Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಜನಸಾಮಾನ್ಯರಿಗೆ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು’: KSLU ಕುಲಪತಿ ಪ್ರೊ.ಡಾ.ಸಿ.ಬಸವರಾಜು.

20/04/2026 2:23 PM

ರಣಬಿಸಲಿಗೆ ತತ್ತರಿಸಿದ ರಾಜ್ಯದ ಜನತೆ : ಕಲ್ಬುರ್ಗಿಯಲ್ಲಿ ಪೊಲೀಸ್ ಶ್ವಾನಗಳಿಗೆ ಏರ್ ಕೂಲರ್ ವ್ಯವಸ್ಥೆ ಸಿಬ್ಬಂದಿ!

20/04/2026 2:16 PM

ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರಕ್ಕೆ ಸಂಸದ ಡಾ.ಕೆ.ಸುಧಾಕರ್ ಮನವಿ

20/04/2026 2:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಸಾರ್ವಜನಿಕರೇ ಗಮನಿಸಿ : ಎದೆನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಿ.!
KARNATAKA

ALERT : ಸಾರ್ವಜನಿಕರೇ ಗಮನಿಸಿ : ಎದೆನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಿ.!

By kannadanewsnow5708/07/2025 6:17 AM

ಬೆಂಗಳೂರು : ಎದೆನೋವು, ಉಸಿರಾಟದ ತೊಂದರೆ, ಒಸಡು ಅಥವಾ ತೋಳಿನಲ್ಲಿ ನೋವು, ಬೆವರುವಿಕೆ ಅಥವಾ ತಲೆತಿರುಗುವಿಕೆಯ ಅನುಭವವಾಗುತ್ತಿದೆಯೇ? ನಿರ್ಲಕ್ಷಿಸದಿರಿ. ತಕ್ಷಣವೇ 108ಕ್ಕೆ ಕರೆ ಮಾಡಿ ಅಥವಾ ಸಮೀಪದ ಆಸ್ಪತ್ರೆಗೆ ತೆರಳಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ರಾಜ್ಯ ಸರ್ಕಾರ ತಿಳಿಸಿದೆ.

ಆಸ್ಪತ್ರೆಯ ಹೊರೆಗೆ ನಡೆಯುವ ಎಲ್ಲ ಹಠಾತ್ ಸಾವುಗಳು ಇನ್ಮುಂದೆ ನೋಟಿಫೈಯಾಗಲಿದ್ದು, ಹೃದಯಾಘಾತಗಳ ಬಗ್ಗೆ ಸಂಶೋಧನೆಗೆ ಹೆಚ್ಚಿನ ಅಂಕಿ ಅಂಶಗಳು ದೊರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್ ಅಡ್ಡ ಪರಿಣಾಮಗಳ ಕುರಿತು ತಜ್ಞರ ಸಮಿತಿಯ ವರದಿ ಸ್ವೀಕರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಧುಮೇಹ, ರಕ್ತದೊತ್ತಡ, ಒಬೆಸಿಟಿ ಹೆಚ್ಚಾಗಿದೆ. ಸ್ಟೀರಾಯ್ಡ್ ಹೆಚ್ಚಿನ ಬಳಕೆಯೂ ಕೂಡ ಕಾರಣವಾಗಿದೆ. ಕೋವಿಡ್ ಪೂರ್ವದಲ್ಲಿ ಜಯದೇವ ಆಸ್ಪತ್ರೆ ಮೆಡಿಕಲ್ ರೆಕಾರ್ಡ್ಸ್ ಗೆ ಹೊಲಿಕೆ ಮಾಡಿ ಕೂಡಾ ವರದಿ ಸಿದ್ಧಪಡಿಸಲಾಗಿದೆ. ಜಯದೇವ ಆಸ್ಪತ್ರೆಯಲ್ಲಿ 253 ಹೃದ್ರೋಗ ರೋಗಿಗಳ ಮೇಲೆ ಅಧ್ಯಯನ ಮಾಡಲಾಗಿದೆ. ಹೃದಯಾಘಾತಗಳಿಗೆ ಕೋವಿಡ್ ಲಸಿಕೆ ನೇರ ಕಾರಣವಲ್ಲ ಎಂದು ತಿಳಿದುಬಂದಿದೆ. ಎಂಆರ್ ಎನ್ ಎ ಲಸಿಕೆಯಿಂದ ಕೊಂಚ ಸಮಸ್ಯೆ ಎದುರಾಗಿದೆ. ಆದರೆ ಈ ಲಸಿಕೆಯನ್ನು ನಮ್ಮ ದೇಶದಲ್ಲಿ ಯಾರು ಪಡೆದಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮೊಬೈಲ್, ಸಿಸ್ಟಮ್ ಗಳ ಸ್ಕ್ರೀನ್ ಮುಂದೆ ಮಿತಿಮೀರಿದ ಸಮಯ ಕಳೆದಿರುವುದು ಪರಿಣಾಮ ಬೀರಿದೆ. ಕೋವಿಡ್ ಸಮಯದಲ್ಲಿ ಹೃದಯಾಘಾತಗಳಾಗಿವೆ. ಆದರೆ 3 ವರ್ಷಗಳ ನಂತರ‌ ಕೋವಿಡ್ ನಿಂದ ದುಷ್ಪರಿಣಾಮ ಬೀರಿರುವುದು ಕಡಿಮೆ ಎಂದು ತಜ್ಞರು ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‌ 253 ಪ್ರಕರಣಗಳಲ್ಲಿ 19 ಪ್ರಕರಣಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದವು. ಆದರೆ ಶೇ 98 ರಷ್ಟು ಪ್ರಕರಣಗಳಲ್ಲಿ ಕೋವಿಡ್ ಲಸಿಕೆ ಪಡೆದವರಾಗಿದ್ದರು.‌ ಕೊವಿಡ್ ಬಂದ ಒಂದು ವರ್ಷದಲ್ಲಿ ರಕ್ತನಾಳ ಬ್ಲಾಕೇಜ್ ಆಗೋ ಸಾಧ್ಯತೆ ಇದೆ. ಆದ್ರೆ ಮೂರು ವರ್ಷದ ನಂತರ ಅದರ ಪರಿಣಾಮ ಅಷ್ಟರ ಮಟ್ಟಿಗೆ ಇಲ್ಲ ಎಂಬುದು ತಜ್ಞರ ವರದಿಯಲ್ಲಿ ಹೇಳಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ತಜ್ಞರ ವರದಿಯ ಹಿನ್ನೆಲೆಯಲ್ಲಿ ಹೃದಯಾಘಾತಗಳನ್ನ ಆರಂಭದಲ್ಲೇ ಪತ್ತೆ ಹಚ್ಚಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಲವು ಮಹತ್ವದ ನಿರ್ಧಾರಗಳನ್ನ ಘೋಷಿಸಿದರು.

