ಶಿವಮೊಗ್ಗ: ಜಿಲ್ಲೆಯ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಮುಕ್ತಾಯದ ಬೆನ್ನಲ್ಲೇ, ಚುನಾವಣಾ ಪ್ರಕ್ರಿಯೆ ಗರಿಗೆದರಿದೆ. ನಾಮಪತ್ರ ಸಲ್ಲಿಕೆಗೆ ಇದೇ ಫೆಬ್ರವರಿ.26ಕ್ಕೆ ಕೊನೆಯ ದಿನವಾಗಿದ್ದರೇ, ಮಾರ್ಚ್.8ರಂದು ಮತದಾನ ನಡೆದು, ಅಂದೇ ಫಲಿತಾಂಶ ಘೋಷಣೆಯಾಗಲಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ಘೋಷಣೆಯಾಗಿತ್ತು. ಜಾತ್ರೆಯ ಹಿನ್ನಲೆಯಲ್ಲಿ ಕೊಂಚ ಚುನಾವಣಾ ಕಾವು ಏರಿರಲಿಲ್ಲ. ಇದೀಗ ಜಾತ್ರೆ ಮುಗಿದ ಬೆನ್ನಲ್ಲೇ ಚುನಾವಣೆ ರಂಗೇರಿದೆ. ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಫೆಬ್ರವರಿ.26, 2026 ನಾಮಪತ್ರ ಸಲ್ಲಿಸೋದಕ್ಕೆ ಕೊನೆಯ ದಿನವಾಗಿದೆ.
ಹೀಗಿದೆ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣಾ ವೇಳಾಪಟ್ಟಿ
- ದಿನಾಂಕ 26-02-2026ರಂದು ಗುರುವಾರ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ನಾಮಪತ್ರ ಸ್ವೀಕಾರಕ್ಕೆ ಕೊನೆ ದಿನ
- ದಿನಾಂಕ 27-02-2026ರಂದು ನಾಮಪತ್ರ ಪರಿಶೀಲನೆ
- ದಿನಾಂಕ 27-02-2026ರಂದು ನಾಮಪತ್ರ ಪರಿಶೀಲನೆ ಬಳಿಕ ಅಭ್ಯರ್ಥಿಗಳ ಪಟ್ಟಿ ಪ್ರಕಟ
- ದಿನಾಂಕ 28-02-2026ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ
- ದಿನಾಂಕ 28-02-2026ರಂದು ಸಂಜೆ 4 ಗಂಟೆಗೆ ಚಿಹ್ನೆ ಹಂಚಿಕೆ
- ದಿನಾಂಕ 2-03-2026ರಂದು ಸಂಜೆ 4 ಗಂಟೆಗೆ ಚಿಹ್ನೆ ಸಹಿತ ಕ್ರಮಬದ್ಧವಾಗಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟ
- ದಿನಾಂಕ 08-03-2026ರಂದು ಸಾಗರದ ವಿನೋಬ ನಗರದಲ್ಲಿರುವಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ.
- ದಿನಾಂಕ 8-03-2026ರಂದು ಮತದಾನದ ನಂತ್ರ ಮತಏಣಿಕೆ, ಫಲಿತಾಂಶ ಪ್ರಕಟ
ಅಂದಹಾಗೇ ಈ ಹಿಂದೆ ಹೈಕೋರ್ಟ್ ಚುನಾವಣೆಗೆ ನೀಡಿದ್ದಂತ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು. ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಸೋದಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಆದರೇ ಆದೇಶದ ಬಳಿಕ ಒಂದು ತಿಂಗಳ ಒಳಗಾಗಿ ಚುನಾವಣೆ ನಡೆಸಬೇಕಿದ್ದಂತ ಚುನಾವಣಾಧಿಕಾರಿಗಳು, ಕೋರ್ಟ್ ಆದೇಶ ಉಲ್ಲಂಘನೆ ಎನ್ನುವಂತೆ ಮುಂದುವರಿಕೆ ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು..

ದೈವ ನಿಂದನೆ ಪ್ರಕರಣದಲ್ಲಿ ‘ಬಾಲಿವುಡ್ ನಟ ರಣವೀರ್ ಸಿಂಗ್’ಗೆ ಪೊಲೀಸರು ಮತ್ತೊಂದು ನೋಟಿಸ್
ನಕಲಿ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚಕರಿಗೆ ಸಹಕರಿಸಿದ ಎಂಜಿನಿಯರ್ ವಿದ್ಯಾರ್ಥಿ ಸೇರಿ ಇಬ್ಬರು ಅರೆಸ್ಟ್








