ಜಿನೀವಾ (ಸ್ವಿಟ್ಜರ್ಲೆಂಡ್): ಕೊರೊನಾ ವೈರಸ್ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ ದಡಾರ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ʻದಡಾರʼದ ಅಪಾಯ ಗಣನೀಯವಾಗಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮತ್ತು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಬುಧವಾರ ತಿಳಿಸಿವೆ.
ದಡಾರವು ಅತ್ಯಂತ ಸಾಂಕ್ರಾಮಿಕ ವೈರಸ್ಗಳಲ್ಲಿ ಒಂದಾಗಿದೆ. ವ್ಯಾಕ್ಸಿನೇಷನ್ ಮೂಲಕ ಇದರಿಂದಾಗುವ ಸಾವಿನ ಅಪಾಯವನ್ನು ತಡೆಗಟ್ಟಬಹುದು. ಆದಾಗ್ಯೂ, ದಡಾರ ತಡೆಗಟ್ಟಲು 95 ಪ್ರತಿಶತದಷ್ಟು ವ್ಯಾಕ್ಸಿನೇಷನ್ ಕವರೇಜ್ ಅಗತ್ಯವಿದೆ. ʻ2021 ರಲ್ಲಿ ಸುಮಾರು 40 ಮಿಲಿಯನ್ ಮಕ್ಕಳು ದಡಾರ ಲಸಿಕೆ ಹಾಕಿಸಿಕೊಂಡಿಲ್ಲʼ ಎಂದು ಜಂಟಿ ವರದಿ ತಿಳಿಸಿದೆ.
ಪ್ರಪಂಚದ ಅತ್ಯಂತ ಸಾಂಕ್ರಾಮಿಕ ರೋಗಗಳಲ್ಲಿ ಒಂದಾದ ದಡಾರಕ್ಕೆ ಲಕ್ಷಾಂತರ ಮಕ್ಕಳು ಒಳಗಾಗುತ್ತಾರೆ. 2021 ರಲ್ಲಿ, ವಿಶ್ವದಾದ್ಯಂತ ಸುಮಾರು ಒಂಬತ್ತು ಮಿಲಿಯನ್ ದಡಾರ ಸೋಂಕುಗಳು ಮತ್ತು 128,000 ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
95% ಕ್ಕಿಂತ ಹೆಚ್ಚು ದಡಾರ ಸಾವುಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಂಭವಿಸುತ್ತವೆ. ಹೆಚ್ಚಾಗಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ಕಂಡುಬರುತ್ತದೆ. ದಡಾರಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ, ಅದರ ವಿರುದ್ಧ ಎರಡು-ಡೋಸ್ ಲಸಿಕೆ ತೀವ್ರ ಅನಾರೋಗ್ಯ ಮತ್ತು ಮರಣವನ್ನು ತಡೆಗಟ್ಟುವಲ್ಲಿ ಸುಮಾರು 97 ಪ್ರತಿಶತ ಪರಿಣಾಮಕಾರಿಯಾಗಿದೆ.
ಕರಾವಳಿಯಲ್ಲಿ ‘ಧರ್ಮ ದಂಗಲ್’ : ಕುಕ್ಕೆ ಷಷ್ಠಿ ಮಹೋತ್ಸವದಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ನಿಷೇಧ