ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ 72 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ(Mansukh Mandaviya) ಅವರು ಇಂದು ತಮ್ಮ ಜನ್ಮಸ್ಥಳ ಗುಜರಾತ್ನ ಪಾಲಿಟಾನಾದಿಂದ 40 ಕ್ಷಯರೋಗ (ಟಿಬಿ) ರೋಗಿಗಳನ್ನು ದತ್ತು ಪಡೆದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಂಡವಿಯಾ ಅವರು ಟಿಬಿ ರೋಗಿಗಳನ್ನು ದತ್ತು ತೆಗೆದುಕೊಳ್ಳುವಂತೆ ಜನರನ್ನು ಮನವಿ ಮಾಡಿದರು. ʻಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ನಾನು ನನ್ನ ಜನ್ಮಸ್ಥಳ ಪಾಲಿತಾನಾದಿಂದ 40 ಕ್ಷಯರೋಗಿಗಳನ್ನು ದತ್ತು ಪಡೆದಿದ್ದೇನೆ. ನಾವೆಲ್ಲರೂ ಮೋದಿಜಿಯವರ ಈ ಮಾನವೀಯತೆಯ ಸೇವಾ ಕಾರ್ಯಕ್ಕೆ ಕೈಜೋಡಿಸೋಣ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಟಿಬಿ ಮುಕ್ತ ಭಾರತವನ್ನು ನಿರ್ಮಿಸೋಣ. ನೀವೂ ಸಹ ಟಿಬಿ ರೋಗಿಗಳನ್ನು ದತ್ತು ತೆಗೆದುಕೊಳ್ಳಿʼ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ದೇಶಾದ್ಯಂತ ‘ರಕ್ತದಾನ ಅಮೃತ ಮಹೋತ್ಸವ’ದ ಅಂಗವಾಗಿ ರಕ್ತದಾನ ಮಾಡಲು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮನ್ಸುಖ್ ಮಾಂಡವಿಯಾ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು.
ಟಿಬಿ ಮುಕ್ತ ಭಾರತ( ಅಭಿಯಾನದ ಪ್ರಧಾನಮಂತ್ರಿಯವರ ದೃಷ್ಟಿಗೆ ಅನುಗುಣವಾಗಿ, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಪೌಷ್ಟಿಕಾಂಶದ ಬೆಂಬಲವನ್ನು ನೀಡುವ ಮೂಲಕ 35,000 ಕ್ಕೂ ಹೆಚ್ಚು ಕ್ಷಯರೋಗ (ಟಿಬಿ) ರೋಗಿಗಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದೆ.
“ಟಿಬಿ ಫ್ರೀ ವರ್ಕ್ಪ್ಲೇಸ್ ಕ್ಯಾಂಪೇನ್” ಉಪಕ್ರಮದ ಮೂಲಕ 2025 ರ ವೇಳೆಗೆ ಭಾರತದಿಂದ ಟಿಬಿಯನ್ನು ನಿರ್ಮೂಲನೆ ಮಾಡುವ ಸರ್ಕಾರದ ಪ್ರಯತ್ನದೊಂದಿಗೆ CII ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.
Shocking News : ಹಾಸನದಲ್ಲಿ ಮಹಿಳಾ ಪೊಲೀಸ್ ಪೇದೆಯನ್ನು ಕೊಂದು ನೇಣಿಗೆ ಶರಣಾದ ವ್ಯಕ್ತಿ
BREAKING NEWS : ನೇಪಾಳದಲ್ಲಿ ಭೂಕುಸಿತ : 13 ಜನರು ದುರ್ಮರಣ , 10 ಮಂದಿ ನಾಪತ್ತೆ