ಬೆಂಗಳೂರು: ಮಹಿಳೆಯ ಮೇಲೆ ಸಚಿವ ವಿ.ಸೋಮಣ್ಣ ( Minister V Somanna ) ಮಾಡಿದ ಹಲ್ಲೆ ಬಿಜೆಪಿ ಪಕ್ಷದ ಸ್ತ್ರೀ ವಿರೋಧಿ ಮನಸ್ಥಿತಿಗೆ ಹಿಡಿದ ಕನ್ನಡಿ. ಸ್ವತಃ ಬಿಜೆಪಿ ಸರ್ಕಾರದ ( BJP Government ) ಸಚಿವರೇ ನಡೆಸುವ ದೌರ್ಜನ್ಯಗಳಿಗೆ ಕ್ರಮ ಕೈಗೊಳ್ಳದ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರಿಂದ ರಾಜ್ಯದಲ್ಲಿ ನಡೆಯುವ ಮಹಿಳಾ ದೌರ್ಜನ್ಯಗಳನ್ನು ತಡೆಯಲು ಸಾಧ್ಯವೇ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ಮಹಿಳೆಯ ಮೇಲೆ ಸಚಿವ ವಿ.ಸೋಮಣ್ಣ ಮಾಡಿದ ಹಲ್ಲೆ @BJP4Karnataka ಪಕ್ಷದ ಸ್ತ್ರೀ ವಿರೋಧಿ ಮನಸ್ಥಿತಿಗೆ ಹಿಡಿದ ಕನ್ನಡಿ.
ಸ್ವತಃ ಬಿಜೆಪಿ ಸರ್ಕಾರದ ಸಚಿವರೇ ನಡೆಸುವ ದೌರ್ಜನ್ಯಗಳಿಗೆ ಕ್ರಮ ಕೈಗೊಳ್ಳದ ಸಿಎಂ @BSBommai ಅವರಿಂದ ರಾಜ್ಯದಲ್ಲಿ ನಡೆಯುವ ಮಹಿಳಾ ದೌರ್ಜನ್ಯಗಳನ್ನು ತಡೆಯಲು ಸಾಧ್ಯವೇ?#ಮಹಿಳಾವಿರೋಧಿಬಿಜೆಪಿ
— Karnataka Congress (@INCKarnataka) October 23, 2022
ಈ ಕುರಿತಂತೆ ಮಹಿಳಾ ವಿರೋಧಿ ಬಿಜೆಪಿ ಎಂಬುದಾಗಿ ಸರಣಿ ಟ್ವಿಟ್ ಮಾಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರ ಮಹಿಳೆಯರನ್ನು ಗೌರವಿಸುವುದೇ ಆದರೆ, ನಿಮ್ಮ ಆಡಳಿತವು ಮಹಿಳೆಯರಿಗೆ ಸುರಕ್ಷತೆ ನೀಡಲು ಬದ್ಧವಾಗಿದ್ದರೆ, ನಿಮ್ಮ ಪಕ್ಷವು ನಿಜಕ್ಕೂ ಮಹಿಳೆಯರ ಮೇಲೆ ಗೌರವ ಹೊಂದಿರುವುದೇ ಆದರೆ ಕೂಡಲೇ ಸಚಿವ ವಿ. ಸೋಮಣ್ಣರನ್ನು ವಜಾಗೊಳಿಸಿ ಅದನ್ನು ಸಾಬೀತುಪಡಿಸಿ ಎಂಬುದಾಗಿ ಸವಾಲ್ ಹಾಕಿದೆ.
