ಹಾವೇರಿ: ಹಿರೇಕೆರೂರು ಮತಕ್ಷೇತ್ರದ ಜನರ ಬಹುದಿನಗಳ ಕನಸನ್ನು ಮತಕ್ಷೇತ್ರದ ಶಾಸಕರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ( Minister B C Patil ) ನೆರವೇರಿಸಿದ್ದಾರೆ.
ಬಹುದಿನಗಳಿಂದ ಮಧ್ಯಮ ವರ್ಗದ ಜನಸಾಮಾನ್ಯರ ಅದರಲ್ಲಿಯೂ ವಿಶೇಷವಾಗಿ ಮಹಿಳೆಯರ ಬೇಡಿಕೆಯಾಗಿದ್ದ “ಗಾರ್ಮೆಂಟ್ಸ್ ” ಕನಸನ್ನು ಈಡೇರಿಸುವಲ್ಲಿ ಸಚಿವರು ಯಶಸ್ವಿಯಾಗಿದ್ದಾರೆ. ದೀಪಾವಳಿಯ ಶುಭದಿನದಂದು ತಾಲೂಕಿನ ಜನತೆಗೆ ಸಿಹಿ ಸುದ್ದಿ ನೀಡಿರುವ ಬಿಸಿಪಿ ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ಸುಮಾರು 12 ಕೋ.ರೂ.ವೆಚ್ಚದಲ್ಲಿ “ಬಸವಶ್ರೀ” ಹೆಸರಿನ ನೂತನ ಗಾರ್ಮೆಂಟ್ಸ್ ಅನ್ನು ಆರಂಭಿಸಿ ಆರಂಭದಲ್ಲಿ ಸುಮಾರು1800 ಜನಕ್ಕೆ ಗಾರ್ಮೆಂಟ್ಸ್ ಆರಂಭಿಸುವ ಮೂಲಕ ಉದ್ಯೋಗ ನೀಡುವಲ್ಲಿ ಸಫಲರಾಗಿದ್ದಾರೆ.ಈ ಮೂಲಕ “ಬಸವಶ್ರೀ” ಗಾರ್ಮೆಂಟ್ಸ್ ಹಿರೇಕೆರೂರು ತಾಲೂಕಿನ ಮೊದಲ ಗಾರ್ಮೆಂಟ್ಸ್ ಆಗಿ ಹೊರಹೊಮ್ಮಿದೆ.
ಗಾರ್ಮೆಂಟ್ಸ್ಗೆ ಶಂಕುಸ್ಥಾಪನೆ ಗುದ್ದಲಿಪೂಜೆ ಕುಟುಂಬದ ಸದಸ್ಯರು ಹಾಗೂ ತಾಲೂಕಿನ ಜನತೆಯೊಂದಿಗೆ ಬಿಸಿಪಿ ಇಂದಜ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ತಾವು ಜನರ ಬಹುದಿನಗಳ ಕನಸನ್ನು ಈಡೇರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು,ಜನಸಾಮಾನ್ಯರಿಗೆ ಅದರಲ್ಲಿಯೂ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವಲ್ಲಿ ಗಾರ್ಮೆಂಟ್ಸ್ ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಇದರ ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿ ಉದ್ಯೋಗಿಗಳಾಗಬೇಕೆಂದು ಬಿಸಿಪಿ ಕರೆ ನೀಡಿದರು.
ಆರಂಭಿಕ ಸ್ಥಿತಿಗತಿ ಅಭಿವೃದ್ಧಿ ಆಗುಹೋಗುಗಳನ್ನು ನೋಡಿ ಮುಂದಿನ ದಿನಗಳಲ್ಲಿ ಏನಾದರೂ ಇನ್ನಷ್ಟು ಅವಶ್ಯಕತೆಗಳು ಗಾರ್ಮೆಂಟ್ಸ್ಗೆ ಇದ್ದಲ್ಲಿ ಅದನ್ನು ಪೂರೈಸಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
BREAKING NEWS: ಚಾಲಕನ ನಿಯಂತ್ರಣತಪ್ಪಿ ಹಳ್ಳಕ್ಕೆ ಇಳಿದ KSRTC ಬಸ್;25 ಮಂದಿ ಗಾಯ, ಆಸ್ಪತ್ರೆಗೆ ದಾಖಲು
ಉದ್ಘಾಟನೆ ಸಂದರ್ಭದಲ್ಲಿ ವನಜಾ ಪಾಟೀಲ್, ಸೌಮ್ಯಾಪಾಟೀಲ್, ಪ್ರತಾಪ್ ಪಾಟೀಲ್,ಎಸ್.ಎಸ್.ಪಾಟೀಲ್,ನಾಗರಾಜ ಹಿರೇಮಠ್,ರವಿಶಂಕರ್ ಬಾಳಿಕಾಯಿ, ವಿಜಯ್ ಮಡಿವಾಳರ್,ಮಂಜು ತಳವಾರ್, ನಿಂಗನಗೌಡ ಮತ್ತಿತರರು ಪಾಲ್ಗೊಂಡಿದ್ದರು.