ಬಳ್ಳಾರಿ: ನಿನ್ನೆ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಅವರು, ಬಳ್ಳಾರಿಯ ಅಭಿವೃದ್ಧಿ ಕಾಂಗ್ರೆಸ್ ನಿಂದ ( Congress ) ಆಗಿದ್ದು. ಈ ಬಗ್ಗೆ ಬಹಿರಂಗ ಚರ್ಚೆಗೆ ನಾನೇಕೆ, ನಮ್ಮ ಉಗ್ರಪ್ಪ ಅವರೇ ಸಾಕು. ಇದಕ್ಕೆ ಶ್ರೀರಾಮುಲು ಸಿದ್ಧರೇ ಎಂಬುದಾಗಿ ಸವಾಲ್ ಹಾಕಿದ್ದರು. ಈ ಸವಾಲಿಗೆ ಜವಾಬ್ ನೀಡಿರುವಂತ ಸಚಿವ ಬಿ.ಶ್ರೀರಾಮುಲು ( Minister B Sriramulu ), ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂಬುದಾಗಿ ಹೇಳಿದ್ದಾರೆ.
‘ಚರ್ಮ ಗಂಟು ರೋಗ’ದ ಬಗ್ಗೆ ರೈತರಿಗೊಂಡು ಮಹತ್ವದ ಮಾಹಿತಿ: ಈ ‘ಮನೆಮದ್ದು ಚಿಕಿತ್ಸೆ’ ಮಾಡಿ | Lumpy Skin Disease
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿದ್ಧರಾಮಯ್ಯ ಬಳ್ಳಾರಿ ಅಭಿವೃದ್ಧಿಯ ಬಗ್ಗೆ ಚರ್ಚಿಸೋದಕ್ಕೆ ಪಂಥಾಹ್ವಾನವನ್ನು ನೀಡಿದ್ದಾರೆ. ಅವರ ಆಹ್ವಾನಕ್ಕೆ ನಾನು ಸಿದ್ಧನಿದ್ದೇನೆ. ಅವರು ಎಲ್ಲಿಯಾದರೂ ಚರ್ಚೆಗೆ ಕರೆದರೂ ನಾನು ಬರೋದಕ್ಕೆ ಸಿದ್ಧ. ಬಳ್ಳಾರಿಯ ಅಭಿವೃದ್ಧಿಯ ಬಗ್ಗೆ ಬಹಿರಂಗ ಚರ್ಚೆಯಾಗಲಿ. ಬಳ್ಳಾರಿಯ ಅಭಿವೃದ್ಧಿ ಕಾಂಗ್ರೆಸ್ ನಿಂದ ಆಗಿದ್ದೋ ಅಥವಾ ಬಿಜೆಪಿ ಆಡಳಿತದಲ್ಲಿ ಆಗಿದ್ದೋ ಎಂಬುದು ಜನತೆಗೆ ತಿಳಿಯಲಿ ಎಂದರು.
BIGG NEWS : ನಾಳೆ ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ `ಪವಿತ್ರ ತೀರ್ಥೋದ್ಭವ’ : ಭಕ್ತರಿಗೆ ಇಲ್ಲಿದೆ ಮುಖ್ಯ ಮಾಹಿತಿ