ಬೆಳಗಾವಿ: ಮಂಗಳವಾರ ರಾತ್ರಿ ನಿಧನರಾದ ಸಚಿವ ಉಮೇಶ್ ಕತ್ತಿಯವರ ಅಂತ್ಯಕ್ರಿಯೆಯನ್ನು ಬೆಲ್ಲದ ಬಾಗೇವಡಿಯಲ್ಲಿರುವ ಅವರ ಫಾರ್ಮ್ ಹೌಸ್ನಲ್ಲಿ ನೇರವೇರಿಸಲಾಯಿತು. ಇಂದು ಮಧ್ಯಾಹ್ನ ಬೆಂಗಳೂರಿನಿಂದ ಬೆಳಗಾವಿಗೆ ಉಮೇಶ್ ಕತ್ತಿಯವರ ಪಾರ್ಥೀವ ಶರೀರವನ್ನು ವಿಶೇಶ ವಿಮಾನದ ಮೂಲಕ ತೆಗೆದುಕೊಂಡ ಬರಲಾಗಿತ್ತು. ಬಳಿಕ ಅವರ ಪಾರ್ಥಿವ ಶರೀರವನ್ನು ಬೆಲ್ಲದ ಬಾಗೇವಾಡಿ ತನಕ ಸೇನಾ ವಾಹನದಲ್ಲಿ ಕರೆಕೊಂಡು ಹೋಗಲಾಯಿತು. ಈ ವೇಳೆ ದಾರಿಯುದ್ದಕ್ಕೂ ಅಗಲಿದ ತಮ್ಮ ಅಂತಿಮ ನಾಯಕನಿಗೆ ಜನತೆ ಹೂವನ್ನು ಎರಚಿ ಕಣ್ಣೀರಿಟ್ಟು ವಿದಾಯ ಹೇಳುತ್ತಿದ್ದ ದೃಶ್ಯಕಂಡ ಕಂಡು ಬಂತು.
ಉಮೇಶ್ ಕತ್ತಿಯವರ ಫಾರ್ಮ್ ಹೌಸ್ನಲ್ಲಿ ಅವರ ತಂದೆ ತಾಯಿ ಅವರ ಸಮಾಧಿ ಪಕ್ಕದಲ್ಲಿ ಅವರ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಗುರು ಹಿರಿಯರು, ಕುಟುಂಬ ವರ್ಗದವರು ಸೇರಿದಂತೆ ಸಾವಿರಾರು ಮಂದಿಯ ಅಶ್ರುತರ್ಪಣದಲ್ಲಿ ನೇರವೇರಿತು. ಇದೇ ವೇಳೆ ಅಂತ್ಯ ಸಂಸ್ಕಾರದ ವೇಳೇ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್ ಯಡಿಯ್ಯೂರಪ್ಪ, ಸಿದ್ದರಾಮಯ್ಯ, ಸಚಿವರಾದ ಅರಗ ಜ್ಞಾನೇಂದ್ರ ಸೇರಿದಂತೆ ಇತರ ಶಾಸಕರು, ಸಚಿವರು ನೂರಾರು ರಾಜಕೀಯ ನಾಯಕರು ಹಾಜರಿದ್ದರು.
ಅಂತ್ಯ ಸಂಸ್ಕಾರಕ್ಕೂ ಮೊದಲು ಉಮೇಶ್ ಕತ್ತಿಯವರ ಪಾರ್ಥಿವ ಶರೀರವನ್ನು ಫಾರ್ಮ್ ಹೌಸ್ನಲ್ಲಿ ಇರೋ ಮನೆಗೆ ತೆಗೆದುಕೊಂಡ ಹೋಗಿ ಅಲ್ಲಿ ಅವರಿಗೆ ಮನೆಯವರು ಮತ್ತು ಸ್ವಾಮೀಜಿಗಳು ಪೂಜೆಯನ್ನು ಕುಟುಂಬದ ಪದ್ದತಿಯಂತೆ ನೇರವೇರಿಸಿದರು. ಬಳಿಕ ಮತ್ತೆ ಫಾರ್ಮ್ ಹೌಸ್ನಲ್ಲಿ ಮಾಡಲಾಗಿದ್ದ ಅಂತ್ಯ ಸಂಸ್ಕಾರದ ಸ್ಥಳಕ್ಕೆ ಅವರ ಪಾರ್ಥಿವ ಶರೀರವನ್ನು ಕರೆತಂದು ಅಂತ್ಯಕ್ರಿಯೆನ್ನು ನೇರವೇರಿಸಲಾಯಿತು.
ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಸದಾಕಾಲ ಕಿಡಿಕಾರಿ, ಪ್ರತ್ಯೇಕ ರಾಜ್ಯದ ಕನಸನ್ನು ಕಂಡಿದ್ದ ಉಮೇಶ್ ಕತ್ತಿಯವರು, ಉತ್ತರ ಕರ್ನಾಟಕ ರಾಜ್ಯದ ಸಿಎಂ ಆಗಿ ಅಧಿಕಾರ ನಡೆಸುವ ಕನಸನ್ನು ಕೂಡ ಕಂಡಿದ್ದರು. ಆದರೆ ಅವರ ಕನಸು ಈಡೇರದೇ ಹೋಯಿತು, ಈ ಮೂಲಕ ಉತ್ತರ ಕರ್ನಾಟಕದ ಅಭಿವೃದ್ದಿಯ ಧ್ವನಿ ಕೂಡ ಮಣ್ಣಲ್ಲಿ ಮಣ್ಣಾಗಿ ಹೋಯ್ತು.
ಈ ನಡುವೆ ರಾಜ್ಯ ಸರ್ಕಾರದಿಂದ ದೊಡ್ಡಬಳ್ಳಾಪುರದಲ್ಲಿ ನಾಳೆಯ ಬಿಜೆಪಿ ಜನೋತ್ಸವ ಕಾರ್ಯಕ್ರಮವನ್ನು ( BJP Janotsava Program ) ಆಯೋಜಿಸಲಾಗಿತ್ತು. ನಿನ್ನೆ ರಾತ್ರಿ ಸಚಿವ ಉಮೇಶ್ ಕತ್ತಿ ( Minister Umesh Katti ) ನಿಧನರಾದ ಹಿನ್ನಲೆಯಲ್ಲಿ, ನಾಳೆ ನಡೆಯಬೇಕಿದ್ದಂತ ಜನೋತ್ಸವ ಕಾರ್ಯಕ್ರಮ ಭಾನುವಾರಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಮ್ಮ ಸಂಪುಟದ ಸಹೋದ್ಯೋಗಿ ಅರಣ್ಯ ಸಚಿವ ಉಮೇಶ್ ಕತ್ತಿಯವರು ಕಳೆದ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಂತಿಮ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಾಳೆ ಬಿಜೆಪಿ ಪಕ್ಷದಿಂದ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದಂತ ಜನೋತ್ಸವ ಕಾರ್ಯಕ್ರಮವನ್ನು ಭಾನುವಾರಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಅಂದಹಾಗೇ ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿಯವರು ನಿನ್ನೆ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಇಂದು ಸ್ವಗ್ರಾಮದಲ್ಲಿ ನೆರವೇರಿಸಲಾಗುತ್ತಿದೆ. ಅವರ ನಿಧನದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದಿಂದ ಮೂರು ದಿನಗಳ ಕಾಲ ರಾಜ್ಯಾಧ್ಯಂತ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿಯೇ ನಾಳೆ ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದಂತ ಬಿಜೆಪಿಯ ಜನೋತ್ಸವ ಕಾರ್ಯಕ್ರಮವನ್ನು ಭಾನುವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.