* ಸರ್ಕಾರಿ ಆಸ್ಪತ್ರೆಯ ಹೊರಗೆ ನಡೆಯುವ ಎಲ್ಲ ಹಠಾತ್ ಸಾವುಗಳನ್ನು ಅಧಿಸೂಚಿತ ಖಾಯಿಲೆ ಎಂದು ಪರಿಗಣಿಸಲು ನಿರ್ಧಾರ.

* ಆಸ್ಪತ್ರೆಯ ಹೊರಗೆ ನಡೆಯುವ ಎಲ್ಲ ಹಠಾತ್ ಸಾವುಗಳ ಡೆತ್ ಸರ್ಟಿಫಿಕೇಟ್ ಪಡೆಯಲು ಮರಣೋತ್ತರ ಪರೀಕ್ಷೆ ಕಡ್ಡಾಯ..

* 15 ವರ್ಷದ ಎಲ್ಲ ಶಾಲಾ ಮಕ್ಕಳನ್ನು ಹೃದಯ ತಪಾಸಣೆಗೆ ಒಳಪಡಿಸಲು ಪ್ಲಾನ್.

* ಪಠ್ಯ ಪುಸ್ತಕದಲ್ಲಿ ಶಾಲಾ ಮಕ್ಕಳಿಗೆ ಅಸಾಂಕ್ರಾಮಿಕ ರೋಗ, ಹೃದಯ circular ಅಳವಡಿಸಲು ಶಿಕ್ಷಣ ಇಲಾಖೆಗೆ ಮಾಹಿತಿ ಕಳುಹಿಸಲಾಗಿದೆ.

* ಹಠಾತ್ ಹೃದಯಘಾತಗಳ ಸಂದರ್ಭದಲ್ಲಿ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿರುವ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಣೆ.

* ಬಸ್ ಸ್ಟಾಂಡ್, ರೈಲ್ವೇ ನಿಲ್ದಾಣಗಳಲ್ಲಿ ಸ್ವಯಂ ಚಾಲಿತ AED ಯಂತ್ರಗಳನ್ನ ಇಡಲು ನಿರ್ಧಾರ. ಸಾರ್ವಜನಿಕರಿಗೆ ಸಿಪಿಆರ್ ತರಬೇತಿ ನೀಡಲು‌ ಯೋಜನೆ.

