ಪುಣೆ: ಮಹಾರಾಷ್ಟ್ರ-ಕರ್ನಾಟಕದ ನಡುವೆ ಗಡಿ ವಿವಾದ ಕಿಡಿ ಹೆಚ್ಚಾಗಿದ್ದು, ಕಾಲು ಕೆರೆದು ಮಹಾರಾಷ್ಟ್ರ ಜಗಳಕ್ಕೆ ನಿಂತುಕೊಂಡಿದ್ದು, ಸುಖಸುಮ್ಮನೆ ಕಿಡಿಕಾರುತ್ತಿದೆ.
ಈ ನಡುವೆ ಇಂದು ಮಹಾರಾಷ್ಟ್ರದಿಂದ ಬೆಳಗಾವಿ ಬರುತ್ತಿದ್ದ ಲಾರಿಗಳ ಮೇಲೆ ಮಸಿ ಹಚ್ಚಿ ಕರವೇ ಪರ ಹೋರಾಟಗಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ನಡುವೆ ಪುಣೆಯಲ್ಲಿರುವ ಬಸ್ಡಿಪೋನಲ್ಲಿ ನಿಂತಿದ್ದ ಸರಿ ಸುಮಾರು ಎಂಟಕ್ಕೂ ಅಧಿಕ ಬಸ್ಗಳ ಮೇಲೆ ‘ಜೈ ಮಹಾರಾಷ್ಟ್ರ’ ಅಂತ ಬರೆದು ತಮ್ಮ ಉದ್ದಟ್ಟತನವನ್ನು ಮೆರೆದಿದ್ದಾರೆ. ಈ ನಡುವೆ ಇಂದು ಸಂಜೆ ಕೊಗನೊಳ್ಳಿ ಚೆಕ್ಪೋಸ್ಟ್ ಬಳಿಗೆ ಬರುವುದಾಗಿ ಮಹಾರಾಷ್ಟ್ರ ಸೊಲ್ಲಾಪುರದ ನಾಯಕರುಗಳು ಹೇಳಿಕೊಂಡಿದ್ದು, ಪರಿಸ್ಥಿತಿಯನ್ನು ಇನ್ನೂ ಬಿಗಾಡಾಡಿಸುವಂತೆ ಮಾಡಿದೆ.