ದಕ್ಷಿಣಕನ್ನಡ : ಮಂಗಳೂರಿನ ಫಾಜಿಲ್ ಹತ್ಯೆ ಸಂಬಂಧಿಸಿ ಆರೋಪಿ ತನಿಖೆ ವಿಚಾರವಾಗಿ ಮಂಗಳೂರಿನ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರತಿಕ್ರಿಯೆ ನೀಡಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಶ್ರೀಘ್ರದಲ್ಲೇ ಕೊಲೆ ಆರೋಪಿಗಳನು ಬಂಧಿಸಲಾಗುವುದು. ಸೂಕ್ಷ್ಮ ಪರಿಸ್ಥಿತಿ ಹಿನ್ನೆಲೆ ಹೆಚ್ಚುವರಿ ಪೋಲೀಸರ ನಿಯೋಜನೆ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗಿದೆ. ಕಮೀಷನರೇಟ್ ವ್ಯಾಪ್ತಿಯಲ್ಲಿ 19ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ.
ಪ್ರತಿಚೆಕ್ ಪೋಸ್ಟ್ನಲ್ಲಿ 7ರಿಂದ 8 ಸಿಬ್ಬಂದಿ ಇರಲಿದ್ದಾರೆ. ಚೆಕ್ ಪೋಸ್ಟ್ನಲ್ಲಿ ಸಿಬ್ಬಂದಿ 24×7 ಕಾರ್ಯನಿರ್ವಹಿಸ್ತಾರೆ. ಭಯಹೋಗಲಾಡಿಸಲು ಪೊಲೀಸರಿಂದ ಪಥಸಂಚಲನ ನಡೆಸಲಾಗುವುದು. ಮಂಗಳೂರಿನ ಪೊಲೀಸ್ ಎನ್.ಶಶಿಕುಮಾರ್ ಪ್ರತಿಕ್ರಿಯೆ