ಬೆಂಗಳೂರು: ನಿನ್ನೆ ಮಹಿಳೆಯೊಬ್ಬರಿಗೆ ಸಚಿವ ವಿ ಸೋಮಣ್ಣ ( Minister V Somanna ) ಅವರು ಚಾಮರಾಜನಗರದಲ್ಲಿ ಕಪಾಳ ಮೋಕ್ಷ ಮಾಡಿದ್ದ ಘಟನೆ ನಡೆದಿತ್ತು. ಈ ಬಳಿಕ ಅವರು ಕ್ಷಮೆ ಕೂಡ ಕೇಳಿದ್ದರು. ಇದೀಗ ಅವರ ಪರ ಬ್ಯಾಟ್ ಬೀಸಿರುವಂತ ಕಂದಾಯ ಸಚಿವ ಆರ್ ಅಶೋಕ್ ( Revenue Minister R Ashok ) ಅವರು ಇದು ಅಚಾನಕ್ ನಡೆದಿರುವಂತ ಘಟನೆ, ಅವರು ಬೇಕು ಅಂತ ಹೀಗೆ ಮಾಡಿಲ್ಲ ಎಂಬುದಾಗಿ ಹೇಳಿದ್ದಾರೆ.
BREAKING NEWS : ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ದಿನವೇ ದುರಂತ : ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ವಸತಿ ಸಚಿವ ವಿ.ಸೋಮಣ್ಣ ಅವರು ನಡೆ ಅಚಾನಕ್ಕೆ ಆಗಿರುವಂತ ತೋರಿದ್ದಾಗಿದೆ. ಸೋಮಣ್ಣ ಒಳ್ಳೆಯ ಮನಸ್ಸಿನವರು. ಬೇಕು ಅಂತ ಹೀಗೆ ಮಾಡಿಲ್ಲ. ಈ ಸಂಬಂಧ ಈಗಾಗಲೇ ಸಚಿವರು ಕ್ಷಮೆ ಕೇಳಿದ್ದಾರೆ ಎಂದರು.
ಸಚಿವ ಸೋಮಣ್ಣ ಅವರು ಕಪಾಳ ಮೋಕ್ಷ ಮಾಡಿದಂತ ಮಾಹಿಳೆಯೇ ಸೈಟ್ ಕೊಟ್ಟು ಒಳ್ಳೆಯದು ಮಾಡಿದ್ದರೆಂದು ಹೇಳಿಕೊಂಡಿದ್ದಾರೆ. ಸೋಮಣ್ಣ ಯಾವತ್ತೂ ಮಹಿಳೆಯರ ಜೊತೆಗೆ ಹೀಗೆ ನಡೆದುಕೊಂಡಿಲ್ಲ ಎಂಬುದಾಗಿ ತಿಳಿಸಿದ್ದಾರೆ.