ಬೆಂಗಳೂರು : ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಇಂದು ಸಚಿವ ಕೆ. ಸುಧಾಕರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
BIGG NEWS : `ನೂರು ಸಿದ್ದರಾಮಯ್ಯನವರು ಬಂದ್ರೂ ಹೆದರುವ ಪ್ರಶ್ನೆಯೇ ಇಲ್ಲ’ : ಸಚಿವ ಗೋವಿಂದ ಕಾರಜೋಳ ಕಿಡಿ
ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಸಮಾಧಾನ ಹೊಂದಿರುವ ಮುನಿಯಪ್ಪ ಬಹಿರಂಗವಾಗಿಯೇ ಇದನ್ನು ಹೇಳಿಕೊಂಡಿದ್ದರು. ಇದಾದ ಬಳಿಕ ಕಾಂಗ್ರೆಸ್ಸಿನ ಕೇಂದ್ರ ನಾಯಕರು ಮುನಿಯಪ್ಪ ಅವರನ್ನು ಭೇಟಿಯಾಗಿ ಸಮಾಧಾನಪಡಿಸುವ ಕಾರ್ಯ ಮಾಡಿದ್ದರು.
BIGG NEWS : `ನೂರು ಸಿದ್ದರಾಮಯ್ಯನವರು ಬಂದ್ರೂ ಹೆದರುವ ಪ್ರಶ್ನೆಯೇ ಇಲ್ಲ’ : ಸಚಿವ ಗೋವಿಂದ ಕಾರಜೋಳ ಕಿಡಿ
ಇದರ ಬೆನ್ನಲ್ಲೇ ಇಂದು ಸಚಿವ ಸುಧಾಕರ್ ನಿವಾಸಕ್ಕೆ ಕೆ.ಎಚ್. ಮುನಿಯಪ್ಪ ಭೇಟಿ ನೀಡಿದ್ದಾರೆ. ಈ ಮೊದಲು ಸಹ ಸುಧಾಕರ್ ಅವರನ್ನು ಭೇಟಿ ಮಾಡಿ ಮುನಿಯಪ್ಪ ಮಾತುಕತೆ ನಡೆಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಸುಧಾಕರ್ ಮಾತನಾಡಿ, ಮುನಿಯಪ್ಪ ಬಿಜೆಪಿ ಸೇರುವ ಸಾಧ್ಯತೆಯಿದೆ. ಇನ್ನುಳಿದ ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆಗೊಳ್ಳುವ ಸುಳಿವು ಸಿಕ್ಕಿದೆ. ಎಂಬ ಮಾಹಿತಿ ನೀಡಿದ್ದಾರೆ
BIGG NEWS : `ನೂರು ಸಿದ್ದರಾಮಯ್ಯನವರು ಬಂದ್ರೂ ಹೆದರುವ ಪ್ರಶ್ನೆಯೇ ಇಲ್ಲ’ : ಸಚಿವ ಗೋವಿಂದ ಕಾರಜೋಳ ಕಿಡಿ