ಪಾಕಿಸ್ತಾನ: ನಿನ್ನೆ ಪಾಕ್ ಮಾಜಿ ಪ್ರಾಧಾನಿ ʻಇಮ್ರಾನ್ ಖಾನ್ʼ ನಡೆಸುತ್ತಿದ್ದ ರ್ಯಾಲಿ ವೇಳೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಇಮ್ರಾನ್ ಸೇರಿ ಹಲವರು ಗಾಯಗೊಂಡಿದ್ದಾರೆ.
ರ್ಯಾಲಿ ವೇಳೆ ಗುಂಡಿನ ದಾಳಿ ನಡೆಸಲು ಯತ್ನಿಸುತ್ತಿದ್ದ ದಾಳಿಕೋರನ ಯತ್ನವನ್ನು ವ್ಯಕ್ತಿಯೊಬ್ಬ ವಿಫಲಗೊಳಿಸಿದ್ದಾನೆ. ಆ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ವೈರಲ್ ಆಗಿರುವ ಫೋಟೋದಲ್ಲಿ, ದಾಳಿಕೋರನ ಹಿಂಬದಿಯಿಂದ ಬಂದ ವ್ಯಕ್ತಿ ಗನ್ ಹಿಡಿದಿದ್ದ ಕೈನ ಗುರಿಯನ್ನು ತಪ್ಪಿಸುವುದನ್ನು ನೋಡಬಹುದು.
ಇಮ್ರಾನ್ ಖಾನ್ ಅವರು ಆಡಳಿತಾರೂಢ ಸರ್ಕಾರದ ವಿರುದ್ಧ ರ್ಯಾಲಿಯನ್ನು ಮುನ್ನಡೆಸುತ್ತಿದ್ದಾಗ ಅವರ ಹತ್ಯೆಗೆ ಯತ್ನಿಸಿದ ನಂತರ ಪಾಕಿಸ್ತಾನದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಇಬ್ಬರು ವ್ಯಕ್ತಿಗಳು ನಡೆಸಿದ ದಾಳಿಯಲ್ಲಿ ಸುಮಾರು ಹನ್ನೆರಡು ಮಂದಿ ಗಾಯಗೊಂಡಿದ್ದಾರೆ. ದಾಳಿಕೋರರಲ್ಲಿ ಒಬ್ಬನನ್ನು ಖಾನ್ ಅವರ ಅಂಗರಕ್ಷಕರು ಹೊಡೆದುರುಳಿಸಿದ್ದಾರೆ. ಇನ್ನೊಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಗಳು ಹೇಳುತ್ತವೆ.
BIG NEWS : ʻಇಸ್ರೇಲ್ʼ ಪ್ರಧಾನಿಯಾಗಿ ಆಯ್ಕೆಯಾದ ʻಬೆಂಜಮಿನ್ ನೆತನ್ಯಾಹುʼರನ್ನು ಅಭಿನಂದಿಸಿದ ಪಿಎಂ ಮೋದಿ
BIGG NEWS : ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಶೀಘ್ರವೇ `ದಾಹಮುಕ್ತ ಕರ್ನಾಟಕ’ ಯೋಜನೆಗೆ ಚಾಲನೆ
SHOCKING NEWS: ಆಟವಾಡುತ್ತಿದ್ದಾಗ ಕಚ್ಚಿದ ವಿಷಪೂರಿತ ಹಾವನ್ನು ತನ್ನ ಬಾಯಿಂದಲೇ ಕಚ್ಚಿ ಸಾಯಿಸಿದ ಬಾಲಕ
BIG NEWS : ʻಇಸ್ರೇಲ್ʼ ಪ್ರಧಾನಿಯಾಗಿ ಆಯ್ಕೆಯಾದ ʻಬೆಂಜಮಿನ್ ನೆತನ್ಯಾಹುʼರನ್ನು ಅಭಿನಂದಿಸಿದ ಪಿಎಂ ಮೋದಿ