ಬೆಂಗಳೂರು : 2024 ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಗೆದ್ದು ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಕಾವೇರಿ ನದಿಗೆ ನಿರ್ಮಿಸಲು ಯೋಜಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತಡೆಯುವುದಾಗಿ ಡಿಎಂಕೆ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಡೀಪ್ ಫೇಕ್ ವೀಡಿಯೊ : 100,000 ಡಾಲರ್ ಪರಿಹಾರ ಕೋರಿದ ಇಟಲಿ ಪ್ರಧಾನಿ ಜಿಯೋರ್ಜಿಯಾ ಮೆಲೋನಿ
ಟ್ವೀಟ್ ನಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಮೇಕೆದಾಟು ಹೆಸರಿನಲ್ಲಿ ಬೊಂಡಾ-ಬಜ್ಜಿ ತಿನ್ನುತ್ತಾ ವಾಕಿಂಗ್ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ DK ಶಿವಕುಮಾರ ಅವರೇ, ತಮಿಳುನಾಡಿನ ನಿಮ್ಮ ಚಿನ್ನ ತಂಬಿ ಎಂ. ಕೆ. ಸ್ಟಾಲಿನ್ ಅವರು ಇಂಡಿ ಮೈತ್ರಿಕೂಟ ಗೆದ್ದರೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಬಿಡುವುದಿಲ್ಲ ಎಂಬುದನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿಯೇ ತಿಳಿಸಿದ್ದಾರೆ.
ಅವಧಿ ಮುಗಿದ 30 ದಿನಗಳ ಒಳಗೆ ‘ವಾಹನ ಚಾಲನಾ ಪರವಾನಿಗೆ’ ನವೀಕರಿಸಿ : ಹೈಕೋರ್ಟ್ ಆದೇಶ
ಸ್ಟ್ರಾಂಗ್ ಎಂದು ಬೀಗುವ ವೀಕ್ ಸಿಎಂ ಸಿದ್ದರಾಮಯ್ಯ ಅವರೇ, ಡಿಎಂಕೆ ಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹವನ್ನು ಖಂಡಿಸಿ ಅವರನ್ನು ಇಂಡಿ ಮೈತ್ರಿಕೂಟದಿಂದ ಉಚ್ಛಾಟಿಸಿ ಎಂದು ರಾಹುಲಗಾಂಧಿ ಅವರಿಗೆ ಯಾವಾಗ ಪತ್ರ ಬರೆಯುತ್ತೀರಿ..?ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ, ಡಿಎಂಕೆಯ ಈ ಪ್ರಣಾಳಿಕೆಯ ವಿರುದ್ಧ ಪಾದಯಾತ್ರೆ ಅಲಿಯಾಸ್ ಮೋಜು-ಮಸ್ತಿಯ ವಾಕಿಂಗ್ ಅನ್ನು ಆರಂಭಿಸುವುದು ಯಾವಾಗ..?
ಮಾನ್ಯ ಖರ್ಗೆ ಅವರೇ, ನೀವು ಕನ್ನಡಿಗರಲ್ಲವೇ? ಇಂಡಿ ಮೈತ್ರಿ ಕೂಟ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹದ ವಿರುದ್ಧ ನೀವು ಮಾತನಾಡುವುದಾದರೂ ಯಾವಾಗ? ಸ್ವಾರ್ಥಕ್ಕಾಗಿ ಕನ್ನಡಿಗರಿಗೆ ಹೀಗೆ ಇನ್ನೆಷ್ಟು ದಿನ ಮೋಸ ಮಾಡುತ್ತೀರಾ? ಎಂದು ವಾಗ್ದಾಳಿ ನಡೆಸಿದೆ.
ಮೇಕೆದಾಟು ಹೆಸರಿನಲ್ಲಿ ಬೊಂಡಾ-ಬಜ್ಜಿ ತಿನ್ನುತ್ತಾ ವಾಕಿಂಗ್ ಮಾಡಿದ್ದ ಸಿಎಂ @siddaramaiah ಅವರೇ, ಡಿಸಿಎಂ @DKShivakumar ಅವರೇ, ತಮಿಳುನಾಡಿನ ನಿಮ್ಮ ಚಿನ್ನ ತಂಬಿ ಎಂ. ಕೆ. ಸ್ಟಾಲಿನ್ ಅವರು ಇಂಡಿ ಮೈತ್ರಿಕೂಟ ಗೆದ್ದರೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಬಿಡುವುದಿಲ್ಲ ಎಂಬುದನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿಯೇ… https://t.co/GzRjxYnRNc
— BJP Karnataka (@BJP4Karnataka) March 21, 2024