ಸಿನಿಮಾ ಡೆಸ್ಕ್ : ಕಿರುತೆರೆ ಮೂಲಕ ಬಣ್ಣ ಹಚ್ಚಿದ ನಟಿ ಮಯೂರಿ ಸದ್ಯ ಬಿಗ್ ಬಾಸ್ (BIGG BOSS ) ಮನೆಯಿಂದ ಹೊರ ಬಂದಿದ್ದಾರೆ.
ಕೃಷ್ಣಲೀಲಾ, ಇಷ್ಟಕಾಮ್ಯ ಸಿನಿಮಾದ ಮೂಲಕ ಮನೆ ಮಾತಾದ ನಟಿ ಮಯೂರಿ ನಾಲ್ಕನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇದೀಗ ನಟಿ ಮಯೂರಿ ಬಿಗ್ ಬಾಸ್ ವಿನ್ನರ್ ಬಗ್ಗೆ ಮಾತನಾಡಿದ್ದಾರೆ. ಯಾರು ಗೆಲ್ಲಬೇಕು, ಯಾರು ಗೆಲ್ಲಬಹುದು ಎಂದು ಹೇಳಿದ್ದಾರೆ.
ಬಿಗ್ ಬಾಸ್ ನಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟ, ಆ ಮನೆಯಲ್ಲಿ ಪ್ರತಿಯೊಬ್ಬರಿಗೂ ಗೆಲ್ಲುವ ಅರ್ಹತೆ ಇದೆ, ಈ ಬಾರಿ ಪ್ರವೀಣರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಹೀಗಿರುವಾಗ ಯಾರು ಗೆಲ್ಲುತ್ತಾರೆ, ಯಾರು ಗೆಲ್ಲಲ್ಲ ಎಂದು ಹೇಳುವುದಕ್ಕೆ ಆಗಲ್ಲ, ಟಾಪ್ ಮೂರರಲ್ಲಿ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ ಇರುತ್ತಾರೆ. ಇವರು ಚೆನ್ನಾಗಿ ಮನರಂಜನೆ ನೀಡುತ್ತಾರೆ ಎಂದರು.
ಕನ್ನಡ ಧಾರಾವಾಹಿಗಳಲ್ಲಿ ಹೆಚ್ಚು ಜನಮನ್ನಣೆ ಗಳಿಸಿರುವ “ಅಶ್ವಿನಿ ನಕ್ಷತ್ರ” ಧಾರವಾಹಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಇವರು ಅದ್ಭುತವಾಗಿ ನಟಿಸಿದ್ದರು. ಹೀಗೆ ಮನೆ ಮಾತಾದ ಮಯೂರಿಗೆ ಕನ್ನಡ ಸಿನಿಮಾಗಳಲ್ಲಿ ನಟಿಸಲು ಅಹ್ವಾನಗಳು ಬಂದವು.ಕನ್ನಡದ “ಕೃಷ್ಣಲೀಲಾ” ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡ ಮಯೂರಿಗೆ ಕನ್ನಡಚಿತ್ರರಂಗದಲ್ಲಿ ಅಭೂತ ಪೂರ್ವ ಯಶಸ್ಸುಗಳಿಸಿತು. ಇದರಿಂದ ಇವರು ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡರು. ಕೃಷ್ಣಲೀಲಾ ಯಶಸ್ವಿ ನಂತರ ಇವರಿಗೆ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದ “ಇಷ್ಟಕಾಮ್ಯ” ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆ ಮದುವೆ ಆಗಿದ್ದ ಮಯೂರಿ ಮದುವೆ ಬಳಿಕ ನಟನೆಯಿಂದ ಕೊಂಚ ದೂರ ಉಳಿದಿದ್ದ ಮಯೂರಿ, ಬಿಗ್ ಬಾಸ್ ಗೆ ಪ್ರವೇಶ ಪಡೆದಿದ್ದಾರೆ.
ಒಂದಲ್ಲಾ, ಎರಡಲ್ಲ ವಾಟ್ಸಾಪ್’ನಲ್ಲಿ ಬರ್ತಿವೆ 5 ಅದ್ಭುತ ವೈಶಿಷ್ಟ್ಯ, ಹೇಗೆ ಕಾರ್ಯ ನಿರ್ವಹಿಸುತ್ವೆ ಗೊತ್ತಾ?
‘SSLC ವಾರ್ಷಿಕ ಪರೀಕ್ಷೆ ವೇಳಾಪಟ್ಟಿ’ ಮರು ಪರಿಷ್ಕರಿಸಿ: ‘ಪ್ರೌಢಶಾಲಾ ಸಹ ಶಿಕ್ಷಕರ ಸಂಘ’ದ ಮನವಿ