಮೆಂಟ್ ಕೊಡ್ತೀವಿ ಅಂತ ಹೇಳಿದ್ರು. ನಾವು ಹೌಸ್ ಒಳಗೆ ಹಾಗೆ ಮಾಡಿದ್ವಿ, ರೈಸ್ ಮಾಡಿದ್ವಿ. ಜೆ.ಎಚ್. ಪಟೇಲರು ಅದನ್ನು ಮಾನ್ಯ ಮಾಡುವುದಿಲ್ಲ ಅಂದರು. ಇವತ್ತಿನಿಂದ ಇಲ್ಲಿ ತನಕ, ಅವತ್ತೇ ಅಡಿಕೆ ಬೆಳೆಗೆ ಬೆಲೆ ತಳ ಮುಟ್ಟುತ್ತಿತ್ತು, ಇಂತಹ ಒಂದು ಪ್ರಯತ್ನವನ್ನು ಮಾಡಿದೆವು. ಅಲ್ಲಿಂದ ಶುರುವಾಯಿತು ನಮ್ಮ ಜನಪ್ರಿಯತೆ.

​ಕೇಂದ್ರದಲ್ಲಿ ಅಡಿಕೆ ಬೆಳೆಗಾರರ ಧ್ವನಿ

​ಒಂದು ದಿವಸ ನಿರ್ಮಲಾ ಸೀತಾರಾಮನ್ ಅವರು ಹೇಳಿದರು, ನಾವೆಲ್ಲ ಹೋದಾಗ— ಈ ದೇಶದ ಯಾವುದೇ ಬೆಳೆಗೆ ಇಲ್ಲದೆ ಇರುವಂತಹ ಲಾಬಿ ಅಡಿಕೆ ಬೆಳೆಗೆ ನೀವು ಮಾಡಿದ್ದೀರಿ, ಖಂಡಿತವಾಗಿಯೂ ಬೇರೆ ಬೇರೆ ಬೆಳೆಗೆ ಇದು ನಮ್ಮ ಕಣ್ಣು ಅಂತ ಹೇಳಿದರು.

​ಅಡಿಕೆ ಬೆಳೆಗಾರರು ನಾವೆಲ್ಲ ಇಲ್ಲಿ ಕೂತಿದ್ದೇವೆ. ರೇಟ್ ಬಿದ್ದು ಹೋದಾಗ ನಮ್ಮ ಹಣೆಬರಹ ಸರಿ ಇಲ್ಲ ಅಂದುಕೊಳ್ಳುತ್ತೇವೆ. ರೇಟ್ ಮೇಲೆ ಎದ್ದಾಗ ದೇವರು ಏನೋ ಕೊಟ್ಟ ಅಂದುಕೊಳ್ಳುತ್ತೇವೆ. ಖಂಡಿತ ಇವೆರಡೂ ಅಲ್ಲ. ಅಡಿಕೆಯ ಬೆಲೆಯ ಹಿಂದೆ ಬೇರೆಯೇ ಶಕ್ತಿಗಳು ಆಟ ಆಡುತ್ತಾ ಇದ್ದಾವೆ. ಹೀಗಾಗಿ ಇಂತಹ ಒಂದು ರಕ್ಷಣೆ ಅಡಿಕೆಗೆ ನಾವು ಕೊಟ್ಟಿದ್ದೇವೆ. ಅದರಲ್ಲೂ ಕೂಡ ಇದರಲ್ಲಿ ಬಹಳ ದೊಡ್ಡ ಪಾತ್ರವನ್ನು ಮಂಜಪ್ಪನವರು ವಹಿಸಿದ್ದಾರೆ ಅನ್ನುವಂತದ್ದು ನನ್ನ ವೈಯಕ್ತಿಕ ಅನಿಸಿಕೆ. ನಾನು ಹೇಳುತ್ತೇನೆ, ಬಹಳಷ್ಟು ಸಂಗತಿಗಳನ್ನು ಸೂರ್ಯನಾರಾಯಣ ಅವರು ಹೇಳಿದರು.

