ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಬಿಜೆಪಿಯ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ಅವರು ಮೇ 9ರಂದು ರಾಜ್ಯದ 9ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ದಶಕಗಳ ಕಾಲ ನಡೆದ ಮಮತಾ ಬ್ಯಾನರ್ಜಿ ಅವರ ಆಡಳಿತಕ್ಕೆ ತೆರೆ ಬಿದ್ದಂತಾಗಿದೆ. ಆದರೇ ಸತತ 40 ವರ್ಷಗಳಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳೆಲ್ಲರೂ ಅವಿವಾಹಿತರೇ ಎಂಬುದು ವಿಶೇಷ. ಆ ಬಗ್ಗೆ ಮುಂದೆ ಸುದ್ದಿ ಓದಿ.
ಬಂಗಾಳದ ಆಡಳಿತ ಸಾರಥ್ಯ ವಹಿಸಿದ ಮುಖ್ಯಮಂತ್ರಿಗಳ ಪಟ್ಟಿ:
ರಾಜ್ಯದ ಮೊದಲ ಮುಖ್ಯಮಂತ್ರಿಯಿಂದ ಹಿಡಿದು ಇಂದಿನವರೆಗಿನ ಪ್ರಮುಖ ನಾಯಕರ ವಿವರ ಹೀಗಿದೆ:
-
ಬಿಧಾನ್ ಚಂದ್ರ ರಾಯ್: 1952 – 1962 (ರಾಜ್ಯದ ಮೊದಲ ಸಿಎಂ)
-
ಪ್ರಫುಲ್ಲ ಚಂದ್ರ ಸೇನ್: 1962 – 1967
-
ಅಜಯ್ ಮುಖರ್ಜಿ: 1967 – 1969 ಮತ್ತು 1969 – 1971
-
ಪ್ರಫುಲ್ಲ ಚಂದ್ರ ಘೋಷ್: 1967 – 1968
-
ಸಿದ್ಧಾರ್ಥ ಶಂಕರ್ ರಾಯ್: 1972 – 1977
-
ಜ್ಯೋತಿ ಬಸು: 1977 – 2000
-
ಬುದ್ಧದೇವ್ ಭಟ್ಟಾಚಾರ್ಯ: 2001 – 2011
-
ಮಮತಾ ಬ್ಯಾನರ್ಜಿ: 2011 – 2026
-
ಸುವೇಂದು ಅಧಿಕಾರಿ: 2026 ರಿಂದ…
40 ವರ್ಷಗಳಿಂದ ಬಂಗಾಳ ಆಳುತ್ತಿರುವವರು ‘ಅವಿವಾಹಿತರೇ’!
ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಒಂದು ಕುತೂಹಲಕಾರಿ ಸಂಪ್ರದಾಯ ಮುಂದುವರಿದಿದೆ. ಕಳೆದ ನಾಲ್ಕು ದಶಕಗಳಿಂದ (40 ವರ್ಷಗಳು) ರಾಜ್ಯವನ್ನು ಆಳಿದ ಮುಖ್ಯಮಂತ್ರಿಗಳೆಲ್ಲರೂ ಅವಿವಾಹಿತರು ಎಂಬುದು ವಿಶೇಷ.
ಆಸಕ್ತಿದಾಯಕ ಅಂಶಗಳು:
-
ಜ್ಯೋತಿ ಬಸು (1977-2000): ದೀರ್ಘಕಾಲ ಆಡಳಿತ ನಡೆಸಿದ ಇವರು ಅವಿವಾಹಿತರಾಗಿದ್ದರು.
-
ಬುದ್ಧದೇವ್ ಭಟ್ಟಾಚಾರ್ಯ (2000-2011): ಇವರೂ ಕೂಡ ಅವಿವಾಹಿತರೇ.
-
ಮಮತಾ ಬ್ಯಾನರ್ಜಿ (2011-2026): ಕಳೆದ 15 ವರ್ಷಗಳ ಕಾಲ ಆಡಳಿತ ನಡೆಸಿದ ದೀದಿ ಕೂಡ ಅವಿವಾಹಿತರು.
-
ಸುವೇಂದು ಅಧಿಕಾರಿ: ಈಗ ಅಧಿಕಾರಕ್ಕೇರಿರುವ ಸುವೇಂದು ಅವರು ಕೂಡ ಅವಿವಾಹಿತರಾಗಿದ್ದು, ಈ ಮೂಲಕ ರಾಜ್ಯವು ಮತ್ತೊಮ್ಮೆ ಅವಿವಾಹಿತರ ಆಡಳಿತಕ್ಕೊಳಪಟ್ಟಂತಾಗಿದೆ.
ಸತತ 40 ವರ್ಷಗಳಿಂದ ಬಂಗಾಳದ ಗದ್ದುಗೆಯನ್ನು ಬ್ಯಾಚುಲರ್ ನಾಯಕರೇ ಅಲಂಕರಿಸುತ್ತಿರುವುದು ಭಾರತೀಯ ರಾಜಕಾರಣದ ಅಪರೂಪದ ವಿದ್ಯಮಾನಗಳಲ್ಲಿ ಒಂದಾಗಿದೆ.
ತಮಿಳುನಾಡು ನೂತನ ಸಿಎಂ ವಿಜಯ್ ‘ಗ್ಯಾರಂಟಿ’ ಧಮಾಕಾ: ಮಹಿಳೆಯರಿಗೆ ವಿಶೇಷ ಪಡೆ, ವಿದ್ಯುತ್ ಫ್ರೀ








