ನವದೆಹಲಿ : ದೇಶಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಆರೋಗ್ಯ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್ ಸೋಂಕು ಸಂಪೂರ್ಣವಾಗಿ ಕಡಿಮೆಯಾಗದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ದೇಶದಲ್ಲಿ ಒಮಿಕ್ರಾನ್ ಹಾಗೂ ಕೊರೊನಾ ಸೋಂಕಿನ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ. ಮನ್ ಸುಖ್ ಮಾಂಡವೀಯಾ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಮಾಸ್ಕ್ ನಿರ್ಧಾರದೊಂದಿಗೆ ಸಭೆ ಮುಕ್ತಾಯಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ದೇಶದಲ್ಲಿ #Omicron ಮತ್ತು #COVID19 ಪರಿಸ್ಥಿತಿಯ ಹೊಸ ಉಪ-ರೂಪಾಂತರಗಳಿಂದಾಗಿ ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಭೆಯ ಅಧ್ಯಕ್ಷತೆ ವಹಿಸಿದರು. ಡಾ.ವಿ.ಕೆ.ಪಾಲ್, ಡಾ.ಎನ್.ಕೆ.ಅರೋರಾ, NTAGI, NEGVAC ಮತ್ತು ಇತರ ಹಿರಿಯ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊರೊನಾ ಸೋಂಕಿನ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದರನ್ವಯ ಸಾರ್ವಜನಿಕವಾಗಿ ಓಡಾಡುವಾಗ ಮೂಗು, ಬಾಯಿ ಪೂರ್ಣವಾಗಿ ಮುಚ್ಚುವಂತೆ ಬಟ್ಟೆ / ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸಿ ಆದೇಶ ಹೊರಡಿಸಿತ್ತು.
ಈ ಸೋಂಕು ರೋಗಿ ಕೆಮ್ಮಿದಾಗ ಅಥವಾ ಸೀನಿದಾದ ಹೊರ ಚೆಲ್ಲುವ ಹನಿಗಳ ಮೂಲಕ ಹರಡುತ್ತದೆ. ಈ ಹನಿಗಳು ನೆಲದ ಮೇಲೋ, ಅಥವಾ ಇನ್ಯಾವುದಾದರೂ ವಸ್ತುವಿನ ಮೇಲೋ ಬಿದ್ದಿರುತ್ತದೆ. ಅಂತಹ ವಸ್ತುವನ್ನು ಮುಟ್ಟಿದ ಕೈಯಿಂದಲೇ ಮೂಗು, ಕಣ್ಣು, ಬಾಯಿಯನ್ನು ಮುಟ್ಟಿದಾಗ ನಿಮಗೂ ಹರಡುತ್ತದೆ. ಆದ್ದರಿಂದ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಹಲವು ಕಾರಣಗಳಿಂದಾಗಿ ಕೋವಿಡ್-19ರ ಬಗ್ಗೆ ನಾವು ಕಾಳಜಿ ವಹಿಸಬೇಕಾಗಿದೆ. ಮೊದಲನೆಯದಾಗಿ, ಇದು ಒಬ್ಬರಿಂದ ಮತ್ತೊಬ್ಬ ವ್ಯಕ್ತಿಗೆ ಸುಲಭವಾಗಿ ಹರಡುವ ಸೋಂಕು. ಜೊತೆಗೆ ಇದು ಉಸಿರಾಟದ ತೊಂದರೆಯನ್ನು ಉಂಟು ಮಾಡುತ್ತದೆ. ಎರಡನೆಯದಾಗಿ, ಸೋಂಕು ತಗುಲಿದ ಕೆಲವರಿಗೆ ಇದು ಮಾರಕವಾಗಬಹುದು.
#UPDATE | The meeting concluded with the decision to continue masks and #COVID19-appropriate behaviour across the country: Official Sources https://t.co/K8muwYcgiE
— ANI (@ANI) October 18, 2022
ದೀನದಲಿತರಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
OMG : ಈ ವರ್ಷ ಮಾತ್ರ ಜನ ‘5.3 ಬಿಲಿಯನ್ ಸ್ಮಾರ್ಟ್ ಫೋನ್’ ಎಸೆದಿದ್ದರಂತೆ ; ಅದಕ್ಕಿದೆ ದೊಡ್ಡ ಕಾರಣ.!