ಮಂಡ್ಯ: ನಕಲಿ ಪದವಿ ಪ್ರಮಾಣ ಪತ್ರ ನೀಡಿ ಮುಂಬಡ್ತಿ ಪಡೆದಿದ್ದ ಮಂಡ್ಯ ಜಿಲ್ಲಾ ಪಂಚಾಯಿತಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಕೆ. ಪಿ. ಪವನ್ ಕುಮಾರ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಸರ್ಕಾರದಿಂದ ಆದೇಶ ಹೊರಡಿಸಿದೆ. ಈ ಮೂಲಕ ನಕಲಿ ಪದವಿ ಪ್ರಮಾಣ ಪತ್ರ ನೀಡಿ, ಮುಂಬಡ್ತಿಗೆ ಯತ್ನಿಸಿದಂತ ಅಧಿಕಾರಿಗೆ ಬಿಗ್ ಶಾಕ್ ನೀಡಲಾಗಿದೆ.
ಮಂಡ್ಯ ಜಿಲ್ಲಾ ಪಂಚಾಯ್ತಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿಯಾಗಿದ್ದಂತ ಕೆ ಪಿ ಪವನ್ ಕುಮಾರ್ ಅವರು, ಮುಂಬಡ್ತಿ ಪಡೆಯಲು ಸರ್ಕಾರಕ್ಕೆ ತಮಿಳುನಾಡು ವಿಶ್ವವಿದ್ಯಾನಿಲಯದ ಹೆಸರಿನಲ್ಲಿ ಪದವಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ಈ ಪತ್ರ ಪರಿಶೀಲಿಸಿದಾಗ ಇವು ನಕಲಿ ಪ್ರಮಾಣ ಪತ್ರಗಳು ಎಂಬುದಾಗಿ ತಿಳಿದು ಬಂದಿತ್ತು.
ಗೋವುಗಳ ಸಂಖ್ಯೆ ಅಭಿವೃದ್ಧಿಯಾಗುವ ಬದಲು ಕ್ಷೀಣಿಸುತ್ತಿರುವುದೇಕೆ? ಇದೇನಾ ಬಿಜೆಪಿ ಗೋರಕ್ಷಣೆ? – ಕಾಂಗ್ರೆಸ್ ಪ್ರಶ್ನೆ
ಈ ಬಗ್ಗೆ ಮಂಡ್ಯದ ಸಾಮಾಜಿಕ ಕಾರ್ಯಕರ್ತ ಕೆ ಆರ್ ರವೀಂದ್ರ ನೀಡಿದ್ದ ದೂರಿನ ಮೇರೆಗೆ ರಾಜ್ಯ ಸರ್ಕಾರ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ತನಿಖೆಗಾಗಿ ಸರ್ಕಾರ ನೇಮಿಸಿತ್ತು. ತನಿಖೆ ನಡೆಯುತ್ತಿರುವಾಗಲೇ ನಕಲಿ ಪದವಿ ನೀಡಿದ್ದ 13 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಆರೋಪ ಸಾಬೀತು ಪಟ್ಟ ನಾಲ್ವರು ಅಧಿಕಾರಿಗಳನ್ನು ಈಗಾಗಲೇ ಕೆಲಸದಿಂದಲೇ ರಾಜ್ಯ ಸರ್ಕಾರ ವಜಾಗೊಳಿಸಿದೆ.
ವರದಿ: ಗಿರೀಶ್ ರಾಜ್, ಮಂಡ್ಯ