ನವದೆಹಲಿ: ಮತ್ತೆ ತಮಿಳುನಾಡಿನಿಂದ ಮೇಕೆದಾಟು ಯೋಜನೆ ( Mekedatu Project ) ಅನುಷ್ಠಾನಕ್ಕೆ ಕ್ಯಾತೆಯನ್ನು ತೆಗೆಯಲಾಗಿದೆ. ಕರ್ನಾಟಕದ ಪಟ್ಟಿಗೂ ಒಪ್ಪದಂತ ತಮಿಳುನಾಡು, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ( Cauvery River Water Management Authority ) ಸಭೆಯಲ್ಲೇ ಆಕ್ಷೇಪವನ್ನು ವ್ಯಕ್ತ ಪಡಿಸಿದೆ.
ಪೋಷಕರ ಕೈಯಲ್ಲಿನ ಮಗುವಿನ ಮೃತದೇಹ ಕಂಡು ಮರುಗಿದ ಮಾಜಿ ಸಿಎಂ HDK: ತುಮಕೂರು DHOಗೆ ಕರೆಮಾಡಿ ತರಾಟೆ
ಇಂದು ನವದೆಹಲಿಯಲ್ಲಿ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯುತ್ತಿತ್ತು. ಈ ಸಭೆಯಲ್ಲಿ ಕರ್ನಾಟಕದಿಂದ ಮೇಕೆದಾಟು ಯೋಜನೆಯ ಪ್ರಸ್ತಾಪವನ್ನು, ಯೋಜನೆ ಅನುಷ್ಠಾನದ ಬಗ್ಗೆ ಚರ್ಚೆಯನ್ನು ಆರಂಭಿಸಲಾಗಿತ್ತು. ಆದ್ರೇ ಈ ಚರ್ಚೆಗೆ ತಮಿಳುನಾಡು ಸಭೆಯಲ್ಲಿಯೇ ಆಕ್ಷೇಪ ವ್ಯಕ್ತ ಪಡಿಸಿದೆ ಎನ್ನಲಾಗಿದೆ.
ಮೇಕೆದಾಟು ಯೋಜನೆಯ ಚರ್ಚೆಗೆ ಒಪ್ಪದಂತ ತಮಿಳುನಾಡು, ಕಾವೇರಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಯೋಜನೆ ಬಗ್ಗೆ ಕಾವೇರಿ ನದಿ ನೀರು ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸದಂತೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ ಎಂದು ಹೇಳಲಾಗುತ್ತಿದೆ.
Job Alert: ತಾಲೂಕು ತಾಂತ್ರಿಕ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ
ಇನ್ನೂ ತಮಿಳುನಾಡಿನ ಆಕ್ಷೇಪದ ನಡುವೆಯೂ ಕರ್ನಾಟಕದಿಂದ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸೋದಕ್ಕೆ ಪಟ್ಟು ಹಿಡಿಯಲಾಗಿದೆ. ಆದ್ರೇ ತಮಿಳುನಾಡು ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರಿಂದಾಗಿ ಈ ಬಗ್ಗೆ ಇಂದಿನ ಕಾವೇರಿ ನದಿ ನೀರು ನಿರ್ವಹಣಾ ಸಭೆಯಲ್ಲಿ ಯಾವುದೇ ಚರ್ಚೆ ನಡೆಸಲಾಗಿಲ್ಲ ಎನ್ನಲಾಗಿದೆ.
ಪೋಷಕರ ಕೈಯಲ್ಲಿನ ಮಗುವಿನ ಮೃತದೇಹ ಕಂಡು ಮರುಗಿದ ಮಾಜಿ ಸಿಎಂ HDK: ತುಮಕೂರು DHOಗೆ ಕರೆಮಾಡಿ ತರಾಟೆ