ನವದೆಹಲಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಕರಿಗೆ ಭಾರತೀಯ ರೈಲ್ವೆಯು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB) 2026ನೇ ಸಾಲಿನ ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಒಟ್ಟು 11,127 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆಯ ವಿವರಗಳು:
-
ಹುದ್ದೆಯ ಹೆಸರು: ಅಸಿಸ್ಟೆಂಟ್ ಲೋಕೋ ಪೈಲಟ್ (Assistant Loco Pilot – ALP)
-
ಒಟ್ಟು ಹುದ್ದೆಗಳು: 11,127
-
ವೇತನ ಶ್ರೇಣಿ: 7ನೇ ವೇತನ ಆಯೋಗದ ಅನ್ವಯ ಹಂತ-2 (Level-2), ಆರಂಭಿಕ ವೇತನ ₹19,900 ಜೊತೆಗೆ ಇತರೆ ಭತ್ಯೆಗಳು.
ವಲಯವಾರು ಪ್ರಮುಖ ಹುದ್ದೆಗಳ ಹಂಚಿಕೆ:
ವಿವಿಧ ರೈಲ್ವೆ ವಲಯಗಳಲ್ಲಿ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು, ಪ್ರಮುಖವಾಗಿ:
-
ದಕ್ಷಿಣ ಪಶ್ಚಿಮ ರೈಲ್ವೆ (ಹುಬ್ಬಳ್ಳಿ ವಲಯ): 200 ಹುದ್ದೆಗಳು
-
ದಕ್ಷಿಣ ರೈಲ್ವೆ: 250 ಹುದ್ದೆಗಳು
-
ದಕ್ಷಿಣ ಮಧ್ಯ ರೈಲ್ವೆ: 674 ಹುದ್ದೆಗಳು
-
ಪೂರ್ವ ಕರಾವಳಿ ರೈಲ್ವೆ: 1,625 ಹುದ್ದೆಗಳು
-
ಆಗ್ನೇಯ ರೈಲ್ವೆ: 1,531 ಹುದ್ದೆಗಳು
ಅರ್ಹತಾ ಮಾನದಂಡಗಳು:
1. ಶೈಕ್ಷಣಿಕ ಅರ್ಹತೆ:
-
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC/Matriculation) ಉತ್ತೀರ್ಣರಾಗಿರಬೇಕು.
-
ಜೊತೆಗೆ ಸಂಬಂಧಿತ ಟ್ರೇಡ್‌ಗಳಲ್ಲಿ (ಉದಾಹರಣೆಗೆ: ಫಿಟ್ಟರ್, ಎಲೆಕ್ಟ್ರಿಷಿಯನ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್, ಮೆಕ್ಯಾನಿಕ್ ರೇಡಿಯೋ ಮತ್ತು ಟಿವಿ, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಇತ್ಯಾದಿ) ITI ಅಥವಾ ಡಿಪ್ಲೊಮಾ ಅಥವಾ ಎಂಜಿನಿಯರಿಂಗ್ ಪದವಿ ಹೊಂದಿರಬೇಕು.
2. ವಯೋಮಿತಿ (01 ಜುಲೈ 2026ಕ್ಕೆ ಅನ್ವಯವಾಗುವಂತೆ):
-
ಕನಿಷ್ಠ ವಯಸ್ಸು: 18 ವರ್ಷಗಳು
-
ಗರಿಷ್ಠ ವಯಸ್ಸು: 30 ವರ್ಷಗಳು
-
(ಸರ್ಕಾರಿ ನಿಯಮದಂತೆ SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ).
ಪ್ರಮುಖ ದಿನಾಂಕಗಳು:
-
ಅರ್ಜಿ ಸಲ್ಲಿಕೆ ಆರಂಭ: 15 ಮೇ 2024
-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಜೂನ್ 2026 (ರಾತ್ರಿ 11:59 ರವರೆಗೆ)
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಐದು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
-
ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1)
-
ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-2)
-
ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (CBAT)
-
ದಾಖಲೆಗಳ ಪರಿಶೀಲನೆ (Document Verification)
-
ವೈದ್ಯಕೀಯ ಪರೀಕ್ಷೆ (Medical Examination – A1 Standard)
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್ www.rrbapply.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ, ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
BIG NEWS: ಸತತ 40 ವರ್ಷದಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳೆಲ್ಲರೂ ಅವಿವಾಹಿತರು: ಬ್ಯಾಚುಲರ್ ಸಿಎಂ ಲೀಸ್ಟ್ ಇಲ್ಲಿದೆ








