Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸ್ಥೂಲಕಾಯದ ಪುರುಷರಿಗೆ ಸಿಹಿ ಸುದ್ದಿ: ತೂಕ ಕಡಿಮೆ ಮಾಡಿಕೊಂಡರೆ ಸುಧಾರಿಸಲಿದೆ ಲೈಂಗಿಕ ಸಾಮರ್ಥ್ಯ | Weight loss improves sex life

ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಪ್ರಕಟ

ಬಿಸಿಲ ಬೇಗೆಯಿಂದ ಕಂಗಾಲಾದವರಿಗೆ ಸಿಹಿ ಸುದ್ದಿ: ಈ ಬಾರಿ ಮುಂಚಿತವಾಗಿಯೇ ಮಳೆಗಾಲ ಆರಂಭ; ವಾರಾಂತ್ಯಕ್ಕೆ ಅಂಡಮಾನ್‌ಗೆ ಮುಂಗಾರು ಪ್ರವೇಶ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಾವು, ಬಾಳೆ ಬೆಳೆಗಾರ ರೈತರ ಗಮನಕ್ಕೆ: ಸೂಕ್ಷ್ಮ ನೀರಾವರಿ ತಾಂತ್ರಿಕತೆ ಅಳವಡಿಕೆ, ನಿರ್ವಹಣೆ ತರಬೇತಿಗೆ ಅರ್ಜಿ ಆಹ್ವಾನ
KARNATAKA

ಮಾವು, ಬಾಳೆ ಬೆಳೆಗಾರ ರೈತರ ಗಮನಕ್ಕೆ: ಸೂಕ್ಷ್ಮ ನೀರಾವರಿ ತಾಂತ್ರಿಕತೆ ಅಳವಡಿಕೆ, ನಿರ್ವಹಣೆ ತರಬೇತಿಗೆ ಅರ್ಜಿ ಆಹ್ವಾನ

By ವಸಂತ ಬಿ ಈಶ್ವರಗೆರೆ

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಫೆ.05 ರಿಂದ 07 ರವರೆಗೆ ಜಿಲ್ಲೆಯ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕ್ರಮವಾಗಿ ದಾಳಿಂಬೆ, ಮಾವು ಹಾಗೂ ಬಾಳೆ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳ ಅಳವಡಿಕೆ ಮತ್ತು ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಫೆ.05ರಂದು ಬೆಳಿಗ್ಗೆ 10ಕ್ಕೆ ಬಬ್ಬೂರಿನ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ಡಾ. ಶ್ರೀಧರ್ ಅವರು ದಾಳಿಂಬೆ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು, ರೋಗಶಾಸ್ತ್ರಜ್ಞರಾದ ಡಾ, ಗುರುದೇವಿ ಅವರು ಈ ಬೆಳೆಯಲ್ಲಿ ಬರುವ ರೋಗಗಳ ನಿರ್ವಹಣೆ ಹಾಗೂ ಕೀಟಶಾಸ್ತ್ರಜ್ಞರಾದ ಡಾ.ತಾರಣಿ ಅವರು ದಾಳಿಂಬೆ ಬೆಳೆಯಲ್ಲಿ ಕೀಟಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡುವರು.

ಫೆ.06 ರಂದು ಬೆಳಿಗ್ಗೆ 10ಕ್ಕೆ ಬಬ್ಬೂರಿನ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ಡಾ. ಶ್ರೀಧರ್ ರವರು ಮಾವು ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು ಹಾಗೂ ಈ ಬೆಳೆಯಲ್ಲಿ ಬರುವ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿಯಾದ ಡಾ.ಟಿ.ರುದ್ರಮುನಿ ವಿಷಯ ಮಂಡನೆ ಮಾಡುವರು.

ಫೆ.07ರಂದು ಬೆಳಿಗ್ಗೆ 10ಕ್ಕೆ ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞರಾದ ಡಾ.ಪಿ.ಎಸ್. ಮಹಾಂತೇಶ್ ಅವರು ಬಾಳೆ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು ಹಾಗೂ ಈ ಬೆಳೆಯಲ್ಲಿ ಬರುವರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಬಬ್ಬೂರಿನ ತೋಟಗಾರಿಕೆ ಕಾಲೇಜಿನ ಹಿರಿಯ ಕ್ಷೇತ್ರ ಸಹಾಯಕರಾದ ಡಾ.ಜಿ.ಹನುಮಂತನಾಯಕ್ ವಿಷಯ ಮಂಡನೆ ಮಾಡುವರು.

ಮೂರು ದಿನಗಳಲ್ಲಿ ಸಹ ಬೆಂಗಳೂರಿನ ಜೈನ್ ಇರಿಗೇಷನ್ ಕಂಪನಿಯ ಕೆ.ದೇವರಾಜ್ ಅವರು ನೀರಿನ ಸಮರ್ಥ ಬಳಕೆ, ದಾಳಿಂಬೆ, ಮಾವು ಹಾಗೂ ಬಾಳೆ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆ ಮತ್ತು ಅವುಗಳ ನಿರ್ವಹಣೆಯ ಕುರಿತು ವಿಷಯ ಮಂಡನೆ ಮಾಡುವರು.

