ದಾವಣಗೆರೆ : ಮರಾಠ ಎಂದರೆ ಮುಸ್ಲಿಂ ವಿರೋಧಿಗಳು ಎಂದು ಯುವ ಜನತೆ ತಲೆಯಲ್ಲಿ ತುಂಬಿದೆ. ಯುವಜನಾಂಗ ಸ್ವಲ್ಪ ಶಾಂತ ಮನಸ್ಸಿನಿಂದ ಶಿವಾಜಿಯ ಬಗ್ಗೆ ಓದಬೇಕು ಶಿವಾಜಿ ಮಹಾರಾಜ ಮುಸ್ಲಿಂ ವಿರೋಧಿ ಅಲ್ಲ ಎಂದು ದಾವಣಗೆರೆಯಲ್ಲಿ ತುಳಜಾಭವಾನಿ ಭವನ ಉದ್ಘಾಟನಾ ಸಮಾರಂಭದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದರು.
ಬಹುತೇಕರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಚಾರ ಬಂದರೂ ನಂಬುತ್ತಾರೆ. ಶಿವಾಜಿ ಜೊತೆ ಯಾರಿದ್ದಾರೆಂದು ಕೆಲ ಮುಸ್ಲಿಂ ನಾಯಕರ ಹೆಸರನ್ನು ಸಂತೋಷ್ ಲಾಡ್ ಇದೆ ವೇಳೆ ತಿಳಿಸಿದರು.ಪ್ರತಿಯೊಬ್ಬರು ಇಂದು ಆಸ್ತಿ ಹಕ್ಕು ಪಡೆಯಲು ಕಾರಣ ಡಾ.ಅಂಬೇಡ್ಕರ್. ಬಿ.ಆರ್ ಅಂಬೇಡ್ಕರ್ ಒಂದು ಜಾತಿ ಸಮುದಾಯಕ್ಕೆ ಸೀಮಿತರಾದವರಲ್ಲ. ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಅಂಬೇಡ್ಕರ್ ಫೋಟೋ ಇಟ್ಟುಕೊಳ್ಳಬೇಕು ಎಂದು ದಾವಣಗೆರೆಯಲ್ಲಿ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಹೇಳಿಕೆ ನೀಡಿದರು.