ಬಳ್ಳಾರಿ: ಮಾಜಿ ಸಚಿವ ಜನಾರ್ಧನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಚಿವ ಬಿ.ಶ್ರೀರಾಮುಲು ಗೈರು ಹಾಜರಾಗಿರುವುದು ಹಲವು ಚರ್ಚೆಗೆ ಕಾರಣವಾಗಿದೆ. ಅಲ್ಲದೇ ರೆಡ್ಡಿ ಬ್ರದರ್ಸ್ ನಡುವೆ ಬಿರುಕು ಉಂಟಾಗಿದೆಯಾ ಎನ್ನುವಂತ ಕುತೂಹಲಕ್ಕೂ ಕಾರಣವಾಗಿದೆ.
BREAKING NEWS : ಚಾಮರಾಜನಗರದಲ್ಲಿ ರೈತನ ಮೇಲೆ ಎರಗಿದ ಹುಲಿ , ಬೆಚ್ಚಿಬಿದ್ದ ಜನ
ಇತ್ತೀಚಿಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಮೊಮ್ಮಗಳ ನಾಮಕರಣ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಚಿವ ಬಿ.ಶ್ರೀರಾಮುಲು ಅವರಿಗೂ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ. ಆದ್ರೇ ಹೀಗಿದ್ದೂ ಶ್ರೀರಾಮುಲು ಮಾತ್ರ ಗೈರು ಹಾಜರಾಗಿದ್ದರು. ಆದ್ರೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಜರಾಗಿದ್ದರು. ಹೀಗಾಗಿ ಈಗ ಹಲವು ಚರ್ಚೆಗೆ ಈ ವಿಷಯ ಕಾರಣವಾಗಿದೆ.
“ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ” ಇದು ಬಿಜೆಪಿಯ ಹೊಸ ದ್ಯೇಯವಾಕ್ಯ – ಟ್ವಿಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ
ಆದ್ರೇ ಈ ಬಗ್ಗೆ ಮಾತನಾಡಿರುವಂತ ಸಚಿವ ಬಿ.ಶ್ರೀರಾಮುಲು, ಅಂದು ಸ್ವಾಮೀಜಿಯೊಬ್ಬರ ತಂಗಿ ಮದುವೆ ಜೈಪುರದಲ್ಲಿ ಇತ್ತು. ಹೀಗಾಗಿ ನಾನು ಅಲ್ಲಿಗೆ ಮದುವೆಗೆ ಹೋಗಿದ್ದೆ. ಅದಕ್ಕೆ ಜನಾರ್ಧನ ರೆಡ್ಡಿ ಮೊಮ್ಮಗಳ ನಾಮಕರಣ ಕಾರ್ಯಕ್ರಮಕ್ಕೆ ಭಾಗಿಯಾಗಿಲ್ಲ. ಇದಕ್ಕೆ ಬೇರೊಂದು ಅರ್ಥ ಕಲ್ಪಿಸುವುದು ಬೇಡ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.