​ನಮಗೆ ಏನು ಅಂದರೆ ಪ್ರತಿ ಸಾರಿ ಅನಂತ್ ಕುಮಾರ್ ಅವರು ಬದುಕಿರುವವರೆಗೆ ನಾವು ಬೇರೆಯವರ ಹತ್ತಿರ ಹೋಗೋದೇ ಇಲ್ಲ. ಅನಂತ್ ಕುಮಾರ್ ಅವರ ಮನೆಗೆ ಉಳಿದ ಕ್ಯಾಬಿನೆಟ್ ಸಚಿವರನ್ನು ಕರೆಸುತ್ತಿದ್ದರು, ಕರೆಸ್ತಾ ಇದ್ದರು. ಅವರ ಮನೆಯಲ್ಲಿ ನಮಗೆಲ್ಲ ಇಲ್ಲಿಂದ ಹೋದ ಡೆಲಿಗೇಶನ್‌ಗೆ ಊಟ ಹಾಕಿ, ಏನೇನು ಯಾರ್ಯಾರಿಗೆ ಆಗಬೇಕು ನೀವು ಹೇಳಿ ಅಂತ ಹೇಳಿ ಮೀಟಿಂಗ್ ಮಾಡಿಸುತ್ತಾ ಇದ್ದರು. ನಮಗೆ ಇವತ್ತು ಅನಂತ್ ಕುಮಾರ್ ಅವರನ್ನು ಕಳೆದುಕೊಂಡಿರುವಂತದ್ದು ಯಾರಿಗೆ ಎಷ್ಟು ನಷ್ಟ ಆಗಿದೆ ಅನ್ನೋದಕ್ಕಿಂತ ಅಡಿಕೆ ಬೆಳೆಗಾರರಿಗೆ ಬಹಳ ದೊಡ್ಡ ನಷ್ಟ ಆಗಿದೆ, ಬಹಳ ದೊಡ್ಡ ನಷ್ಟ ಆಗಿದೆ. ಜಾರ್ಜ್ ಫರ್ನಾಂಡಿಸ್ ಅವರನ್ನು ಕರ್ಕೊಂಡು ಬಂದು ನಾವೆಲ್ಲ ಹೋಗಿ ಒತ್ತಾಯ ಮಾಡಿ ಕರ್ಕೊಂಡು ಬಂದಿದ್ದು ಅವತ್ತು ಅಂತ ಹೇಳಿದರೆ, ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಅಷ್ಟು ದೊಡ್ಡ ಸಭೆ ಒಂದು ಬೆಳೆಗೆಗಾಗಿ ಆಯಿತು ಅಂತ ಹೇಳಿದರೆ, ಅದಕ್ಕೆ ಅನಂತ್ ಕುಮಾರ್ ಬಹಳ ದೊಡ್ಡ ಕಾರಣರಾಗಿದ್ದರು. ಅದಕ್ಕೆ ಎಚ್.ಎಸ್. ಮಂಜಪ್ಪನವರು ಬಹಳ ದೊಡ್ಡ ಪಾತ್ರವನ್ನು ಇವತ್ತು ನಿರ್ವಹಿಸಿದ್ದಾರೆ, ನಿರ್ವಹಿಸಿದ್ದಾರೆ.

​ಹೊಸಬಾಳೆ ಹೆಗಡೆ ಕುಟುಂಬದ ಕೊಡುಗೆ

​ನಾವು ಹೋದಾಗಲೆಲ್ಲಾ ಹೋದಾಗಲೆಲ್ಲಾ ನಿಮಗೆ ಗೊತ್ತಿರಬಹುದು, ಕೇಂದ್ರದ ಬಹಳಷ್ಟು ಜನ ಮಂತ್ರಿಗಳು ಅವರ ಕಾಲು ಮುಟ್ಟಿ ನಮಸ್ಕಾರ ಮಾಡ್ತಾರೆ. ಇದು ನಮಗೆ ಗೌರವ, ಹೆಮ್ಮೆ. ಅವರ ಕಾಲು ಮುಟ್ಟಿ ನಮಸ್ಕಾರ ಮಾಡ್ತಾರೆ. ಯಾಕೆಂದರೆ, ಹೊಸಬಾಳೆಯ ಹೆಗಡೆ ಕುಟುಂಬ ಅಂತಹ ಒಂದು ದೊಡ್ಡ ಶಕ್ತಿಯನ್ನು ದೇಶಕ್ಕೆ ಕೊಟ್ಟಿದೆ, ನಾವು ಯಾರೂ ಮರೆಯಬಾರದು. ದತ್ತಾತ್ರೇಯ ಹೊಸಬಾಳೆಯವರು ಇವತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯುನ್ನತ ಸ್ಥಾನದಲ್ಲಿದ್ದಾರೆ, ಎಚ್.ಎಸ್. ಮಂಜಪ್ಪನವರ ಸಹೋದರರು. ಆ ಕುಟುಂಬ ಇವತ್ತು ಒಬ್ಬ ಸನ್ಯಾಸಿಯಾಗಿ, ಸಂತರಾಗಿ ಇವತ್ತು ಕೆಲಸ ಮಾಡುತ್ತಾ ಇದ್ದಾರೆ, ಇಡೀ ಬದುಕನ್ನು ಆರ್‌ಎಸ್ಎಸ್, ಸಂಘಕ್ಕೋಸ್ಕರ ಕೊಟ್ಟಿರತಕ್ಕಂತವರು ದತ್ತಾತ್ರೇಯ ಹೊಸಬಾಳೆಯವರು. ಇವರು ಇವರನ್ನು ಕಲ್ಸಿಸಿರತಕ್ಕಂತಹ ಪಾತ್ರ, ಗೌರವ ಸಂಘದ ಮೇಲೆ ಇವತ್ತು ಸಚಿವರು, ಅನೇಕ ಮುಖ್ಯಮಂತ್ರಿಗಳಿಗೆ ಇರುವಂತಹ ಒಂದು ಭಾವನೆ. ಇದು ಬಹಳ ದೊಡ್ಡ ಕೆಲಸವನ್ನು ಮಾಡಿದೆ.

