ಮಂಡ್ಯ: ಆರ್ಕೇಸ್ಟ್ರಾದಲ್ಲಿ ಫ್ಲೆಕ್ಸ್ ಹಾಕಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಜಗಳದಲ್ಲಿ ಯುವಕನನ್ನು ಆತನ ಸ್ನೇಹಿತರೇ ಹೊಡೆದು ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ‘ತುಂತುರು ಮಳೆ’ : ‘ಹವಾಮಾನ ಇಲಾಖೆ’ ಮುನ್ಸೂಚನೆ
22 ವರ್ಷದ ಅರುಣ್ ಮೃತ ದುರ್ದೈವಿ. ಈತ ತನ್ನ 18ನೇ ವಯಸ್ಸಿನಲ್ಲೇ ಪೊಲೀಸ್ರ ರೌಡಿಶೀಟರ್ನ ಲಿಸ್ಟ್ನಲ್ಲಿ ಸೇರಿಕೊಂಡಿದ್ದ. ಆಗಾಗ ಊರಿನಲ್ಲಿ ನಡೆಯುತ್ತಿದ್ದ ಸಣ್ಣ-ಪುಟ್ಟ ಗಲಾಟೆಯಲ್ಲಿ ಭಾಗಿಯಾಗುತ್ತಿದ್ದ. ಇದೀಗ ಜೊತೆಯಲ್ಲಿ ಇದ್ದವರೇ ಆತನನ್ನು ಹೊಡೆದು ಕೊಲೆ ಗೈದಿದ್ದಾರೆ.
ಅರುಣ್ ಕೊಲೆಗೆ ಇದೇ ತಿಂಗಳ 19 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಆರ್ಕೇಸ್ಟ್ರಾ ಹಾಕಲು ಮುಂದಾಗಿದ್ದ. ಅರುಣ್ ಹಾಗೂ ಆತನ ಸ್ನೇಹಿತರು ಈ ಹಿಂದೆ ಶಾಸಕ ಡಿಸಿ ತಮ್ಮಣ್ಣ ಅವರ ಬೆಂಬಲಿಗರಾಗಿದ್ದರು.
ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ‘ತುಂತುರು ಮಳೆ’ : ‘ಹವಾಮಾನ ಇಲಾಖೆ’ ಮುನ್ಸೂಚನೆ
ಆದರೆ ಕನ್ನಡ ರಾಜ್ಯೋತ್ಸವದ ಆರ್ಕೇಸ್ಟ್ರಾದಲ್ಲಿ ದೊಡ್ಡರಸಿನಕೆರೆ ಗ್ರಾಮದಲ್ಲಿ ಸಮಾಜ ಸೇವಕ ಕದಲೂರು ಉದಯ್ ಅವರ ಫ್ಲೆಕ್ಸ್ ಮಾತ್ರ ಹಾಕಿದ್ದಾರೆ. ಈ ಬಗ್ಗೆ ಅರುಣ್ ಸ್ನೇಹಿತರೊಂದಿಗೆ ಇಷ್ಟು ದಿನ ನೀವು ತಮ್ಮಣ್ಣ ಜೊತೆಗೆ ಇದ್ದು ಈಗ ಉದಯ್ ಫೋಟೋ ಹಾಕಿಸಿದ್ದೀರಾ ಎಂದು ಮಾತನಾಡಿದ್ದಾನೆ. ಇದೇ ಜಗಳ ನಡೆದು ಅರುಣ್ನನ್ನು ದೊಡ್ಡರಸಿನಕೆರೆ ಗ್ರಾಮದ ದೊಡ್ಡಯ್ಯ, ದೇವರಾಜು, ಅಭಿ, ಗಜ, ಬೆಳ್ಳಾ ರಾಘುಳಿ ಸೇರಿದಂತೆ 8 ಮಂದಿ ನನ್ನ ಮಗನನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಅರಣ್ ತಂದೆ ರಮೇಶ್ ಆರೋಪಿಸಿದ್ದಾರೆ.