ಬೆಂಗಳೂರು: ಕಾನೂನು ಸಚಿವ ಜೆಸಿ ಮಾಧುಸ್ವಾಮಿ ( Minister JC Madhuswamy ) ಅವರು, ಸಾಮಾಜಿಕ ಕಾರ್ಯಕರ್ತರೊಬ್ಬರ ಜೊತೆಗೆ ಮಾತನಾಡಿರುವಂತ ಆಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ( Social Media ) ವೈರಲ್ ಆಗಿದೆ. ಅಲ್ಲದೇ ವೈರಲ್ ಆಗಿರುವಂತ ( Audio Viral ) ಆಡಿಯೋದಲ್ಲಿ ಸರ್ಕಾರ ನಡೆಸುತ್ತಿಲ್ಲ. ಮ್ಯಾನೇಜ್ಮೆಂಟ್ ಮಾಡ್ತಿದ್ದೀವಿ ಅಷ್ಟೇ ಎಂಬುದಾಗಿ ಹೇಳುವ ಮೂಲಕ ಸರ್ಕಾರದ ನಿಷ್ಕ್ರೀಯತೆಯನ್ನು ಒಪ್ಪಿಕೊಂಡಿದ್ದಾರೆ. ವೈರಲ್ ಆಗಿರುವಂತ ಆಡಿಯೋವನ್ನು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ( Twitter ) ಶೇರ್ ಮಾಡಿದೆ. ಅವರು ಏನ್ ಮಾತನಾಡಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ.
BIG NEWS: ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ, ನಾನು ಕ್ಷಮೆ ಕೇಳಲು ಸಿದ್ಧ – ಪ್ರಿಯಾಂಕ್ ಖರ್ಗೆ
ಕಾನೂನು ಸಚಿವ ಜೆಸಿ ಮಾಧುಸ್ವಾಮಿಯವರಿಗೆ ಕರೆ ಮಾಡಿದಂತ ಚನ್ನಪ್ಪಣದ ಸಾಮಾಜಿಕ ಕಾರ್ಯಕರ್ತರಾದಂತ ಭಾಸ್ಕರ್ ಎನ್ನುವವರು, ವಿಎಸ್ಎಸ್ಎನ್ ಬ್ಯಾಂಕ್ ನಲ್ಲಿ ರೈತರು 50 ಸಾವಿರ ಸಾಲ ತಗೊಂಡಿರುತ್ತಾರೆ. ಅದಕ್ಕೆ ಕಟ್ಟಬೇಕಾದಾಗ ರಿನೀವಲ್ ಗೆ ಅಂತ, ಬ್ಯಾಂಕ್ ಸಿಬ್ಬಂದಿಗಳೇ ರೂ.1,300 ತಗೊಳ್ಳುತ್ತಿದ್ದಾರೆ. ಅವರೇ ಕಟ್ಟಿಕೊಂಡು, 1,300 ರೂ ಬಡ್ಡಿಗಾಗಿ ಅಂತ ಹಣವನ್ನು ರಾಜ್ಯಾಧ್ಯಂತ ಹಿಡಿದುಕೊಳ್ಳುತ್ತಿದದಾರೆ ಎಂಬುದಾಗಿ ಹೇಳುತ್ತಾರೆ.
BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ
ಅದಕ್ಕೆ ಪ್ರತಿಕ್ರಿಯಿಸಿದಂತ ಸಚಿವ ಜೆಸಿ ಮಾಧುಸ್ವಾಮಿಯವರು, ನಾ ಏನಪ್ಪ ಮಾಡಲಿ, ಇದೆಲ್ಲಾ ನನಗೆ ಗೊತ್ತು. ಸಹಕಾರ ಸಚಿವ ಸೋಮಶೇಖರ್ ಅವರ ಗಮನಕ್ಕೂ ತಂದಿದ್ದೇವೆ. ಬಡ್ಡಿ ಹೊಡೆದುಕೊಂಡು ತಿನ್ನುತ್ತಿದ್ದಾರೆ. ಹೆಚ್ಚು ಹೆಚ್ಚು ಹಣವನ್ನು ರೈತರಿಂದ ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದೇನೆ. ಅವರು ಏನೂ ಕ್ರಮ ಕೈಗೊಳ್ಳುತ್ತಾ ಇಲ್ಲ ಏನ್ ಮಾಡೋಣ ಎಂಬುದಾಗಿ ತಮ್ಮ ಸರ್ಕಾರದ ನಿಷ್ಕ್ರೀಯತೆಯನ್ನು ಒಪ್ಪಿಕೊಂಡಿದ್ದಾರೆ.
Shocking News: ‘ಅಂತರ್ ಜಾತಿ ವಿವಾಹ’ವಾಗಿ ಸಾವನ್ನಪ್ಪಿದ ವ್ಯಕ್ತಿಗೆ ಎರಡು ಬಾರಿ ‘ಅಂತ್ಯ ಸಂಸ್ಕಾರ’.!
ಇನ್ನೂ ಮುಂದುವರೆದು ರೈತರಲ್ಲಪ್ಪ ನಾನೇ ಕಟ್ಟಿದ್ದೇನೆ. ನನ್ನ ಬಳಿಯಲ್ಲಿಯೂ ತೆಗೆದುಕೊಂಡಿದ್ದಾರೆ ಅಂದಹಾಗೇ, ನೋಡಿ ಸಾರ್ ಈ ಅವ್ಯವಸ್ಥೆಯನ್ನು ಸರಿ ಪಡಿಸಿ ಅಂತ ಭಾಸ್ಕರ್ ಎಂಬುವರು ಹೇಳುತ್ತಾರೆ. ಆಗ ಸಚಿವರು ಸರ್ಕಾರ ನಡೆಯುತ್ತಾ ಇಲ್ಲ. ಮ್ಯಾನೇಜ್ಮೆಂಟ್ ಮಾಡುತ್ತಿದ್ದೇವೆ ಅಷ್ಟೇ. ಏನೋ ತಳ್ಳುತ್ತಾ ಇದ್ದೇವೆ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ತಮ್ಮ ಸರ್ಕಾರ ಅಸಾಹಯಕತೆಯನ್ನು ಬಿಚ್ಚಿಟ್ಟಿದ್ದಾರೆ.
'@BJP4Karnataka ಸರ್ಕಾರದ ನಿಷ್ಕ್ರೀಯತೆ, ಸಚಿವರುಗಳ ಅಸಾಮರ್ಥ್ಯ, ರೈತರಿಗೆ ಎಸಗುತ್ತಿರುವ ಅನ್ಯಾಯಗಳು ಸಚಿವ ಮಾಧುಸ್ವಾಮಿಯವರಿಂದ ಬಯಲಾಗಿದೆ.
ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವುದು ಭ್ರಷ್ಟಾಚಾರದ ಮ್ಯಾನೇಜ್ಮೆಂಟ್ ಮಾತ್ರ.@BSBommai ಅವರ ನಿಷ್ಕ್ರೀಯ ಆಡಳಿತಕ್ಕೆ, ರೈತರಿಗಾಗುತ್ತಿರುವ ಅನ್ಯಾಯಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? pic.twitter.com/Is4QsH2O4v
— Karnataka Congress (@INCKarnataka) August 13, 2022