​ಹಾಗಾಗಿ ನಾವು ಇವತ್ತು ಎಚ್.ಎಸ್. ಮಂಜಪ್ಪನವರನ್ನು ಕರ್ಕೊಂಡು ಹೋದಾಗ, ಒಂದು ದಿನ ಹರಿಯಾಣ ಭವನಕ್ಕೆ ಹೋಗಿದ್ವಿ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಇದ್ದರು. ಅವರು ಮಂಜಪ್ಪನವರನ್ನು ನೋಡಿ ನಮಸ್ಕಾರ ಮಾಡಿದರು. ಅವರು ಅವತ್ತು ಒಂದು ಆದೇಶ ಕೊಟ್ಟರು— “ಇನ್ನ ಯಾವತ್ತೂ ಕೂಡ ಕರ್ನಾಟಕದಿಂದ ಮಂಜಪ್ಪನವರ ನೇತೃತ್ವದಲ್ಲಿ ಎಷ್ಟೇ ಜನ ಬರ್ತಾರೆ ಅಡಿಕೆ ಬೆಳೆಗಾರರು, ಅವರಿಗೆ ಉಚಿತವಾಗಿ ಹರಿಯಾಣ ಭವನವನ್ನು ಕೊಡಬೇಕು” ಅಂತ ಹೇಳಿ. ಉಚಿತವಾಗಿ! ಈಗ ನಾನು ಶಾಸಕನಾಗಿ, ಶಾಸಕನಾಗಿದ್ದೆ, ನಮಗೆ ಕರ್ನಾಟಕ ಭವನ ಸಿಗುತ್ತದೆ. ನಮ್ಮ ಉಳಿದವರು ಹೋದವರಿಗೆ ನಾವು ಬಹುಶಃ ಲಾಡ್ಜ್ ಮಾಡಬೇಕಾಗಿತ್ತು. ೧೦,೦೦೦ (10,000), ೧೫,೦೦೦ (15,000) ರೇಟ್ ಗೊತ್ತಿದೆ ನಿಮಗೆ. ಆದರೆ ಹರಿಯಾಣ ಭವನ ಮಂಜಪ್ಪನವರ ಹೆಸರಿನಲ್ಲಿ ಕಾಯಂ ಆಗಿ ಉಚಿತ, ಅಡಿಕೆ ಬೆಳೆಗಾರರಿಗೆ. ಮನೋಹರ್ ಲಾಲ್ ಖಟ್ಟರ್ ಅವರಿಗೆ ಒಂದು ಅಭಿನಂದನೆ ಹೇಳುತ್ತೇನೆ ನಾನು. ಮಂಜಪ್ಪನವರ ಮುಖ ನೋಡಿ ಸುಳ್ಳಲ್ಲ, ಅಂತಹ ಒಂದು ಆದೇಶವನ್ನು ಮಾಡಿದರು.

​ಹಾಗಾಗಿ ಇವತ್ತು ಯಾವುದೇ ಸಚಿವರ ಹತ್ತಿರ ಹೋದರೂ ಕೂಡ ಅಷ್ಟು ದೊಡ್ಡ ಗೌರವ ಅವರಿಗೆ. ಮಂಜಪ್ಪನವರನ್ನು ಕರ್ಕೊಂಡು ಹೋದಾಗ ನಾವು ಕಾಯಬೇಕಾಗಿರತಕ್ಕಂತಹ ಅವಶ್ಯಕತೆ ಇರಲಿಲ್ಲ. ಇವತ್ತು ನಮಗೆ ಬಹಳ ದೊಡ್ಡ ಬಲ ಅಲ್ಲಿ ಪ್ರಹ್ಲಾದ್ ಜೋಶಿಯವರು ಇದ್ದಾರೆ. ನಾವು ಇವತ್ತು ಅನಂತ್ ಕುಮಾರ್ ಅವರನ್ನು ಕಳೆದುಕೊಂಡಿರಬಹುದು, ಆ ಸ್ಥಾನವನ್ನು ಪ್ರಹ್ಲಾದ್ ಜೋಶಿಯವರು ತುಂಬುತ್ತಾ ಇದ್ದಾರೆ. ಪ್ರಹ್ಲಾದ್ ಜೋಶಿಯವರು ಅಡಿಕೆ ಬೆಳೆಗಾರರು ಅಲ್ಲದೆ ಇರಬಹುದು, ಆದರೆ ನಮ್ಮ ಜೊತೆಗಿರುವಂತಹ ಈ ಭಾಗದ ಜೊತೆಗಿರುವಂತಹ ಒಂದು ಸಂಬಂಧ, ಇವತ್ತು ಆ ಕೆಲಸವನ್ನು ಅವರ ಕಡೆಯಿಂದ ಮಾಡಿಸುತ್ತಾ ಇದೆ. ಸಚಿವರಿಗೆ ಹೇಳ್ತಾರೆ, ಮೊನ್ನೆ ದಿನ ನಾವು ಹೋದರೆ ನಿಮಗೆ ಗೊತ್ತಿರಲಿ, ಐದು ಜನ ಸೆಂಟ್ರಲ್ ಕ್ಯಾಬಿನೆಟ್ ಸಚಿವರಿದ್ದರು ಆ ಮೀಟಿಂಗ್‌ನಲ್ಲಿ! ನಮ್ಮ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ರಾಘವೇಂದ್ರ ಅವರು ಏರ್ಪಡಿಸಿದ್ದರು. ಐದು ಜನ ಕ್ಯಾಬಿನೆಟ್ ಸೆಂಟ್ರಲ್ ಕ್ಯಾಬಿನೆಟ್ ಸಚಿವರು ಅಡಿಕೆ ಬೆಳೆಗಾರರ ಪರವಾಗಿ ಮಾತನಾಡಲಿಕ್ಕೆ ಕೂತಿದ್ದರು. ಇದು ನಮ್ಮ ಅಡಿಕೆ ಬೆಳೆಗಾರರಿಗೆ ಇದ್ದಂತಹ ಒಂದು ಶಕ್ತಿ ಈ ಕೇಂದ್ರದಲ್ಲಿ, ನಾವು ಯಾರೂ ಕೂಡ ಮರೆಯಬಾರದು.

