ಮಂಡ್ಯ : ಈಗಾಗಲೇ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಣಪತಿ ವಿಸರ್ಜನೆ ವೇಳೆ ನಡೆದ ಗಲಭೆ ರಾಜ್ಯಾದ್ಯಂತ ಸುದ್ದಿಯಾಗುತ್ತಿರುವ ಬೆನ್ನಲ್ಲೇ, ಇದೀಗ ಪೊಲೀಸ್ ಅಧಿಕಾರಿಯ ನವವಿವಾಹಿತ ಮಗಳು ಡೆತ್ ನೋಟ್ ಬರೆದಿಟ್ಟು, ಮೊಬೈಲ್ ಫೋನ್, ಮಾಂಗಲ್ಯ ಸರವನ್ನು ಬಿಚ್ಚಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಹೌದು ಜಿಲ್ಲೆಯ ಶಂಕರ ನಗರದಮಹಿಳಾ ಠಾಣೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI) ಮಗಳು ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾಳೆ. ನಾಪತ್ತೆ ಆಗಿರುವ ಗೃಹಿಣಿಯನ್ನು ಅನುಷಾ (24) ಎಂದು ಹೇಳಲಾಗಿದೆ. ಇವರನ್ನು ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಬೆಂಗಳೂರಿನ ಬಿದರಹಳ್ಳಿ ನಿವಾಸ್ ದಿನೇಶ್ ಕುಮಾರ್ ಜೊತೆ ವಿವಾಹ ಮಾಡಿಕೊಡಲಾಗಿತ್ತು.
ಆದರೆ ಗಂಡನ ಮನೆಯವರು ಅನುಷಾಗೆ ಕಿರುಕುಳ ನೀಡುತ್ತಿದ್ದರು.
ಪತಿಯ ಕಿರುಕುಳಕ್ಕೆ ಬೇಸತ್ತ ಅನುಷಾ, ಗಂಡ ದಿನೇಶ್, ನಾದಿನಿ ರಂಜಿನಿ, ಭಾವ ರಾಜೇಶ್ ಹಾಗೂ ಅತ್ತೆ ಕಾಂತಮ್ಮ ನನ್ನ ಸಾವಿಗೆ ಕಾರಣರೆಂದು ಡೆತ್‌ನೋಟ್ ಬೆದಿಟ್ಟಿದ್ದಾರೆ. ಇನ್ನು ಡೆತ್ ನೋಟ್ ಪಕ್ಕದಲ್ಲಿ ತಾನು ಬಳಸುತ್ತಿದ್ದ ಮೊಬೈಲ್ ಹಾಗೂ ಗಂಡ ಕಟ್ಟಿದ್ದ ತಾಳಿಯನ್ನು ಬಿಚ್ಚಿಟ್ಟು ಮನೆಯಿಂದ ನಾಪತ್ತೆ ಆಗಿದ್ದಾರೆ. ಘಟನೆಯ ಪೂರ್ವ ಪೊಲೀಸ್ ಠಾಣೆಯಲ್ಲಿ ನಡೆದಿದ್ದು ಹಿಂದುಗಳಿಗೆ ಡೆತ್ ನೋಟ್ ಸಿಕ್ಕಿದೆ. ಹಾಗಾಗಿ ಎಲ್ಲಾದರೂ ಅನುಷಾ ಸಿಕ್ಕರೆ ಕೊಡಲಿ ಮಾಹಿತಿ ನೀಡಿ ಎಂದು ಮಂಡ್ಯ ಪೊಲೀಸ್ ಠಾಣೆಗೆ ಮನವಿ ಮಾಡಲಾಗಿದೆ.