ಬೆಂಗಳೂರು: ನಗರದಲ್ಲಿ ಮಳೆಯಿಂದ ಉಂಟಾದಂತ ಅವಾಂತರಕ್ಕೆ ಕಾಲುವೆ ಒತ್ತುವರಿ ಕಾರಣವಾಗಿದೆ. ಅದರಲ್ಲೂ ಅನೇಕ ಐಟಿ-ಬಿಟಿ ಕಂಪನಿಗಳು ಒತ್ತುವರಿ ಮಾಡಿದ್ದಾವೆ. ಯಾವ ಮುಲಾಜಿಗೂ ಒಳಗಾಗದೇ ಒತ್ತುವರಿ ತೆರವುಗೊಳಿಸೋದಾಗಿ ಕಂದಾಯ ಸಚಿವ ಆರ್ ಅಶೋಕ್ ( Revenue Minister R Ashok ) ಐಟಿ-ಬಿಟಿ ಕಂಪನಿಗಳ ವಿರುದ್ಧ ಗುಡುಗಿದ್ದಾರೆ.
BIGG NEWS : ಭಾರತದ ‘ಹಾಲು ಉತ್ಪಾದನೆ’ ಬೆಳವಣಿಗೆ ಜಾಗತಿಕ ಸರಾಸರಿಗಿಂತ ‘3 ಪಟ್ಟು’ ಹೆಚ್ಚಳ ; ಪ್ರಧಾನಿ ಮೋದಿ
ನಗರದಲ್ಲಿ ಇಂದು ಬೆಂಗಳೂರಿನಲ್ಲಿ ಒತ್ತುವರಿ ತೆರವು ತೆರವು ಕಾರ್ಯಾಚರಣೆ ವಿಚಾರವಾಗಿ ಮಾತನಾಡಿದಂತ ಅವರು, ಈಗಾಗಲೇ ಸಿಎಂ ಕೂಡ ಸ್ಪಷ್ಟ ಸೂಚನೆ ನೀಡಿದ್ದಾರೆ. ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ತೆರವು ನಿಶ್ಚಿತವಾಗಿದೆ. ಈಗ ಆರಂಭವಾಗಿದೆ ಮುಂದುವರೆಯಲಿದೆ ಎಂದರು.
SHOCKING NEWS : ಬುಸುಗುಟ್ಟೋ ಹಾವಿನೊಂದಿಗೆ ಮಲಗಿ ವ್ಯಕ್ತಿಯ ಸರ್ಕಸ್ : ಅಘಾತಕಾರಿ ವೀಡಿಯೊ ವೈರಲ್ | Watch
ಸುಮಾರು 25 ರಿಂದ 30 ಐಟಿ ಕಂಪನಿಗಳು ಒತ್ತುವರಿ ಮಾಡಿಕೊಂಡಿವೆ. ಯಾವುದೇ ಪ್ರಭಾವಕ್ಕೂ ಒಳಗಾಗದೆ ಎಲ್ಲವನ್ನೂ ತೆರವುಗೊಳಿಸುತ್ತೇವೆ. ಬೆಂಗಳೂರಿನಿಂದ ಯಾರೂ ಹೊರ ಹೋಗುತ್ತಿಲ್ಲ. ಯಾರೋ ಕೆಲವರಷ್ಟೇ ಈ ಮಾತನ್ನಾಡುತ್ತಿದ್ದಾರೆ. ಇನ್ನೂ ಹೊರಗಿನಿಂದಲೇ ಇಲ್ಲಿಗೆ ಬರುತ್ತಿದ್ದಾರೆ ಹೊರತು ಹೋಗುತ್ತಿಲ್ಲ ಎಂಬುದಾಗಿ ಹೇಳಿದರು.
BIGG NEWS : ಯಾರೇ ರಾಜಕಾಲುವೆ ಒತ್ತುವರಿ ಮಾಡಿದ್ರೂ ತೆರವು ಮಾಡ್ತೇವೆ : ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