​ಇವತ್ತು ಅದೃಷ್ಟ, ಹಣೆಬರಹ ಎರಡೂ ಅಲ್ಲ, ಈ ಶಕ್ತಿ ಇಲ್ಲಿ ಕೆಲಸ ಮಾಡ್ತಾ ಇದೆ. ಇವತ್ತು ಮಂಜಪ್ಪನವರಿಗೆ ಸನ್ಮಾನ ಮಾಡ್ತಾ ಇದ್ದೀವಿ, ಸತ್ಕಾರ ಮಾಡ್ತಾ ಇದ್ದೀವಿ ಅಂದರೆ ಬೆಳೆಗಾರರ ಬದುಕಿಗೆ ಒಂದು ದೊಡ್ಡ ಶಕ್ತಿ ತುಂಬಿರತಕ್ಕಂತಹ ವ್ಯಕ್ತಿತ್ವ. ನಾವು ಯಾರೂ ಮರೆಯಬಾರದು, ಬಹಳ ದೊಡ್ಡ ಶಕ್ತಿ ಅದು. ಯಾರಾದರೂ ಕೇಳಿದರೆ ಒಂದು ಸ್ವಲ್ಪ ದುಡ್ಡು ಕೊಡಬಹುದು, ಆದರೆ ಜೀವನಪೂರ್ತಿ ಕಳೆದ ಅನೇಕ ವರ್ಷಗಳಿಂದ ಇವತ್ತು ಅಡಿಕೆ ಬೆಳೆಗೆ ಬೆಲೆ ಸ್ಥಿರವಾಗಿದೆ, ಬಿದ್ದು ಹೋದಾಗ ಅದಕ್ಕೊಂದು ಶಕ್ತಿ ತುಂಬುವ ಕೆಲಸ ಆಗ್ತಾ ಇದೆ ಅಂದರೆ ಮಂಜಪ್ಪನವರ ನೇತೃತ್ವದಲ್ಲಿ ಇವತ್ತು ಮಾಡಿರತಕ್ಕಂತಹ ಹೋರಾಟಗಳು, ಕೆಲಸಗಳು ಇವತ್ತು ಈ ದೊಡ್ಡ ಶಕ್ತಿಯನ್ನು ತುಂಬಿದ್ದಾವೆ.

​ಟಾಸ್ಕ್ ಫೋರ್ಸ್ ಮತ್ತು ಸುಪ್ರೀಂ ಕೋರ್ಟ್ ಸವಾಲುಗಳು

​ಈ ರಾಜ್ಯದಲ್ಲಿ ಅಡಿಕೆ ಬೆಳೆಗಾರರ ಟಾಸ್ಕ್ ಫೋರ್ಸ್ ರಚನೆ ಮಾಡುವಂತದ್ದು, ಅದಕ್ಕೂ ಕೂಡ ನಾವು ಮೀಟಿಂಗ್ ಸೇರಿದ್ವಿ. ಮಂಜಪ್ಪನವರೇ ಹೇಳಿದರು, “ಟಾಸ್ಕ್ ಫೋರ್ಸ್ ಮಾಡ್ರಿ, ನೀವು ಮುಖ್ಯಮಂತ್ರಿಯಾಗಿ ಪದೇ ಪದೇ ನಿಮ್ಮ ಹತ್ತಿರ ಬಂದು ನಿಮ್ಮ ಇದ್ದಂತಹ ಈ ಬ್ಯುಸಿಯೆಸ್ಟ್ ಶೆಡ್ಯೂಲ್‌ನಲ್ಲಿ ನಾವು ತೊಂದರೆ ಕೊಡೋಕಿಂತ ಒಂದು ಮಾಡಿ” ಅಂತ. ತಕ್ಷಣ ಒಪ್ಪಿ ಆದೇಶ ಮಾಡಿಬಿಟ್ಟರು. ಆ ಮೊದಲನೇ ಟಾಸ್ಕ್ ಫೋರ್ಸ್‌ಗೆ ನನ್ನನ್ನೇ ಅಧ್ಯಕ್ಷರನ್ನಾಗಿ ಮಂಜಪ್ಪನವರು ಸೂಚಿಸಿದ್ದು, ಸ್ನೇಹಿತರೆಲ್ಲಾ, ಅವತ್ತು ನಾನು ಅಧ್ಯಕ್ಷನಾಗಿದ್ದೆ. ಅದರಿಂದ ತುಂಬಾ ಕೆಲಸ ಮಾಡಿದೆವು. ನಮ್ಮ ಕೊಂಕೋಡಿ ಪದ್ಮನಾಭ ಅವರು ಇಲ್ಲಿ ಕೂತಿದ್ದಾರೆ. ಅವತ್ತು ಕ್ಯಾಂಪ್ಕೋ ಅಧ್ಯಕ್ಷರಾಗಿದ್ದರು, ಬಹಳ ದೊಡ್ಡ ಪ್ರಯತ್ನ ಮಂಜಪ್ಪನವರ ಜೊತೆಗೆ, ಭಾರಿ ದೊಡ್ಡ ಪ್ರಯತ್ನ. ಇವತ್ತು ರಾಮಯ್ಯ ಯೂನಿವರ್ಸಿಟಿಗೆ ಅಡಿಕೆ, ಅಡಿಕೆಯಲ್ಲಿ ಕ್ಯಾನ್ಸರ್ ಗುಣ ಇದೆಯಾ ಇಲ್ವಾ ಅನ್ನುವಂತದ್ದು ಸಂಶೋಧನೆಗೆ ಕೊಟ್ಟೆವು ನಾವು. ಅದರಿಂದ ಕೊಟ್ಟಿರುವುದು ಸಂಶೋಧನೆಯಾಗಿ ರಿಪೋರ್ಟ್ ಬಂದಿದೆ.

