ಬೆಂಗಳೂರು: ಮುಸ್ಲೀಂ ಸಮುದಾಯದ ವಿದ್ಯಾರ್ಥಿನಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ 125ಕ್ಕೆ 125 ಅಂಕ ತೆಗೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದರು. ಇಂತಹ ವಿದ್ಯಾರ್ಥಿನಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬೈಕ್ ಗಿಫ್ಟ್ ನೀಡಿ ಪ್ರೋತ್ಸಾಹಿಸಿದ್ದಾರೆ.
ಇಂದು ಚಾಮರಾಜನಗರದಲ್ಲಿ ನಡೆದಂತ ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ತೆಗೆದಿದ್ದಂತ ವಿದ್ಯಾರ್ಥಿನಿ ಜೈನಾಬ್ ಬೇಗಂ ಅವರಿಗೆ ವೈಯಕ್ತಿಕವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ದ್ವಿಚಕ್ರ ವಾಹನ ಹಾಗೂ 1 ಲಕ್ಷ ನೀಡಿ ಸನ್ಮಾನಿಸಿದರು.
Personally Honored and gave Rs.100,000/- with a Two-wheeler to Student Zainab Begum of Chamarajpet, who scored 125/125 marks in Sanskrit Subject pic.twitter.com/Mkw99cw1r1
— B Z Zameer Ahmed Khan (@BZZameerAhmedK) June 4, 2025
ಇನ್ನೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿದ ಚಾಮರಾಜಪೇಟೆಯ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ ಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ವೈಯಕ್ತಿಕವಾಗಿ ಸನ್ಮಾನಿಸಿ ದ್ವಿಚಕ್ರ ವಾಹನದ ಜೊತೆಗೆ 1 ಲಕ್ಷ ನೀಡಿ ಗೌರವಿಸಿದರು.
Personally Honored and gave Rs.100,000/- with a Two-wheeler to Student Shagufta Anjum of Chamarajpet, who scored 100/100 marks in her SSLC exams pic.twitter.com/YxEqHXNP4n
— B Z Zameer Ahmed Khan (@BZZameerAhmedK) June 4, 2025
ಈ ವೇಳೆ ಮಾತನಾಡಿದಂತ ಅವರು ಮುಸ್ಲೀಂ ವಿದ್ಯಾರ್ಥಿನಿಯಾಗಿ ಸಂಸ್ಕೃತದಲ್ಲಿ ಇಷ್ಟು ಅಂಕ ತೆಗೆದಿರುವುದು ಸಂತಸ, ಹೆಮ್ಮೆಯ ವಿಚಾರವಾಗಿದೆ. ಮುಂದೆ ಇನ್ನಷ್ಟು ಸಾಧನೆಯನ್ನು ಮಾಡಲಿ. ಉತ್ತಮ ಅಂಕ ಪಡೆದು ಪೋಷಕರಿಗೆ, ಸಮುದಾಯಕ್ಕೆ ಕೀರ್ತಿಯನ್ನು ತರಲಿ ಅಂತ ಹಾರೈಸಿದರು.
ಬೆಂಗಳೂರಿನ ವಿಧಾನಸೌಧದ ಮುಂದೆ ‘RCB ಅಭಿಮಾನಿ’ಗಳ ದಾಂಧಲೆ: ನಿಯಂತ್ರಣಕ್ಕೆ ‘ಪೊಲೀಸರ ಹರಸಾಹಸ’