ಮಂಡ್ಯ : ಶಾಲೆ ಮುಗಿದ ನಂತರ ಮನೆಗೆ ತೆರಳದೇ ವಿದ್ಯಾರ್ಥಿಗಳಿಬ್ಬರು ನಾಪತ್ತೆಯಾಗಿರುವ ಘಟನೆ ಮದ್ದೂರು ಪಟ್ಟಣದ ಖಾಸಗೀ ಶಾಲೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮದ್ದೂರು ಪಟ್ಟಣದ ಶಿವಪುರದ ಕೊಪ್ಪ ಸರ್ಕಲ್ ಬಳಿ ಇರುವ ಪೂರ್ಣ ಪ್ರಜ್ಞಾ ಶಾಲೆಗೆ ಮಾದಾಪುರದೊಡ್ಡಿಯ ಎಂ.ಯು. ಶ್ರೇಯಸ್ ಗೌಡ ಹಾಗೂ ದೇಶಹಳ್ಳಿ ಗ್ರಾಮದ ಶರಣ್ ಪಟೇಲ್ ಎಂಬ ವಿದ್ಯಾರ್ಥಿಗಳು ಎಂದಿನಂತೆ ಶುಕ್ರವಾರ ಬೆಳಿಗ್ಗೆ ಶಾಲಾ ವಾಹನದಲ್ಲಿ ಬಂದು ಹಾಜರಾಗಿದ್ದಾರೆ.
ಸಂಜೆವರೆಗೂ ಶಾಲೆಯಲ್ಲೇ ಹಾಜರಿದ್ದ ವಿದ್ಯಾರ್ಥಿಗಳು ಶಾಲೆ ಮುಗಿದ ನಂತರ ಮನೆಗೆ ತೆರಳಲು ಶಾಲಾ ವಾಹನವನ್ನು ಹತ್ತಲು ಕ್ರೀಡಾಂಗಣದ ಬಳಿ ಆಗಮಿಸಿ, ವಾಹನ ಚಾಲಕನಿಗೆ ಅಂಗಡಿ ಹೋಗಿ ತಿಂಡಿ ತಿನಿಸುಗಳನ್ನು ತರುವುದಾಗಿ ಹೋದ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.
ಇನ್ನು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಶಾಲಾ ಅಕ್ಕ ಪಕ್ಕದಲ್ಲಿ ಸಾಕಷ್ಟು ಹುಡುಕಾಡಿದರು ಸಹ ವಿದ್ಯಾರ್ಥಿಗಳ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನಲೆಯಲ್ಲಿ ಕೊನೆಗೆ ಶಾಲಾ ಆಡಳಿತ ಮಂಡಳಿ ಮದ್ದೂರು ಪೋಲೀಸ್ ಠಾಣೆಗೆ ತೆರಳಿ ನಾಪತ್ತೆಯಾದ ವಿದ್ಯಾರ್ಥಿಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ವಿದ್ಯಾರ್ಥಿಗಳ ಪತ್ತೆಗೆ ಕ್ರಮ ವಹಿಸಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