ಪ್ರತಿ ದಿನ ಆಸಕ್ತ ಚಿತ್ರದುರ್ಗ ಜಿಲ್ಲೆಯ 60 ಜನ ರೈತಭಾಂದವರು ಈ ತರಬೇತಿಯಲ್ಲಿ ಭಾಗವಹಿಸಲು 8277931058 ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರಾದ ಆರ್.ರಜನೀಕಾಂತ ತಿಳಿಸಿದ್ದಾರೆ.

ನೋಂದಾವಣಿ ಮಾಡಿಕೊಂಡ ರೈತಭಾಂದವರು ಫ್ರೂಟ್ಸ್ ಐಡಿ (ಎಫ್.ಐಡಿ) ಅಥವಾ ಚುನಾವಣೆ ಗುರುತಿನ ಚೀಟಿಯೊಂದಿಗೆ ತರಬೇತಿಗೆ ಹಾಜರಾಗಲು ವಿನಂತಿಸಿದೆ ಹಾಗೂ ಮೊದಲು ನೋಂದಾವಣಿ ಮಾಡಿಕೊಂಡ 60 ಜನ ರೈತಭಾಂದವರನ್ನು ತರಬೇತಿಗೆ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

BREAKING: ‘ನಳೀನ್ ಕುಮಾರ್ ಕಟೀಲ್’ಗೆ ಬಿಗ್ ರಿಲೀಫ್: FIR ಹೈಕೋರ್ಟ್ ರದ್ದು ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

BIG NEWS : ರಿಯಲ್ ಎಸ್ಟೇಟ್ ಗೆ ಅರಣ್ಯ ಭೂಮಿ ಮಾರಲು `HMT’ಗೆ ಬಿಡಬೇಕೆ : ಹೆಚ್.ಡಿ.ಕುಮಾರಸ್ವಾಮಿಗೆ ಸಚಿವ ಈಶ್ವರ ಖಂಡ್ರೆ ಪ್ರಶ್ನೆ

Share. Facebook Twitter LinkedIn WhatsApp Email

Related Posts

ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಪ್ರಕಟ

2 Mins Read

BIG ALERT: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಚಾರ್ಜ್ ಹಾಕಿ ಪಕ್ಕದಲ್ಲೇ ಮಲಗೋ ಮುನ್ನ ಎಚ್ಚರ! ಸ್ಪೋಟಗೊಂಡು ವ್ಯಕ್ತಿ ದುರ್ಮರಣ

1 Min Read

ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯ: ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಸಲಹೆ

2 Mins Read
Recent News

ಸ್ಥೂಲಕಾಯದ ಪುರುಷರಿಗೆ ಸಿಹಿ ಸುದ್ದಿ: ತೂಕ ಕಡಿಮೆ ಮಾಡಿಕೊಂಡರೆ ಸುಧಾರಿಸಲಿದೆ ಲೈಂಗಿಕ ಸಾಮರ್ಥ್ಯ | Weight loss improves sex life

ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಪ್ರಕಟ

ಬಿಸಿಲ ಬೇಗೆಯಿಂದ ಕಂಗಾಲಾದವರಿಗೆ ಸಿಹಿ ಸುದ್ದಿ: ಈ ಬಾರಿ ಮುಂಚಿತವಾಗಿಯೇ ಮಳೆಗಾಲ ಆರಂಭ; ವಾರಾಂತ್ಯಕ್ಕೆ ಅಂಡಮಾನ್‌ಗೆ ಮುಂಗಾರು ಪ್ರವೇಶ!

ಬ್ರಿಕ್ಸ್‌ ಶೃಂಗಸಭೆಗೆ ದೆಹಲಿ ಸಜ್ಜು: ಇರಾನ್‌ನ ಅರಾಗ್ಚಿ ಮತ್ತು ರಷ್ಯಾದ ಲಾವ್ರೊವ್ ಭಾರತಕ್ಕೆ ಆಗಮನ!

State News
KARNATAKA

ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಪ್ರಕಟ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಕರ್ನಾಟಕ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯು 2026ನೇ ಸಾಲಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳ…

BIG ALERT: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಚಾರ್ಜ್ ಹಾಕಿ ಪಕ್ಕದಲ್ಲೇ ಮಲಗೋ ಮುನ್ನ ಎಚ್ಚರ! ಸ್ಪೋಟಗೊಂಡು ವ್ಯಕ್ತಿ ದುರ್ಮರಣ

ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯ: ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಸಲಹೆ

ಸಾಗರ ಮಾರ್ಕೆಟ್ ರಸ್ತೆ ಅಗಲೀಕರಣ ಅನಿವಾರ್ಯ: ಜಾಗ ಬಿಟ್ಟುಕೊಡಲು ನಿವಾಸಿಗಳಿಗೆ ‘AC ವಿರೇಶ ಕುಮಾರ್’ ಮನವಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.