ಮಂಗಳೂರು: ನಿನ್ನೆ ನಗರದಲ್ಲಿ ನಡೆದಿದ್ದಂತ ಆಟೋದಲ್ಲಿನ ಸ್ಪೋಟಕ ಪ್ರಕರಣಕ್ಕೆ ಕ್ಷಣಕ್ಕೊಂದು ತಿರುಪು ಪಡೆಯುತ್ತಿದೆ. ಇದೀಗ ಈ ಬ್ಲಾಸ್ಟ್ ಕೇಸ್ ಸಂಬಂಧ ಶಂಕಿತ ಉಗ್ರನ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪೊಲೀಸ್ ಉನ್ನತ ಮೂಲಗಳಿಂಗ ಮಾಹಿತಿ ತಿಳಿದು ಬಂದಿದ್ದು, ಮಂಗಳೂರು ಸ್ಪೋಟಕ ಕೇಸ್ ನ ಶಂಕಿತ ವ್ಯಕ್ತಿ ಯೂನಸ್ ಖಾನ್ ಎಂದು ಹೇಳಲಾಗುತ್ತಿದೆ. ಈ ಮೊದಲು ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್ ದೊರೆತಿದ್ದ ಆತನ ಮತ್ತೊಂದು ಹೆಸರು ಯೂನಸ್ ಖಾನ್ ಎನ್ನಲಾಗುತ್ತಿದೆ.
ಕಾಂಗ್ರೆಸ್ ಆರೋಪ ಅವರಿಗೇ ತಿರುಗುಬಾಣವಾಗಲಿದೆ – ಸಿಎಂ ಬಸವರಾಜ ಬೊಮ್ಮಾಯಿ
ಆದ್ರೇ ಯೂನಸ್ ಖಾನ್ ಮಂಗಳೂರು ಆಟೋ ಬ್ಲಾಸ್ ಪ್ರಕರಣದ ಆರೋಪಿಯೋ, ಅದು ಆತನ ನಿಜವಾದ ಹೆಸರೋ ಅಥವಾ ಬೇರೆಯದ್ದೇ ಇದೆಯೋ ಎನ್ನುವ ಬಗ್ಗೆಯೂ ಮಂಗಳೂರು ಪೊಲೀಸರು ಎಲ್ಲಾ ಹಂತದಲ್ಲಿಯೂ ತನಿಖೆಯನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಖಚಿತ ಮಾಹಿತಿ ಲಭ್ಯವಾಗಬೇಕಿದೆ.