ಚಿಕ್ಕಬಳ್ಳಾಪುರ : ಸಂತಾನ ಹರಣ ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರಿಂದ ಎಡವಟ್ಟು ಆರೋಪ ಕೇಳಿ ಬಂದಿದೆ. ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಸಾವನಪ್ಪಿದ್ದು ಆಸ್ಪತ್ರೆಯ ಮುಂದೆ ಬಾಣಂತಿಯ ಮೃತದೇಹ ಇಟ್ಟು ಇದೀಗ ಬಾಣಂತಿಯ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ
ಬಟ್ಲಹಳ್ಳಿಯ ನಿವಾಸಿ ಜಿಎನ್ ನರ್ಮದಾ (24) ಶವ ಬಿಟ್ಟು ಧರಣಿ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಳಳ್ಳಿ ನಿವಾಸಿಯಾಗಿದ್ದು ಎರಡು ಮಕ್ಕಳು ಆದ ಬಳಿಕ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ನರ್ಮದಾ ಒಳಗಾಗಿದ್ದರು.
ಶಸ್ತ್ರಚಿಕಿತ್ಸೆಯ ಬೆಳೆ ಆಕಸ್ಮಿಕವಾಗಿ ಸಣ್ಣ ಕರುಳನ್ನು ಕತ್ತರಿಸುವ ಆರೋಪ ಕೇಳಿ ಬಂದಿದೆ ಇನ್ಫೆಕ್ಷನ್ ಆಗಿ ಅನಾರೋಗ್ಯದಿಂದ ಚಿಕಿತ್ಸೆ ಫಲಿಸದೆ ಬಾಣಂತಿಗೆ ಸಾವನಪ್ಪಿದ್ದಾರೆ ಸ್ತ್ರೀರೋಗ ತಜ್ಞೆ ಡಾಕ್ಟರ್ ವಾಣಿ ರೆಡ್ಡಿ ವಿರುದ್ಧ ಎಡಬಟ್ಟು ಆರೋಪ ಕೇಳಿ ಬಂದಿದೆ. ವೈದ್ಯರ ವಿರುದ್ಧ ಬಾಣಂತಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








