ನವದೆಹಲಿ: ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ರೆಡ್ಮಿ 6ಎ ಸ್ಮಾರ್ಟ್ಫೋನ್ ಸ್ಫೋಟಗೊಂಡು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಘಟನೆ ವರದಿಯಾಗಿದೆ. ಟೆಕ್ ಯೂಟ್ಯೂಬರ್ನ ಟ್ವೀಟ್ ಪ್ರಕಾರ, ಒಬ್ಬ ಮಹಿಳೆ ಮಲಗಿದ್ದಾಗ ಅದನ್ನು ತನ್ನ ಮುಖದ ಬಳಿ ಇರಿಸಿಕೊಂಡಿದ್ದಳು ಮತ್ತು ಸ್ಮಾರ್ಟ್ಫೋನ್ ಸ್ಫೋಟಗೊಂಡು ಆಕೆಯ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಈ ಟ್ವೀಟ್ಗೆ ಶಿಯೋಮಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದೆ.ಎಂಡಿ ಟಾಕ್ ವೈಟಿ ಎಂಬ ಹೆಸರಿನ ಯೂಟ್ಯೂಬರ್ ಬ್ಯಾಟರಿ ಸ್ಫೋಟವು ಬಳಕೆದಾರರನ್ನು ಕೊಂದಿದೆ ಎಂದು ಹೇಳಿದ್ದಾರೆ. ಸ್ಮಾರ್ಟ್ಫೋನ್ನ ಸ್ಥಿತಿಯ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.ಈ ಟ್ವೀಟ್ನಲ್ಲಿ ಮಹಿಳೆಯ ಭಯಾನಕ ಚಿತ್ರವೂ ಕೂಡ ಇದ್ದು, ವಳು ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಾಣಬಹುದಾಗಿದೆ. . ಟ್ವಿಟ್ಟರ್ನಲ್ಲಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಶಿಯೋಮಿ, ತನ್ನ ತಂಡವು ಸಂತ್ರಸ್ತ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಘಟನೆಯ ಕಾರಣವನ್ನು ನಿರ್ಧರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.