ಕೆಎನ್ಎನ್ ಡಿಜಿಟಲ್ ಡೆಸ್ಕ್ : ಫ್ಲಿಪ್ಕಾರ್ಟ್ , ಅಮೆಜಾನ್ ನಂತಹ , ಇ-ಕಾಮರ್ಸ್ ಪ್ಲಾಟ್ಫಾರ್ಮ್ ಗಳಲ್ಲಿ ಆಡರ್ ಮಾಡಿದ ವಸ್ತುಗಳಿಂದ ಬೇರೊಂದು ವಸ್ತುಗಳನ್ನು ಪಡೆದಿರುವಂತಹ ಘಟನೆಗಳು ನಡೆದಿದೆ. ಇದೀಗ ಮಿಶೋ ಕೂಡ ಅದೇ ಸಾಲಿಗೆಡ ಸೇರಿದೆ.
BIG NEWS: ಮುರುಘಾ ಶ್ರೀಗಳ ಬಂಧನ: ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯನ್ನು ಉಪವಾಸಕ್ಕೆ ದೂಡಬಾರದು; ಹೈಕೋರ್ಟ್ ಸೂಚನೆ
ಬಿಹಾರದ ವ್ಯಕ್ತಿಯೊಬ್ಬರು ಮಿಶೋದಲ್ಲಿ ಡ್ರೋನ್ ಕ್ಯಾಮೆರಾವನ್ನು ಆರ್ಡರ್ ಮಾಡಿದ್ದರು ಆದರೆ ಪ್ಯಾಕೇಜ್ನಲ್ಲಿ ಒಂದು ಕಿಲೋ ಆಲೂಗಡ್ಡೆ ಪಡೆದಿದ್ದಾರೆ. ಅವರು ಘಟನೆಯನ್ನು ಸಹ ರೆಕಾರ್ಡ್ ಮಾಡಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ನಳಂದದ ಪರ್ವಾಲ್ಪುರದ ಉದ್ಯಮಿ ಚೇತನ್ ಕುಮಾರ್ ಅವರು ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ ಅದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ‘ಅನ್ ಸೀನ್ ಇಂಡಿಯಾ’ದಲ್ಲಿ ವೀಕ್ಷಿಸಲು ಲಭ್ಯವಿದೆ ಎಂದು ಶೀರ್ಷಿಕೆ ನೀಡಿದ್ದಾರೆ.
ರೆಕಾರ್ಡಿಂಗ್ ಮಾಡುವಾಗ, ಕುಮಾರ್ ಡೆಲಿವರಿ ಬಾಯ್ಗೆ ಸ್ಥಳದಲ್ಲೇ ಅನ್ಬಾಕ್ಸ್ ಮಾಡಲು ಹೇಳಿದರು. ಸ್ವಲ್ಪ ಸಮಯದ ನಂತರ, ಅದರಲ್ಲಿ ಆಲೂಗೆಡ್ಡಡ ತುಂಬಿದ ಬಾಕ್ಸ್ ಕಂಡು ಇಬ್ಬರು ದಬ್ಬಿಬ್ಬಾದರು.ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ಆನ್ಲೈನ್ ಶಾಪರ್ಗಳು ಆನ್ಲೈನ್ ಡೆಲಿವರಿ ದುರ್ಘಟನೆಗಳನ್ನು ಸ್ಕ್ಯಾಮ್ಗಳು ಎಂದು ಕರೆಯುವುದು ಇದೇ ಮೊದಲಲ್ಲ. ಖರೀದಿದಾರರು ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಪ್ಯಾಕೇಜ್ನಲ್ಲಿ ತರಕಾರಿಗಳು ಅಥವಾ ಕಲ್ಲುಗಳನ್ನು ಸ್ವೀಕರಿಸಿದ ಘಟನೆಗಳು ಈ ಹಿಂದೆ ಸಾಕಷ್ಟು ನಡೆದಿವೆ. ಉದಾಹರಣೆಗೆ, ಐಐಎಂನ ವಿದ್ಯಾರ್ಥಿಯೊಬ್ಬರು ಇತ್ತೀಚೆಗೆ ಫ್ಲಿಪ್ಕಾರ್ಟ್ ಅವರು ಆರ್ಡರ್ ಮಾಡಿದ ಲ್ಯಾಪ್ಟಾಪ್ ಬದಲಿಗೆ ಡಿಟರ್ಜೆಂಟ್ ಸೋಪ್ಗಳನ್ನು ವಿತರಿಸುತ್ತಿದ್ದಾರೆ ಎಂದು ಆರೋಪಿಸಿದರು. ಫ್ಲಿಪ್ಕಾರ್ಟ್ ಈ ಘಟನೆಯನ್ನು ಉದ್ದೇಶಿಸಿ ಗ್ರಾಹಕರ ಸುರಕ್ಷತೆಗಾಗಿ ಓಪನ್ ಬಾಕ್ಸ್ ಡೆಲಿವರಿ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದೆ. ಇದು ಗ್ರಾಹಕರಿಗೆ ಡೆಲಿವರಿ ಎಕ್ಸಿಕ್ಯೂಟಿವ್ ಮುಂದೆ ಬಾಕ್ಸ್ ತೆರೆಯಲು ಅನುಮತಿಸುತ್ತದೆ.
‘ಕಡ್ಲೆಕಾಯಿ, ಸೌತೆಕಾಯಿ ಮಾರುವವರ ವಿರುದ್ಧ ನಿಮ್ಮ ದೌರ್ಜನ್ಯ’ : ‘PFI’ ಬ್ಯಾನ್ ವಿಚಾರಕ್ಕೆ ಸಿಎಂ ಇಬ್ರಾಹಿಂ ವಾಗ್ಧಾಳಿ