​ಯಾಕೆ ಹೇಳ್ತಾ ಇದ್ದೀನಿ ಅಂದರೆ ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ತಲೆ ಮೇಲೆ ಇನ್ನೂ ಕತ್ತಿ ತೂಗುತ್ತಾ ಇದೆ. ಅಡಿಕೆ ಕ್ಯಾನ್ಸರ್ ಕಾರಕ ಅಂತ ಹೇಳಿ ಸ್ವತಃ ಕೇಂದ್ರ ಸರ್ಕಾರ ಅಫಿಡವಿಟ್ ಕೊಟ್ಟಿದೆ ಸುಪ್ರೀಂ ಕೋರ್ಟ್‌ಗೆ, ಹಿಂದಿನ ಕೇಂದ್ರ ಸರ್ಕಾರ. ಹಿಂದಿನ ಕೇಂದ್ರ ಸರ್ಕಾರ ಕೊಟ್ಟಿದ್ದು. ಯಾಕೆ ಅಂದರೆ ವರ್ಲ್ಡ್ ಹೆಲ್ತ್ ಆರ್ಗನೈಸೇಶನ್‌ನ ಒಂದು ರಿಪೋರ್ಟ್ ಇತ್ತು. ಆ ರಿಪೋರ್ಟ್ ಸಿಕ್ಕಾಪಟ್ಟೆ ಖರಾಬು. ಇವತ್ತು ಆ ರಿಪೋರ್ಟನ್ನು ಹೊಡೆದು ಹಾಕಬೇಕಾಗಿದೆ ನಾವು. ಅದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಆಗಲೇ ಹೇಳಿದರು, ಯಾವ ಯಾವ ಸಂಸ್ಥೆಗಳು ನಮ್ಮ ಚನ್ನಗಿರಿಯ ಟಾಸ್ಕ್ ಫೋರ್ಸ್‌ನ ಶಿವಕುಮಾರ್ ಇದ್ದಾರೆ, ಟಿ.ಎಸ್.ಎಸ್ ಇದೆ, ಕ್ಯಾಂಪ್ಕೋ, ಮ್ಯಾಂಪ್ಕೋ ಸಂಸ್ಥೆಗಳಿಂದ ಹಿಡಿದು ನಿಮ್ಮ ಸಾಗರದ ಅನೇಕ ಸಂಸ್ಥೆಗಳಿಂದ ಹಿಡಿದು ಎಲ್ಲರೂ ದೊಡ್ಡ ಸಹಕಾರದೊಂದಿಗೆ ಹೋಗ್ತಾ ಇದ್ದಾರೆ.

​ಆಮೇಲೆ ಇದಕ್ಕೊಂದು ಸರಿಯಾದಂತಹ ಶಾಶ್ವತವಾದಂತಹ ಸಂಘಟನೆಯನ್ನು ಕಟ್ಟಬೇಕು ಅಂತ ಹೇಳಿ ಅಡಿಕೆ ಬೆಳೆಗಾರರ ಉತ್ಪನ್ನಗಳನ್ನು ಮಾರಾಟ ಮಾಡುವಂತಹ ಸಹಕಾರಿ ಸಂಸ್ಥೆಗಳನ್ನು ಒಗ್ಗೂಡಿಸಿ ಇಡೀ ರಾಜ್ಯದ ಒಂದು ಒಕ್ಕೂಟವನ್ನು ರಚನೆ ಮಾಡಬೇಕು ಅಂತ ಹೇಳಿ ಯೋಚನೆ ಮಾಡಿದ್ವಿ. ಅವತ್ತು ಲಕ್ಷ್ಮಣ್ ನಾಯಕ್ ಬದುಕಿದ್ದರು, ಕೊಂಕೋಡಿಯವರು ಮತ್ತು ಮಂಜಪ್ಪನವರು, ಶಿವಕುಮಾರ್ ಅನೇಕ ಹಿರಿಯರು ನಮ್ಮ ಜೊತೆಗಿದ್ದಾರೆ, ಕ್ಯಾಂಪ್ಕೋದ ಸತೀಶ್ಚಂದ್ರ ಅವರು ಇದ್ದಾರೆ ಅನೇಕರು. ಇದನ್ನು ಮಾಡಬಹುದು ಅಂತ. ನಾವು ಯೋಚನೆ ಮಾಡಿದೆವು, ಒಬ್ಬ ರೈತ ಮಾರಾಟ ಮಾಡುವ ಅಡಿಕೆ ಯಾವ ಸಂಸ್ಥೆಯಲ್ಲಿ ಮಾರಾಟ ಮಾಡ್ತಾನೋ ಆ ಸಂಸ್ಥೆಯವರು ಒಂದು ಕ್ವಿಂಟಾಲ್‌ಗೆ ಎರಡು ರೂಪಾಯಿಯನ್ನು ಈ ಹೋರಾಟದ ನಿಧಿಗೆ ಕೊಡಬೇಕು ಅಂತ ಹೇಳಿ ಮಾಡಿದೆವು. ಇವತ್ತು ಆ ನಿಧಿ ಕೆಲವರು ಕೊಟ್ಟಿದ್ದಾರೆ. ಒಂದಷ್ಟು ಹಣವೂ ಸಂಗ್ರಹವಾಗ್ತಾ ಇದೆ. ಇವತ್ತು ನಾವು ಹೆದರುವುದಿಲ್ಲ, ಸುಪ್ರೀಂ ಕೋರ್ಟ್‌ನಲ್ಲಿ ಅತ್ಯಂತ ಸೀನಿಯರ್ ಅಡ್ವೊಕೇಟ್‌ನ ಇಡಲಿಕ್ಕೆ, ಬೆಳೆಗಾರರ ಪರವಾಗಿ ಇಡಲಿಕ್ಕೆ ಇವತ್ತು ಶಕ್ತಿ ಇದೆ. ಯಾಕೆಂದರೆ ಅಡಿಕೆ ಬೆಳೆಗಾರರೊಬ್ಬ ಮಾಡಲಿಕ್ಕೆ ಆಗದೇ ಇರುವ ಈ ಹೋರಾಟವನ್ನು ನಿಮ್ಮೆಲ್ಲರ ಪರವಾಗಿ ಒಂದು ಸಂಘಟನೆ ಹೋರಾಟ ಮಾಡ್ತಾ ಇದೆ.

