ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವಂತ ಮೊದಲಾರ್ಧದ ಸದನದಕ್ಕೆ ವಿಪಕ್ಷಗಳ ಸದಸ್ಯರಿಗಿಂತ, ಆಡಳಿತ ಪಕ್ಷದ ಸಚಿವರು, ಸದಸ್ಯರೇ ಹೆಚ್ಚು ಗೈರು ಹಾಜರಾಗಿರೋದಾಗಿ ತಿಳಿದು ಬಂದಿದೆ. ಇದೇ ಕಾರಣಕ್ಕೆ ಸ್ಪೀಕರ್ ಕೂಡ ಗರಂ ಆಗಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವಂತ ಚಳಿಗಾಲದ ಅಧಿವೇಶನದ ವೇಳೆಯಲ್ಲಿಯೇ ಬೆಳಗಾವಿ ಗಡಿ ವಿವಾದದ ಕುರಿತಂತೆ ಮಹಾರಾಷ್ಟ್ರದಿಂದ ಕ್ಯಾತೆ ತೆಗೆಯಲಾಗಿತ್ತು. ಈ ಹಿನ್ನಲೆಯಲ್ಲಿ ಸದನದಲ್ಲಿ ಖಂಡನಾ ನಿರ್ಣಯ ಮಂಡಿಸಿ ಸರ್ವಾನುಮತದಿಂದ ಒಪ್ಪಿಗೆಯನ್ನು ಸಿಎಂ ಬೊಮ್ಮಾಯಿ ನಿನ್ನೆಯಷ್ಟೇ ಪಡೆದಿದ್ದರು.
ಗಡಿ ವಿಚಾರವಾಗಿ ಸದನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದರೂ, ಆಡಳಿತ ಪಕ್ಷದ ಸದಸ್ಯರೂ, ಅದರಲ್ಲೂ ಬೆಳಗಾವಿ ಭಾಗದ ಸದಸ್ಯರೇ ಗೈರು ಹಾಜರಿದ್ದರು ಎಂಬುದಾಗಿ ತಿಳಿದು ಬಂದಿದೆ. 8 ಶಾಸಕರು ಮಾತ್ರವೇ ಗಡಿ ವಿವಾದ ಬಗೆಗಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದಾಗೆ ಹೇಳಲಾಗುತ್ತಿದೆ.
ಇನ್ನೂ ಸದನ ಆರಂಭದಿಂದಲೂ ದೂರವೇ ಉಳಿದಿದ್ದಂತ ಬಿಜೆಪಿಯ ಕೆ.ಎಸ್ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರು, ಸಿಎಂ ಮನವೊಲಿಕೆಯ ಬಳಿಕ, ಸದನದಕ್ಕೆ ಹಾಜರಾಗಿದ್ದರು.
ದೆಹಲಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಮಗುವಿನ ಅಪಹರಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಪಂಚರತ್ನ ರಥಯಾತ್ರೆಯಲ್ಲಿರುವಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸದನದ ಮೊದಲಾರ್ಧದಿಂದಲೂ ಗೈರು ಹಾಜರಾಗಿದ್ದರು. ಅಲ್ಲದೇ ಜೆಡಿಎಸ್ ನ 7-8 ಶಾಸಕರು ಅಷ್ಟೇ ಹಾಜರಿದ್ದದ್ದು.
ಬಿಜೆಪಿಯ ಅರ್ಧದಷ್ಟು ಶಾಸಕರು ಮಾತ್ರವೇ ಹಾಜರಿದ್ದದ್ದು ಅಲ್ಲದೇ, ಸಚಿವರು ಕೂಡ ಸದನದಲ್ಲಿ ಗೈರು ಹಾಜರಿದ್ದರು. ಹೀಗಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಚಿವರ ಕಾರ್ಯ ವೈಖರಿಯ ಬಗ್ಗೆ ಸದನದಲ್ಲೇ ಬೇಸರ ವ್ಯಕ್ತ ಪಡಿಸಿದ್ದರು.