ಮಂಗಳೂರು: ನಗರದಲ್ಲಿನ ಆಟೋವೊಂದರಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ಆಟೋ ಚಾಲಕ ಪುರುಷೋತ್ತಮ್ ಎಂಬುವರು ಗಾಯಗೊಂಡಿದ್ದಾರೆ. ಅವರ ಆರೋಗ್ಯದ ಬಗ್ಗೆ ಗಾಯಾಳು ಪುತ್ರಿ ಏನು ಹೇಳಿದಳು ಎನ್ನುವ ಬಗ್ಗೆ ಮುಂದೆ ಓದಿ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಆಟೋ ಚಾಲಕ ಪುರುಷೋತ್ತಮ್ ಅವರ ಪುತ್ರಿ ಮೇಘಶ್ರೀ ಅವರು, ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಘಟನೆಯಲ್ಲಿ ನಮ್ಮ ತಂದೆಯ ಮುಖ ಸ್ವಲ್ಪ ಊದಿಕೊಂಡಿದೆ. ಕೈಗೆ ಬ್ಯಾಂಡೇಜ್ ಅನ್ನು ವೈದ್ಯರು ಹಾಕಿ ಚಿಕಿತ್ಸೆ ನೀಡುತ್ತಿರೋದಾಗಿ ತಿಳಿಸಿದರು.
ನಮ್ಮ ತಂದೆ ಹಾರ್ಟ್ ಪೇಷಂಟ್ ಆಗಿದ್ದಾರೆ. ಎರಡು ವರ್ಷಗಳ ಹಿಂದೆ ಹಾರ್ಟ್ ಆಪರೇಷನ್ ಆಗಿತ್ತು. ಹೀಗಾಗಿ ನಮಗೆ ಸ್ವಲ್ಪ ಭಯ ಇದೆ ಎಂಬುದಾಗಿ ಗಾಯಾಳು ಆಟೋ ಚಾಲಕ ಪುರೋಷೋತ್ತಮ್ ಪುತ್ರಿ ಮೇಘಶ್ರೀ ಹೇಳಿದ್ದಾರೆ.