ಬೆಳಗಾವಿ: ಮಹಾರಾಷ್ಟ್ರ-ಕರ್ನಾಟಕದ ನಡುವೆ ಗಡಿ ವಿವಾದ ಕಿಚ್ಚು ಹೆಚ್ಚಾಗಿದೆ. ಇದೀಗ ಮಹಾರಾಷ್ಟ್ರ ಸಚಿವರು ಬೆಳಗಾವಿ ಭೇಟಿ ನೀಡಲು ಅವಕಾಶ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಬಂದ ಎಂಇಎಸ್ ಪುಂಡರು ಪೊಲೀಸರ ವಶಕ್ಕೆ ಪಡೆದಿದ್ದಾರೆ.
BREAKING NEWS: ಪುಣೆಯಲ್ಲಿದ್ದ ಕರ್ನಾಟಕದ ಬಸ್ಗಳ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಪುಂಡಾಟ ಮೆರೆದ ಕಿಡಿಗೇಡಿಗಳು
ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸುತ್ತಿದ್ದ ಹಾಗೆ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ನುಗ್ಗಿ ಮನವಿ ಪತ್ರ ಕೊಡುತ್ತೇನೆ ಎಂದು ಬಿಗಿ ಹಿಡಿದು ಕುಳಿತಿದ್ದಾರೆ. ಆದರೆ ಇದಕ್ಕೆ ಅನುಮತಿ ನಿರಾಕರಿಸಿ ಪೊಲೀಸರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸರು ಪುಂಡರನ್ನು ವಶಕ್ಕೆ ಪಡೆದಿದ್ದಾರೆ.
BREAKING NEWS: ಪುಣೆಯಲ್ಲಿದ್ದ ಕರ್ನಾಟಕದ ಬಸ್ಗಳ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಪುಂಡಾಟ ಮೆರೆದ ಕಿಡಿಗೇಡಿಗಳು
ಪುಣೆ ಬಸ್ ನಿಲ್ದಾಣದಲ್ಲಿ ಕೆಎಸ್ ಆರ್ ಟಿಸಿ ಬಸ್ಗಳಿಗೆ ಮಸಿ
ಇನ್ನು ಮಹಾರಾಷ್ಟ್ರದಿಂದ ಬೆಳಗಾವಿ ಬರುತ್ತಿದ್ದ ಲಾರಿಗಳ ಮೇಲೆ ಮಸಿ ಹಚ್ಚಿ ಕರವೇ ಪರ ಹೋರಾಟಗಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ನಡುವೆ ಪುಣೆಯಲ್ಲಿರುವ ಬಸ್ಡಿಪೋನಲ್ಲಿ ನಿಂತಿದ್ದ ಸರಿ ಸುಮಾರು ಎಂಟಕ್ಕೂ ಅಧಿಕ ಬಸ್ಗಳ ಮೇಲೆ ‘ಜೈ ಮಹಾರಾಷ್ಟ್ರ’ ಅಂತ ಬರೆದು ತಮ್ಮ ಉದ್ದಟ್ಟತನವನ್ನು ಮೆರೆದಿದ್ದಾರೆ. ಈ ನಡುವೆ ಇಂದು ಸಂಜೆ ಕೊಗನೊಳ್ಳಿ ಚೆಕ್ಪೋಸ್ಟ್ ಬಳಿಗೆ ಬರುವುದಾಗಿ ಮಹಾರಾಷ್ಟ್ರ ಸೊಲ್ಲಾಪುರದ ನಾಯಕರುಗಳು ಹೇಳಿಕೊಂಡಿದ್ದು, ಪರಿಸ್ಥಿತಿಯನ್ನು ಇನ್ನೂ ಬಿಗಾಡಾಡಿಸುವಂತೆ ಮಾಡಿದೆ.