​ಅದಕ್ಕಾಗಿ ಇವತ್ತು ಮಂಜಪ್ಪನವರನ್ನು ನಾವು ಇವತ್ತು ಸನ್ಮಾನ ಮಾಡಬೇಕಾಗಿದೆ, ಅಂತಹ ಒಂದು ಆಲೋಚನೆ ಬಂದು ಇವತ್ತು ನಾವು ಮಾಡಿದ್ದೇವೆ. ಹಾಗೇನೇ ಅಡಿಕೆಯಲ್ಲಿ ಈಗಾಗ ಉಗೇಡರು ಹೇಳಿದರು, ಎಷ್ಟು ಪರ್ಸೆಂಟೇಜ್ ಅದರಲ್ಲಿ ನೀರಿನ ಅಂಶ ಇರಬೇಕು ಅಂತ ಹೇಳಿ, ಮಾಯಿಶ್ಚರ್ ಕಂಟೆಂಟ್ (Moisture Content). ವಿದೇಶದಲ್ಲೂ ಇದೊಂದು ಬೇರೆ ರಾಜ್ಯದಲ್ಲಿ ತಡೆದು ನಿಲ್ಲಿಸಿಬಿಟ್ಟರು ನಮ್ಮ ಅಡಿಕೆ ಬೆಳೆಗಾರರ ಲಾರಿ. ಅದಕ್ಕಾಗಿ ಇವತ್ತು ಸಂಶೋಧನೆಗೆ ಕೊಟ್ಟಿದ್ದೇವೆ, ಕೇಂದ್ರೀಯ ಸಂಶೋಧನಾ ಅಡಿಕೆ ತೋಟದ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ ಇವತ್ತು ಸಂಶೋಧನೆ ಆಗ್ತಾ ಇದೆ. ನಮ್ಮ ಸಂಘಟನೆಯಿಂದ ಅದನ್ನು ಕೊಟ್ಟಿದ್ದೇವೆ. ನಮಗೆ ಇವತ್ತು ೧೧% (11%) ಇಲ್ಲದೇ ಹೋದರೆ ತೀರಾ ೭% (7%)ಗೆ ಇಟ್ಟರೆ ನಮ್ಮ ಅಡಿಕೆ ಧೂಳೆದ್ದು ಹೋಗುತ್ತದೆ, ನಿಮಗೆ ಗೊತ್ತಿದೆ. ಎಷ್ಟು ಹೆಚ್ಚು ೫ ದಿವಸ, ೬ ದಿವಸ ಒಣಗಿಸಿದರೂ ೧೧%ಗಿಂತ ಕಮ್ಮಿ ಇಡಲಿಕ್ಕೆ ಆಗೋದೇ ಇಲ್ಲ ನಾವು. ಆದ್ದರಿಂದ ಅದನ್ನು ಇವತ್ತು ಸಂಶೋಧನೆ ಮಾಡಿ ಕೇಂದ್ರ ಸರ್ಕಾರಕ್ಕೆ ಕೊಡಬೇಕಾಗಿದೆ, ಅದನ್ನು ನಾವು ಇವತ್ತು ಮಾಡ್ತಾ ಇದ್ದೇವೆ. ಅದಕ್ಕಾಗಿ ಹಣವನ್ನು ಇವತ್ತು ವಿನಿಯೋಗ ಮಾಡಿದ್ದೇವೆ. ನಿಮಗೆ ಹೇಳ್ತೀನಿ ಅನೇಕ ಸಂಗತಿಗಳನ್ನು ಈಗಾಗಲೇ ಹೇಳಿದರು ಸೂರ್ಯನಾರಾಯಣ ಅವರು, ನಾನು ಮತ್ತೆ ಅದನ್ನೆಲ್ಲಾ ಹೇಳೋಕೆ ಹೋಗೋದಿಲ್ಲ. ಇಂತಹ ಈ ಸಂಘಟನೆ ಅಡಿಕೆ ಬೆಳೆಗಾರರ ಪರವಾಗಿ ಹಗಲಿರುಳೂ ಕೂಡ ಒಂದು ರಕ್ಷಾ ಕವಚವಾಗಿ ನಿಂತಿದೆ. ಅಂತಹ ಒಂದು ಸಂಘಟನೆಯನ್ನು ಕಟ್ಟಲಿಕ್ಕೆ ಬಹಳ ದೊಡ್ಡ ಯೋಗದಾನವನ್ನು ಎಚ್.ಎಸ್. ಮಂಜಪ್ಪನವರು ಮಾಡಿದ್ದಾರೆ ಅನ್ನುವ ಕಾರಣಕ್ಕಾಗಿ ನಮ್ಮೆಲ್ಲರ ಸವಿನಯ ಇವತ್ತು ಅವರನ್ನು ಅಭಿನಂದಿಸುತ್ತೇನೆ, ಅಭಿನಂದಿಸುತ್ತೇನೆ. ಕೇಂದ್ರ ಸರ್ಕಾರದಲ್ಲಿ ಇವತ್ತು ಅನೇಕ ಕೆಲಸಗಳು ಇದ್ದಾವೆ ಅನ್ನೋದನ್ನು—

