ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಗ್ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮಾಡಿ ಟೀಕೆ ಅತ್ಯಂತ ಕೀಳು ಮಟ್ಟದ್ದಾಗಿದೆ. ಇದು ಅವರ ರೋಗಗ್ರಸ್ತ ಮನಸ್ಸಿನ ಸಂಕೇತವಾಗಿದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಖಂಡಿಸಿದ್ದಾರೆ.
ಬುಧವಾರ ಈ ಬಗ್ಗೆ ಮಾತನಾಡಿರುವ ಅವರು, ‘ಪ್ರಜಾಪಭುತ್ವದಲ್ಲಿ ಆರೋಗ್ಯಕರ ಟೀಕೆ ಟಿಪ್ಪಣಿಗಳು ಸ್ವಾಗತಾರ್ಹವಾಗಿವೆ. ಆದರೆ, ಒಬ್ಬ ಮಾಜಿ ಮುಖ್ಯಮಂತ್ರಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದು ಮಾತನಾಡುವುದು ಅಸಂಸದೀಯ ಮತ್ತು ಅನಾರೋಗ್ಯಕರ ಬೆಳವಣಿಗೆಯಾಗಿದೆ” ಎಂದಿದ್ದಾರೆ.
“ವಾಸ್ತವದಲ್ಲಿ ತಮ್ಮ ಪಕ್ಷದ ಹೈಕಮಾಂಡಿಗೆ ದಾಸ್ಯ ಪ್ರವೃತ್ತಿಯಿಂದ ನಡೆದುಕೊಳ್ಳುವ ದುರ್ಗುಣ ಇರುವುದು ಕಾಂಗ್ರೆಸ್ಸಿನಲ್ಲಿ. ಅದರ ಹೈಕಮಾಂಡ್ ಕಲ್ಚರ್ ವಿರುದ್ಧ ದನಿ ಎತ್ತಿದ ಕೀರ್ತಿ ಬಿಜೆಪಿಗಿದೆ. ಇದನ್ನು ಅರಿಯದೆ ಸಿದ್ದರಾಮಯ್ಯ ನವರು ತಮ್ಮ ನಾಯಕರನ್ನು ಮೆಚ್ಚಿಸಲು ಅಸಂಬದ್ಧವಾಗಿ ಮಾತನಾಡಿದ್ದಾರೆ. ಇದು ಸಮಸ್ತ ಕನ್ನಡಿಗರಿಗೆ ಮತ್ತು ಜನಾದೇಶಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಗುಲಾಮರಂತೆ ಇರುವ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕೇ ವಿನಾ ನಾಲಿಗೆಯನ್ನು ಹರಿಬಿಡುವ ದುಸ್ಸಾಹಸಕ್ಕೆ ಮುಂದಾಗಬಾರದು. ಅವರು ಇದೇ ಪ್ರವೃತ್ತಿ ಮುಂದುವರಿಸಿದರೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.
ರಾಜ್ಯದಲ್ಲೇ ಪ್ರಥಮ: ‘ಪೊಲೀಸ’ರಿಂದಲೇ ನಾಟಕ ಪ್ರದರ್ಶನ, ನಟ ‘ಕಿಚ್ಚ ಸುದೀಪ್’ ಮೆಚ್ಚುಗೆ