* ಸರ್ಕಾರ ಮಟ್ಟದಲ್ಲಿ ಸರ್ಕಾರಿ‌ ನೌಕಕರಿಗೆ, ಗುತ್ತಿಗೆ ನೌಕರರಿಗೆ ಹೃದಯ ತಪಾಸಣೆ, ಎ6 ಸ್ಕ್ರೀನಿಂಗ್ ಮಾಡಲು ನಿರ್ಧರಿಸಿದ್ದೇವೆ

* ಖಾಸಗಿ ಕಂಪನಿಗಳು, ಉದ್ದಿಮೆದಾರರು ತಮ್ಮ ಕಂಪನಿಗಳಲ್ಲಿ ಕಾರ್ಮಿಕರಿಗೆ ವಾರ್ಷಿಕ ಆರೋಗ್ಯ ತಪಾಸಣೆ ನಡೆಸಲು ಸಲಹೆ

ALERT: Attention public: If you experience chest pain or difficulty breathing seek immediate treatment!
Share. Facebook Twitter LinkedIn WhatsApp Email

Related Posts

‘ಜನಸಾಮಾನ್ಯರಿಗೆ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು’: KSLU ಕುಲಪತಿ ಪ್ರೊ.ಡಾ.ಸಿ.ಬಸವರಾಜು.

20/04/2026 2:23 PM1 Min Read

ರಣಬಿಸಲಿಗೆ ತತ್ತರಿಸಿದ ರಾಜ್ಯದ ಜನತೆ : ಕಲ್ಬುರ್ಗಿಯಲ್ಲಿ ಪೊಲೀಸ್ ಶ್ವಾನಗಳಿಗೆ ಏರ್ ಕೂಲರ್ ವ್ಯವಸ್ಥೆ ಸಿಬ್ಬಂದಿ!

20/04/2026 2:16 PM1 Min Read

ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರಕ್ಕೆ ಸಂಸದ ಡಾ.ಕೆ.ಸುಧಾಕರ್ ಮನವಿ

20/04/2026 2:14 PM2 Mins Read
Recent News

‘ಜನಸಾಮಾನ್ಯರಿಗೆ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು’: KSLU ಕುಲಪತಿ ಪ್ರೊ.ಡಾ.ಸಿ.ಬಸವರಾಜು.

20/04/2026 2:23 PM

ರಣಬಿಸಲಿಗೆ ತತ್ತರಿಸಿದ ರಾಜ್ಯದ ಜನತೆ : ಕಲ್ಬುರ್ಗಿಯಲ್ಲಿ ಪೊಲೀಸ್ ಶ್ವಾನಗಳಿಗೆ ಏರ್ ಕೂಲರ್ ವ್ಯವಸ್ಥೆ ಸಿಬ್ಬಂದಿ!

20/04/2026 2:16 PM

ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರಕ್ಕೆ ಸಂಸದ ಡಾ.ಕೆ.ಸುಧಾಕರ್ ಮನವಿ

20/04/2026 2:14 PM

BIG NEWS : ಚಿಕ್ಕಮಗಳೂರಲ್ಲಿ ಸಾಕು ನಾಯಿಗಳಿಂದ ಡೆಡ್ಲಿ ಅಟ್ಯಾಕ್ : 7 ವರ್ಷದ ಬಾಲಕನ ಸ್ಥಿತಿ ಗಂಭೀರ!

20/04/2026 2:01 PM
State News
KARNATAKA

‘ಜನಸಾಮಾನ್ಯರಿಗೆ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು’: KSLU ಕುಲಪತಿ ಪ್ರೊ.ಡಾ.ಸಿ.ಬಸವರಾಜು.

By kannadanewsnow0920/04/2026 2:23 PM KARNATAKA 1 Min Read

ಹುಬ್ಬಳ್ಳಿ: ಕಾನೂನು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು—ಶಿಕ್ಷಕರು, ಶಿಕ್ಷಕೇತರರು, ನ್ಯಾಯವಾದಿಗಳು ಹಾಗೂ ವಿದ್ಯಾರ್ಥಿಗಳು—ಜನಸಾಮಾನ್ಯರಲ್ಲಿ ಅವರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಅರಿವು ಮೂಡಿಸುವ…

ರಣಬಿಸಲಿಗೆ ತತ್ತರಿಸಿದ ರಾಜ್ಯದ ಜನತೆ : ಕಲ್ಬುರ್ಗಿಯಲ್ಲಿ ಪೊಲೀಸ್ ಶ್ವಾನಗಳಿಗೆ ಏರ್ ಕೂಲರ್ ವ್ಯವಸ್ಥೆ ಸಿಬ್ಬಂದಿ!

20/04/2026 2:16 PM

ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರಕ್ಕೆ ಸಂಸದ ಡಾ.ಕೆ.ಸುಧಾಕರ್ ಮನವಿ

20/04/2026 2:14 PM

BIG NEWS : ಚಿಕ್ಕಮಗಳೂರಲ್ಲಿ ಸಾಕು ನಾಯಿಗಳಿಂದ ಡೆಡ್ಲಿ ಅಟ್ಯಾಕ್ : 7 ವರ್ಷದ ಬಾಲಕನ ಸ್ಥಿತಿ ಗಂಭೀರ!

20/04/2026 2:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.