​ಪ್ರಸ್ತುತ ಸವಾಲುಗಳು ಮತ್ತು ಬೆಳೆಗಾರರಿಗೆ ವಿನಂತಿ

​ನಿಮಗೆ ಹೇಳ್ತೀನಿ ಇಲ್ಲೆಲ್ಲಾ ಅಡಿಕೆ ಬೆಳೆಗಾರರು ಇದ್ದೀರಿ, ನನ್ನ ವಿನಂತಿ ಇಷ್ಟೇನೆ, ಇತ್ತೀಚಿಗೆ ಎರಡು ಮೂರು ಲಾರಿಗಳು ಒಂದು ತಿಂಗಳಿಂದ ನಿಂತಿದೆ ಮಹಾರಾಷ್ಟ್ರದ ಬಾಂಬೆಯಲ್ಲಿ. ನಾಲ್ಕು ತಿಂಗಳಿಂದ! ನಾಲ್ಕು ತಿಂಗಳಿಂದ ಲೋಡ್ ಆಗಿರೋ ಅಡಿಕೆ ಲಾರಿ ನಿಂತಿದೆ. ಯಾಕೆ ಅಂತ ಹೇಳಿದರೆ, ನಮ್ಮ ಅಡಿಕೆಗೆ ಬಣ್ಣ ಹಾಕಿದ್ದೀವಿ ಇವತ್ತು, ಈ ಬಣ್ಣ ಫೇಕ್ (Fake) ಅಂತ. ಈ ಬಣ್ಣ ನಾವೆಲ್ಲ ಹೆಂಗೆ ಹಾಕ್ತಿದ್ವಿ? ಹೊನ್ನೆ, ಹೊನ್ನೆ ಮರದ ಚಕ್ಕೆ, ಗಂಧದ ಚಕ್ಕೆ, ನೇರಳೆ ಚಕ್ಕೆ ಇದನ್ನೆಲ್ಲಾ ತಂದು ಬಹಳ ದೊಡ್ಡ ಇದನ್ನು ಮಾಡಿ ಅದನ್ನು ಚೋಗರು ಮಾಡಿ ನಾವು ಅಡಿಕೆ ಬೇಯಿಸುತ್ತಿದ್ವಿ. ಈಗ ಬಹಳ ಸುಲಭ, ಇಲ್ಲಿ ಸಿಗುತ್ತದೆ ಕೆಮಿಕಲ್ ಬಣ್ಣ. ಅದನ್ನು ತಂದು ಹಾಕಿ, ಕಾರ್ ಮಿಕ್ಸ್ ಮಾಡ್ತಾರಲ್ಲ ಆ ಬಣ್ಣದಲ್ಲಿ ಸುಲಭವಾಗಿ ಬಣ್ಣ ಆಯ್ತು. ಇದರ ಪರಿಣಾಮ ನಾವು ಇವತ್ತು ಸಿಕ್ಕಿಹಾಕಿಕೊಂಡಿದ್ದೇವೆ.

​ನಾವು ಇವತ್ತು ಕೆಂಪಡಿಕೆ ಬೆಳೆಗಾರರು ನಮ್ಮ, ನಮ್ಮ ಎದುರುಗಡೆ ಬಹಳ ದೊಡ್ಡ ಆತಂಕದ ಕ್ಷಣಗಳು ಇದ್ದಾವೆ, ನಾವು ಮರೆಯಬಾರದು. ಇವತ್ತು ಯಾರೇ ರೈತ ಪ್ರೊಸೆಸ್ (Process) ಮಾಡಿದರೆ ಇನ್ನು ಹಾಕುವುದಿಲ್ಲ. ಇವತ್ತು ಇನ್ನೊಂದು ಸಿಸ್ಟಮ್ ಸ್ಟಾರ್ಟ್ ಆಗಿದೆ ನಮಗೆ. ಬೆಳೆದವರು ಇವತ್ತು ಪ್ರೊಸೆಸ್ ಮಾಡ್ತಾ ಇಲ್ಲ ಅವರು, ಅಡಿಕೆ ಸುಲಿದು ಒಣಗಿಸಿ ಮಾರ್ಕೆಟ್‌ಗೆ ತರುತ್ತಾ ಇಲ್ಲ, ಚೇಡಿಗೆ ಕೊಡ್ತಾ ಇದ್ದಾರೆ. ಚೇಡಿಗೆ ಕೊಟ್ಟವರಿಗೆ ಅವನು ತಮಸ್ಸೆ ಇಲ್ಲ, ಅವನು ಏನು ಹಾಕ್ತಾನೆ ಗೊತ್ತಿಲ್ಲ. ಅವನು ಏನು ಹಾಕ್ತಾನೆ ನಮಗೇ ಗೊತ್ತಾಗುವುದಿಲ್ಲ. ಅದರಿಂದ ನಮ್ಮ ಅಡಿಕೆಗೆ ಈ ಪರಿಸ್ಥಿತಿ ಬಂದಿದೆ. ನಾಳೆ ಏನಾದರೂ ಹೆಚ್ಚಿಕಮ್ಮಿ ಆದರೆ ನಮ್ಮ ಕೆಂಪಡಿಕೆ ಒಂದು ಹೋಳು ಅಡಿಕೆ ಹೊರಗಡೆ ಹೋಗದಿದ್ದಂತಹ ಪರಿಸ್ಥಿತಿ ಇವತ್ತು ನಿರ್ಮಾಣ ಆಗ್ತಾ ಇದೆ. ನಾವು ಚೇಡಿಗೆ ಕೊಟ್ಟಿರತಕ್ಕಂತಹ ಮನುಷ್ಯ ಏನು ಮಾಡ್ತಾನೆ ಅಂತ ಹೇಳಿ ನಾವು ಕಂಡುಹಿಡಿಯಬೇಕು ಇಲ್ಲಿ ಇದ್ದಂತವರು. ಕಾನೂನು ಭಾಗದಲ್ಲಿ ಏನು ಮಾಡಲಿಕ್ಕೆ ಆಗುವುದಿಲ್ಲ. ನಮ್ಮೆಲ್ಲರ ಪ್ರಭಾವದಿಂದ ಇವತ್ತು ನಾಲ್ಕು ತಿಂಗಳಿಂದ ಲಾರಿ ನಿಂತಿದೆ, ಏನಾಗಬಹುದು ಹೇಳ್ತೀನಿ ನಾನು.

