ಬೆಂಗಳೂರು: ಮಾರ್ಸ್ ಆರ್ಬಿಟರ್ ಕ್ರಾಫ್ಟ್ ಗ್ರೌಂಡ್ ಸ್ಟೇಷನ್ನೊಂದಿಗೆ ಸಂಪರ್ಕ ಕಳೆದುಕೊಂಡಿದೆ, ಅದನ್ನು ಮರುಪಡೆಯಲು ಸಾಧ್ಯವಿಲ್ಲ ಮತ್ತು ಮಂಗಳಯಾನ ಮಿಷನ್ ಜೀವನದ ಅಂತ್ಯವನ್ನು ತಲುಪಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಸೋಮವಾರ ದೃಢಪಡಿಸಿದೆ.
ಮಾರ್ಸ್ ಆರ್ಬಿಟರ್ ಮಿಷನ್ ಮಂಗಳ ಗ್ರಹದ ಪರಿಭ್ರಮಣೆ ಆರಂಭಿಸಿದ 8 ವರ್ಷಗಳ ನಂತ್ರ ಅದರ ಅದರ ಬ್ಯಾಟರಿ ಹಾಗೂ ಇಂಧನ ಖಾಲಿಯಾಗಿದ್ದು ಕಾರ್ಯಾಚರಣೆ ನಿಲ್ಲಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
450 ಕೋಟಿ ರೂ. ವೆಚ್ಚದ ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ನವೆಂಬರ್ 5, 2013 ರಂದು PSLV-C25 ನಲ್ಲಿ ಉಡಾವಣೆ ಮಾಡಲಾಯಿತು ಮತ್ತು MOM ಬಾಹ್ಯಾಕಾಶ ನೌಕೆಯನ್ನು ಅದರ ಮೊದಲ ಪ್ರಯತ್ನದಲ್ಲಿ ಸೆಪ್ಟೆಂಬರ್ 24, 2014 ರಂದು ಯಶಸ್ವಿಯಾಗಿ ಮಂಗಳದ ಕಕ್ಷೆಗೆ ಸೇರಿಸಲಾಯಿತು. ಮೊದಲ ಪ್ರಯತ್ನದಲ್ಲೇ ಇಸ್ರೋ ಮಂಗಳ ಗ್ರಹದ ಕಕ್ಷೆಗೆ ಕಕ್ಷೆಗಾಮಿಯನ್ನು ಯಶಸ್ವಿಯಾಗಿ ಸೇರಿಸಿತ್ತು.
ಮಾರ್ಸ್ ಆರ್ಬಿಟರ್ ಕ್ರಾಫ್ಟ್ ಸುಮಾರು ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದೆ. ಇದನ್ನು ಕೇವಲ ಆರು ತಿಂಗಳ ಅವಧಿಗೆ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿತ್ತು. ಆದ್ರೆ, ಇದು ಅವಧಿಗೂ ಮೀರಿ ಕಾರ್ಯನಿರ್ವಹಿಸಿದೆ. ಇದು ತನ್ನ ಕೆಲಸವನ್ನು ಸಂಪೂರ್ಣವಾಗಿ ಹಾಗೂ ಸಮರ್ಥವಾಗಿ ಮಾಡಿದ್ದು, ಗಮನಾರ್ಹ ವೈಜ್ಞಾನಿಕ ಫಲಿತಾಂಶಗಳನ್ನು ನೀಡಿದೆ.
BREAKING NEWS : ಟಿವಿ, ವೆಬ್ಸೈಟ್ಗಳಲ್ಲಿ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡದಂತೆ ಕೇಂದ್ರ ಖಡಕ್ ಎಚ್ಚರಿಕೆ