ಹಾಸನ : ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ದೇವರ ದಯೆಯಿಂದ ಈ ಘಟನೆ ತಕ್ಷಣ ಪತ್ತೆಯಾಯಿತು. ಇಲ್ಲವಾದರೆ ದೊಡ್ಡ ಅಪಘಾತ ಆಗುತ್ತಿತ್ತು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬರುವ ದಿನವೇ ಬ್ಲಾಸ್ಟ್. ಮಾಡಬೇಕೆಂದು ಪ್ಲಾನ್ ಆಗಿತ್ತು ಎನ್ನೋದು ನಮಗೆಲ್ಲಾ ಆಘಾತ ತಂದಿದೆ.ಈ ಘಟನೆ ಬಗ್ಗೆ ತಳಮಟ್ಟದಿಂದ ತನಿಖೆ ಆಗುತ್ತಿದೆ.ಇದರಲ್ಲಿ ಯಾರ್ಯಾರು ಭಾಗಿಯಾಗಿದಾರೆ, ಯಾರು ಆಶ್ರಯ ಕೊಟ್ಟಿದ್ದಾರೆ ಎಲ್ಲವನ್ನು ಪೊಲೀಸರು ಭೇದಿಸುತ್ತಾರೆ ಎಂದರು.
ಕೇಂದ್ರ ಹಾಗು ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಘಟನೆಯ ಹಿಂದೆ ಯಾವ ಸಂಸ್ಥೆ ಇದೆ ಅದನ್ನ ಮಟ್ಟಹಾಕೋ ಕೆಲಸ ಕೂಡ ಆಗಲಿದೆ ಎಂದ ಸಚಿವರು ಹೇಳಿದರು.