​ದಯವಿಟ್ಟು ಈ ಸಂದರ್ಭದಲ್ಲಿ ನಾನು ಮನವಿ ಮಾಡ್ತಾ ಇದ್ದೇನೆ, ಅಡಿಕೆ ಬೆಳೆ ಬೆಳೆಯುವುದು ಮಾತ್ರ ಅಲ್ಲ, ಮಾರುಕಟ್ಟೆಗೆ ಹೋಗುವವರೆಗೆ ನಾವು ಕಣ್ಣಿಟ್ಟು ಕಾಯಬೇಕಾದಂತದ್ದು. ನಮ್ಮ ಬದುಕಿಗೆ ಯಾರು ಏನು ಹಾಕ್ತಾ ಇದ್ದಾರೆ, ನಮ್ಮ ತಲೆ ಮೇಲೆ ಕತ್ತಿ ಏಟನ್ನು ಈ ರೀತಿಯಾಗಿ ಯಾರು ಹಾಕ್ತಾ ಇದ್ದಾರೆ ಅಂತ ಹೇಳಿ ಗಮನಿಸುವಂತಹ ಕೆಲಸವನ್ನು ನಾವು ಮಾಡಬೇಕು ಎಂದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

ರಾಮಲಿಂಗಾರೆಡ್ಡಿ ನಮ್ಮ ಸ್ನೇಹಿತರು, ಎಲ್ಲಾ ಸಮಸ್ಯೆ ಕ್ಲಿಯರ್: ಅವರ ರಾಜೀನಾಮೆ ಅಂಗಿಕರಿಸುವುದಿಲ್ಲ; ಸಿಎಂ ಡಿ.ಕೆ.ಶಿವಕುಮಾರ್

2 Mins Read

ಮಾಜಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಕೃತಜ್ಞತೆ ಸಲ್ಲಿಸಿದ ವಿವಿಧ ವಿಭಾಗದ ಅರಣ್ಯ ಸಿಬ್ಬಂದಿ

2 Mins Read

BIG NEWS : ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕಾರ ಮಾಡಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

2 Mins Read
Recent News

ರಾಮಲಿಂಗಾರೆಡ್ಡಿ ನಮ್ಮ ಸ್ನೇಹಿತರು, ಎಲ್ಲಾ ಸಮಸ್ಯೆ ಕ್ಲಿಯರ್: ಅವರ ರಾಜೀನಾಮೆ ಅಂಗಿಕರಿಸುವುದಿಲ್ಲ; ಸಿಎಂ ಡಿ.ಕೆ.ಶಿವಕುಮಾರ್

ಮಾಜಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಕೃತಜ್ಞತೆ ಸಲ್ಲಿಸಿದ ವಿವಿಧ ವಿಭಾಗದ ಅರಣ್ಯ ಸಿಬ್ಬಂದಿ

ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ

BIG NEWS : ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕಾರ ಮಾಡಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

State News
KARNATAKA

ರಾಮಲಿಂಗಾರೆಡ್ಡಿ ನಮ್ಮ ಸ್ನೇಹಿತರು, ಎಲ್ಲಾ ಸಮಸ್ಯೆ ಕ್ಲಿಯರ್: ಅವರ ರಾಜೀನಾಮೆ ಅಂಗಿಕರಿಸುವುದಿಲ್ಲ; ಸಿಎಂ ಡಿ.ಕೆ.ಶಿವಕುಮಾರ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು : “ರಾಮಲಿಂಗಾರೆಡ್ಡಿ ಅವರು ನನ್ನ ಸ್ನೇಹಿತರು, ಅವರೊಂದಿಗೆ ಮಾತನಾಡಿದ್ದು, ಎಲ್ಲಾ ಸಮಸ್ಯೆ ಬಗೆಹರಿಸಲಾಗಿದೆ. ಯಾವುದೇ ಕಾರಣಕ್ಕೂ ಅವರ ರಾಜಿನಾಮೆ…

ಮಾಜಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಕೃತಜ್ಞತೆ ಸಲ್ಲಿಸಿದ ವಿವಿಧ ವಿಭಾಗದ ಅರಣ್ಯ ಸಿಬ್ಬಂದಿ

ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ

BIG NEWS : ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕಾರ ಮಾಡಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.