ಮಂಡ್ಯ: ರಾಜ್ಯ ಮತ್ತು ಅಂತರಾಜ್ಯದಲ್ಲಿ ದ್ವಿಚಕ್ರ ವಾಹನಗಳನ್ನು ಕಳುವು ಮಾಡಿದ್ದ ಖದೀಮನೊರ್ವನನ್ನು ಬಂಧಿಸಿರುವ ಮದ್ದೂರು ಅಪರಾಧ ವಿಭಾಗದ ಪೋಲೀಸರ ತಂಡ ಲಕ್ಷಾಂತರ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ದ್ವಿಚಕ್ರ ವಾಹನಗಳ ಎರಡನೇ ಕಳವು ಪ್ರಕರಣಗಳನ್ನು ಭೇದಿಸಿರುವ ಪೋಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ವಡ್ಡರ ಪಾಳ್ಯ ಗ್ರಾಮದ ಸಿದ್ದಪ್ಪಾಜಿ ಪುತ್ರ ಎಸ್.ರಾಜೇಶ್ ಅಲಿಯಾಸ್ ಕುಳ್ಳ ( 32) ಬಂಧಿತ ಆರೋಪಿಯಾಗಿದ್ದಾನೆ.
‘ಜೆಡಿಎಸ್’ ನೂರು ಸೀಟು ದಾಟಲ್ಲ, ಇನ್ನೆಲ್ಲಿ ಮುಸ್ಲಿಮರನ್ನು ಸಿಎಂ ಮಾಡ್ತಾರೆ : ಹೆಚ್ಡಿಕೆಗೆ ಜಮೀರ್ ತಿರುಗೇಟು
ಈತನಿಂದ ತಮಿಳುನಾಡಿನ ಸತ್ಯಮಂಗಲ, ತೆಂಕಾಶಿ, ಪೆರುಂದರಂ ಹಾಗೂ ಕರ್ನಾಟಕದ ಚಾಮರಾಜನಗರ, ಮೈಸೂರು, ಮಂಡ್ಯ, ಕೊಳ್ಳೆಗಾಲ, ಯಳಂದೂರು, ಟಿ.ನರಸೀಪುರ, ಶ್ರೀರಂಗಪಟ್ಟಣ, ಮಳವಳ್ಳಿಯ ಹುಸ್ಕೂರು ಅಲ್ಲದೇ, ಮದ್ದೂರಿನ ವಿ.ವಿ ನಗರ ಬಡಾವಣೆ ಹಾಗೂ ಉಪ್ಪಾರದೊಡ್ಡಿ ಗ್ರಾಮಗಳಲ್ಲಿ ನಕಲಿ ಕೀ ಬಳಸಿ ಕಳವು ಮಾಡಿದ್ದ 16 ಲಕ್ಷದ 40 ಸಾವಿರ ಮೌಲ್ಯದ ವಿವಿಧ ಮಾದರಿಯ 34 ದ್ವಿಚಕ್ರ ವಾಹನಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್ ಪ್ರಕರಣ ಕುರಿತು ಸುದ್ದಿಗಾರರಿಗೆ ವಿವರ ನೀಡಿದರು.
ಆರೋಪಿ ರಾಜೇಶ್ ಕಳೆದ ನ.25 ರಂದು ಬೆಂಗಳೂರು – ಮೈಸೂರು ಹೆದ್ದಾರಿಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿಯ ಕಾಫಿ ಡೇ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಒಂದನ್ನು ಅನುಮಾನಾಸ್ಪದವಾಗಿ ಪೆಟ್ರೋಲ್ ಬಂಕ್ ಕಡೆಗೆ ತಳ್ಳಿಕೊಂಡು ಹೋಗುತ್ತಿದ್ದನು.
ಹವಾಮಾನ ವೈಪರೀತ್ಯ ನಿರೋಧಕ ರಾಜ್ಯವಾಗಿ ಕರ್ನಾಟಕ: ವಿಶ್ವಬ್ಯಾಂಕ್ ನೊಂದಿಗೆ ಸಿಎಂ ಬೊಮ್ಮಾಯಿ ಚರ್ಚೆ
ಈ ವೇಳೆ ಗಸ್ತಿನಲ್ಲಿದ್ದ ಅಪರಾಧ ವಿಭಾಗದ ಹೆಚ್.ಕೆ.ಗುರುಪ್ರಸಾದ್ ಹಾಗೂ ಪರಮಾನಂದ ಬೂದಿಹಾಳ್ ಅವರುಗಳು ರಾಜೇಶ್ ನನ್ನು ತಡೆದು ವಿಚಾರಣೆ ಮಾಡುವಾಗ ಬೈಕ್ ನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಲು ಪ್ರಯತ್ನಿಸಿದ್ದಾನೆ.
ನಂತರ ಆತನನ್ನು ವಶಕ್ಕೆ ತೆಗೆದುಕೊಂಡು ಬೈಕ್ ಗಳ ದಾಖಲಾತಿ ನೀಡುವಂತೆ ಕೇಳಿದಾಗ ಸಮಂಜಸವಾದ ಉತ್ತರ ನೀಡಲು ವಿಫಲನಾಗಿದ್ದಾನೆ. ಬಳಿಕ ಬೈಕ್ ಸಮೇತ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದಾಗ ಇಡೀ ಬೈಕ್ ಕಳವು ಪ್ರಕರಣ ಬಯಲಿಗೆ ಬಂದಿದೆ.
ಜಿಲ್ಲಾ ಪೋಲಿಸ್ ಅಧೀಕ್ಷಕ ಎನ್.ಯತೀಶ್, ಎಎಸ್ಪಿ ವೇಣುಗೋಪಾಲ್, ಡಿವೈಎಸ್ಪಿ ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ಮದ್ದೂರು ಠಾಣೆಯ ಇನ್ಸ್ಪೆಕ್ಟರ್ ಎಸ್.ಸಂತೋಷ್, ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಗಳಾದ ನರೇಶ್ ಕುಮಾರ್, ಆರ್.ಬಿ.ಉಮೇಶ್, ಪಿ.ರವಿ ಸಿಬ್ಬಂದಿಗಳಾದ ಗುರು ಪ್ರಸಾದ್, ಗಿರೀಶ್, ಪರಮಾನಂದ ಬೂದಿಹಾಳ್ ಅವರುಗಳು ಇಡೀ ಪ್ರಕರಣವನ್ನು ಭೇದಿಸುವುದರೊಂದಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಸಫಲವಾಗಿದ್ದಾರೆ.
ಇನ್ನು ಪ್ರಕರಣ ಭೇದಿಸಿದ ತಂಡವನ್ನು ಪೋಲೀಸ್ ಅಧೀಕ್ಷಕ ಎನ್.ಯತೀಶ್ ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