ಸಿಎಂ @BSBommai ಅವರೇ,
ನಿಮ್ಮ ಸರ್ಕಾರ ಮಹಿಳೆಯರನ್ನು ಗೌರವಿಸುವುದೇ ಆದರೆ,ನಿಮ್ಮ ಆಡಳಿತವು ಮಹಿಳೆಯರಿಗೆ ಸುರಕ್ಷತೆ ನೀಡಲು ಬದ್ಧವಾಗಿದ್ದರೆ,
ನಿಮ್ಮ ಪಕ್ಷವು ನಿಜಕ್ಕೂ ಮಹಿಳೆಯರ ಮೇಲೆ ಗೌರವ ಹೊಂದಿರುವುದೇ ಆದರೆ ಕೂಡಲೇ ಸಚಿವ ವಿ. ಸೋಮಣ್ಣರನ್ನು ವಜಾಗೊಳಿಸಿ ಅದನ್ನು ಸಾಬೀತುಪಡಿಸಿ.#SayCM #ಮಹಿಳಾವಿರೋಧಿಬಿಜೆಪಿ
— Karnataka Congress (@INCKarnataka) October 23, 2022
ರೈತರು ಗೊಬ್ಬರ ಕೇಳಿದರೆ ಗುಂಡೇಟು ಕೊಡ್ತಾರೆ. ಯುವಕರು ನೌಕರಿ ಕೇಳಿದರೆ ಲಾಠಿ ಏಟು ಕೊಡ್ತಾರೆ. ಮಹಿಳೆಯರು ಸೌಲಭ್ಯ ಕೇಳಿದರೆ ಕಪಾಳಮೋಕ್ಷ ಮಾಡ್ತಾರೆ ಇದು #40PercentSarkara ಜನಸಾಮಾನ್ಯರಿಗೆ ನೀಡುವ ಕೊಡುಗೆಗಳು. ದೇಶದ ಉದ್ದಕ್ಕೂ ಬಿಜೆಪಿಯಲ್ಲಿ ಮಹಿಳಾ ಪೀಡಕರೇ ಸೇರಿಕೊಂಡಿದ್ದಾರೆ ಎಂದು ವಾಗ್ಧಾಳಿ ನಡೆಸಿದೆ.
◆ರೈತರು ಗೊಬ್ಬರ ಕೇಳಿದರೆ ಗುಂಡೇಟು ಕೊಡ್ತಾರೆ.
◆ಯುವಕರು ನೌಕರಿ ಕೇಳಿದರೆ ಲಾಠಿ ಏಟು ಕೊಡ್ತಾರೆ.
◆ಮಹಿಳೆಯರು ಸೌಲಭ್ಯ ಕೇಳಿದರೆ ಕಪಾಳಮೋಕ್ಷ ಮಾಡ್ತಾರೆ
ಇದು #40PercentSarkara ಜನಸಾಮಾನ್ಯರಿಗೆ ನೀಡುವ ಕೊಡುಗೆಗಳು.
ದೇಶದ ಉದ್ದಕ್ಕೂ ಬಿಜೆಪಿಯಲ್ಲಿ ಮಹಿಳಾ ಪೀಡಕರೇ ಸೇರಿಕೊಂಡಿದ್ದಾರೆ.#ಮಹಿಳಾವಿರೋಧಿಬಿಜೆಪಿ
— Karnataka Congress (@INCKarnataka) October 23, 2022
ಈ ಹಿಂದೆ ಬಿಜೆಪಿ ಶಾಸಕ ಸಿದ್ದು ಸವದಿ ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಗರ್ಭಪಾತವಾಗಿ ಒಂದು ಜೀವದ ಹತ್ಯೆಗೆ ಕಾರಣರಾಗಿದ್ದರು. ಸರ್ಕಾರ ಕಾನೂನು ಕ್ರಮ ಜರುಗಿಸಲಿಲ್ಲ. ಈಗ ಸಚಿವ ವಿ.ಸೋಮಣ್ಣರ ಸರದಿ, ಎಂದಿನಂತೆ ಸರ್ಕಾರದ ಮೌನ. ಬಸವರಾಜ ಬೊಮ್ಮಾಯಿ ಅವರೇ, ಮಹಿಳೆಯರ ಘನತೆ ಉಳಿಸಲು ನಿಮ್ಮ ಕ್ರಮವೇನು #SayCM ಎಂದು ಕೇಳಿದೆ.
ಈ ಹಿಂದೆ ಬಿಜೆಪಿ ಶಾಸಕ ಸಿದ್ದು ಸವದಿ ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಗರ್ಭಪಾತವಾಗಿ ಒಂದು ಜೀವದ ಹತ್ಯೆಗೆ ಕಾರಣರಾಗಿದ್ದರು.
ಸರ್ಕಾರ ಕಾನೂನು ಕ್ರಮ ಜರುಗಿಸಲಿಲ್ಲ.ಈಗ ಸಚಿವ ವಿ.ಸೋಮಣ್ಣರ ಸರದಿ, ಎಂದಿನಂತೆ ಸರ್ಕಾರದ ಮೌನ.@BSBommai ಅವರೇ, ಮಹಿಳೆಯರ ಘನತೆ ಉಳಿಸಲು ನಿಮ್ಮ ಕ್ರಮವೇನು #SayCM#ಮಹಿಳಾವಿರೋಧಿಬಿಜೆಪಿ
— Karnataka Congress (@INCKarnataka) October 23, 2022